Viral News: 1998 ರ ನಂತರ ಮೊದಲ ಬಾರಿಗೆ ಯುಎಸ್ ಮೃಗಾಲಯದಲ್ಲಿ ಅಳಿವಿನಂಚಿನಲ್ಲಿದ್ದ ಸುಮಾತ್ರನ್ ಹುಲಿಗಳ ಜನನ!

ಪ್ರೀತಿ ಭಟ್​, ಗುಣವಂತೆ

| Edited By: Akshatha Vorkady

Updated on:May 25, 2023 | 3:39 PM

7 ವರ್ಷದ ಸುಮಾತ್ರನ್ ಹುಲಿ ಡಾರಿ, ತನ್ನ ಮರಿಗಳಿಗೆ ಜನ್ಮ ನೀಡಿತ್ತಿರುವ ದೃಶ್ಯವನ್ನು ಮೆಂಫಿಸ್ ಮೃಗಾಲಯದ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಮರಿಗಳನ್ನು ಖುಷಿಯಿಂದ ಸ್ವಾಗತಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Viral News: 1998 ರ ನಂತರ ಮೊದಲ ಬಾರಿಗೆ ಯುಎಸ್ ಮೃಗಾಲಯದಲ್ಲಿ ಅಳಿವಿನಂಚಿನಲ್ಲಿದ್ದ ಸುಮಾತ್ರನ್ ಹುಲಿಗಳ ಜನನ!
ಅಳಿವಿನಂಚಿನಲ್ಲಿದ್ದ ಸುಮಾತ್ರನ್ ಹುಲಿಗಳ ಜನನ
Image Credit source: NDTV

Follow us on

ಅಮೆರಿಕದ ಮೆಂಫಿಸ್ ಮೃಗಾಲಯವು ಈ ತಿಂಗಳ ಆರಂಭದಲ್ಲಿ ಅಳಿವಿನಂಚಿನಲ್ಲಿರುವ ಎರಡು ಸುಮಾತ್ರನ್ ಹುಲಿ ಮರಿಗಳ ಜನನವನ್ನು ಸ್ವಾಗತಿಸಿದೆ. 7 ವರ್ಷದ ಸುಮಾತ್ರನ್ ಹುಲಿ ಡಾರಿ, ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಮೃಗಾಲಯ ತಿಳಿಸಿದೆ. ಇದು ಇಲ್ಲಿಯ ಜನತೆಗೆ ತುಂಬಾ ಖುಷಿಕೊಟ್ಟಿದ್ದು ಇದನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಆ ಭಾಗದಲ್ಲಿ ಹುಲಿಯ ಸಂಕೇತವು ಮೆಂಫಿಸ್ನಲ್ಲಿ ಹೆಮ್ಮೆ ಮತ್ತು ಸಮುದಾಯಕ್ಕೆ ಸಮಾನಾರ್ಥಕವಾಗಿದ್ದು ಇಡೀ ನಗರವೇ ನಮ್ಮೊಂದಿಗೆ ಸಂಭ್ರಮಿಸಿದೆ ಎನ್ನುತ್ತಾರೆ ಇಲ್ಲಿನ ಮುಖ್ಯ ಪ್ರಾಣಿಶಾಸ್ತ್ರ ಅಧಿಕಾರಿ ಕರ್ಟ್ನಿ ಜನ್ನಿ.

ಮೆಂಫಿಸ್ ಮೃಗಾಲಯವು ತನ್ನ ಟ್ವಿಟ್ಟರ್ ಖಾತೆಯಲ್ಲಿ ಜನನದ ವೀಡಿಯೊವನ್ನು ಹಂಚಿಕೊಂಡಿದ್ದು, “ಮೃಗಾಲಯದಲ್ಲಿ ಅಳಿವಿನಂಚಿನಲ್ಲಿರುವ ಎರಡು ಸುಮಾತ್ರನ್ ಹುಲಿಗಳು ಜನಿಸಿದ ಪವಾಡ ಸದೃಶ ಕ್ಷಣವನ್ನು ವೀಕ್ಷಿಸಿ. ಅವಳು ತನ್ನ ಹೊಸ ಮರಿಗಳಿಗೆ ತಾಯಿಯಾದ ಖುಷಿಯಲ್ಲಿದ್ದಾಳೆ” ಎಂದು ವೀಡಿಯೊಗೆ ಮುದ್ದಾದ ಶೀರ್ಷಿಕೆಯನ್ನು ನೀಡಲಾಗಿದೆ. ಮೃಗಾಲಯದ ಫೇಸ್ಬುಕ್ ಖಾತೆಯಲ್ಲಿ ನವಜಾತ ಹುಲಿಗಳ ಚಿತ್ರಗಳನ್ನು ಸಹ ಹಂಚಿಕೊಳ್ಳಲಾಗಿದೆ. ಸುಮಾತ್ರನ್ ಹುಲಿಗಳು ಕೊನೆಯ ಬಾರಿಗೆ 1998 ರಲ್ಲಿ ಮೆಂಫಿಸ್ ಮೃಗಾಲಯದಲ್ಲಿ ಜನಿಸಿದ್ದವು ಎಂದು ಹೇಳಲಾಗಿದೆ.

ಇದನ್ನೂ ಓದಿ: ಲಾಟರಿಯಲ್ಲಿ ಗೆದ್ದ ರೂ. 82 ಲಕ್ಷವನ್ನು ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತೇನೆ

ಗಮನಾರ್ಹವಾಗಿ, ಸುಮಾತ್ರನ್ ಹುಲಿಗಳು ಅಳಿವಿನಂಚಿನಲ್ಲಿರುವ ಉಪಜಾತಿಗಳಲ್ಲಿ ಒಂದಾಗಿದೆ. ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ವಾಸಿಸುವ 400 ಕ್ಕೂ ಕಡಿಮೆ ಸುಮಾತ್ರನ್ ಹುಲಿಗಳು ಕೆಲವು ಕಾಡಿನಲ್ಲಿ ಉಳಿದಿವೆ ಎಂದು ವಿಶ್ವ ವನ್ಯಜೀವಿ ನಿಧಿ ಅಂದಾಜಿಸಿದೆ. ಆವಾಸಸ್ಥಾನದ ನಷ್ಟ, ಕಳ್ಳಬೇಟೆ ಮತ್ತು ಮಾನವರೊಂದಿಗಿನ ಸಂಘರ್ಷ ಇವೆಲ್ಲವೂ ಅಳಿದು ಹೋಗಲು ಮುಖ್ಯ ಕಾರಣವಾಗಿದೆ. ಒಂದು ಸಮಯದಲ್ಲಿ, ನಮ್ಮ ಗ್ರಹದಲ್ಲಿ ಹುಲಿಗಳ ಒಂಬತ್ತು ಉಪಜಾತಿಗಳಿದ್ದವು, ಬಳಿಕ ಆವಾಸಸ್ಥಾನದ ನಷ್ಟ ಮತ್ತು ಬೇಟೆಯಿಂದಾಗಿ ಆ ಸಂಖ್ಯೆ ಈಗ ಆರಕ್ಕೆ ಇಳಿದಿದೆ. ಹಾಗಾಗಿ ಸುಮಾತ್ರನ್ ಹುಲಿಯ ಉಳಿವಿಗೆ ಸಹಾಯದ ಅಗತ್ಯವಿದೆ. ಮೆಂಫಿಸ್ ಮೃಗಾಲಯವು ಅವುಗಳ ಸಂರಕ್ಷಣಾ ಕಥೆಯಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಮೃಗಾಲಯ ಹೇಳಿಕೆ ನೀಡಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ತಾಜಾ ಸುದ್ದಿ

Related Stories

Click on your DTH Provider to Add TV9 Kannada