Viral Video: ಈ ಧಗೆಯಲ್ಲಿ ಪ್ರೇಮಿಗಳಿಗೆ ತಂಪನೆರೆಯುವ ಪ್ರಗತಿ ಬಡಿಗೇರಳ ಈ ಭಾವಗೀತೆ

ಶ್ರೀದೇವಿ ಕಳಸದ

|

Updated on:May 25, 2023 | 5:14 PM

Kannada Songs : ಯುವಗಾಯಕಿ ಪ್ರಗತಿ ಬಡಿಗೇರಳ ​'ಜೀವ ಬಂದಂತೆ' ಹೊಸ ರೀಲ್​ನ ಜಾಡನ್ನ ಹಿಡಿದು ಹೊರಟಾಗ 'ಆಲಿಂಗನ' ಎಂಬ ಪ್ರೇಮಗೀತೆಗಳ ಕ್ಯಾಸೆಟ್ಟಿಗೆ ಇದೀಗ ರಜತಮಹೋತ್ಸವ ಸಂಭ್ರಮ ಎಂಬ ವಿಷಯ ತಿಳಿಯಿತು!

Viral Video: ಈ ಧಗೆಯಲ್ಲಿ ಪ್ರೇಮಿಗಳಿಗೆ ತಂಪನೆರೆಯುವ ಪ್ರಗತಿ ಬಡಿಗೇರಳ ಈ ಭಾವಗೀತೆ
ಕವಿ ಬಿ. ಆರ್. ಲಕ್ಷ್ಮಣರಾವ್, ಗಾಯಕ ಸಿ. ಅಶ್ವತ್ಥ, ಗಾಯಕಿ ಪ್ರಗತಿ ಬಡಿಗೇರ್, ಗಾಯಕಿ ರತ್ನಮಾಲಾ ಪ್ರಕಾಶ್ ಮತ್ತು ಆಲಿಂಗನ ಕ್ಯಾಸೆಟ್​ ಕವರ್

Follow us on

Kannada Bhavageete : ಮನಸ್ಸು ಭಾರವಾದಾಗ ನಾವು ಮೊರೆ ಹೋಗುವುದು ಭಾವಗೀತೆಗೇ ಅಲ್ಲವೆ? ಕ್ಷಣಕಾಲ ಆ ಭಾವಲೋಕದಲ್ಲಿ ತೇಲಿಬರುತ್ತಿದ್ದಂತೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಹಾಗಾಗಿ ಕನ್ನಡದ ಗಾಯಕರಿಗೆ, ಕವಿಗಳಿಗೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ಝೀ ಸಾರೆಗಮಪ ಲಿಟಲ್​ ಚಾಂಪ್ಸ್​ ವಿಜೇತೆ ಪ್ರಗತಿ ಬಡಿಗೇರ (Pragathi Badiger) ಅವರ ಇನ್​ಸ್ಟಾಗ್ರಾಂ ಪುಟ ಹೊಕ್ಕಾಗ ‘ಜೀವ ಬಂದಂತೆ’ ಹೊಸ ರೀಲ್​ ಸುಶ್ರಾವ್ಯವಾಗಿ ಬಿಚ್ಚಿಕೊಂಡಿತು. ರತ್ನಮಾಲಾ ಪ್ರಕಾಶ ಅವರ ಕಂಠಸಿರಿಯಲ್ಲಿ ಈ ಭಾವಗೀತೆ 25 ವರ್ಷಗಳ ಹಿಂದೆ ಮೂಡಿಬಂದಿದೆ. ಅಂದರೆ ಈ ಭಾವಗೀತೆಯನ್ನು ಅಡಗಿಸಿಕೊಂಡಿರುವ ‘ಆಲಿಂಗನ’ ಕ್ಯಾಸೆಟ್​ಗೆ ಈಗ ರಜತಮಹೋತ್ಸವದ ಸಂಭ್ರಮ!

ಇದನ್ನೂ ಓದಿ

View this post on Instagram

A post shared by pragathi Basavaraj Badiger (@pragathibadiger_official)

‘ಆಲಿಂಗನ’ (ಪ್ರೇಮ ಗೀತೆಗಳು) ಈ ಭಾವಗೀತೆಗಳ ಕ್ಯಾಸೆಟ್​ನಲ್ಲಿ ಹತ್ತು ಭಾವಗೀತೆಗಳಿವೆ. ಸಂಗೀತ ನಿರ್ದೇಶಕ, ಗಾಯಕ ಸಿ. ಅಶ್ವತ್ಥ ಸ್ವರಸಂಯೋಜನೆ ಮಾಡಿದ್ದಾರೆ. ಪ್ರಸ್ತುತ ಪ್ರಗತಿ ಹಾಡಿರುವ ‘ಜೀವ ಬಂದಂತೆ’ ಭಾವಗೀತೆಯನ್ನು ಕವಿ ಬಿ. ಆರ್​. ಲಕ್ಷ್ಮಣರಾವ್ ಬರೆದಿದ್ದು, ರತ್ನಮಾಲಾ ಪ್ರಕಾಶ್​ ಈ ಹಾಡನ್ನೂ ಒಳಗೊಂಡಂತೆ ಹತ್ತೂ ಹಾಡುಗಳನ್ನು ಹಾಡಿದ್ದಾರೆ.  ಪ್ರಗತಿ ಬಡಿಗೇರ ಝೀ ಕನ್ನಡ ವಾಹಿನಿಯ ಸಾರೆಗಮಪ ಲಿಟಲ್​ ಚಾಂಪ್ಸ್​ನಲ್ಲಿ ವಿಜೇತೆಯಾದಾಗ ಅನೇಕ ವೀಕ್ಷಕರು ಭಾವುಕರಾಗಿ ಕಣ್ಣುತುಂಬಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮನದುಂಬಿ ಹಾಡುವ ಸುರೀಲಿ ಕಂಠ ಈಕೆಯದು.

ಇದನ್ನೂ ಓದಿ : Viral Video: ಬಿಹಾರಿ ಮಗುವಿಗೆ ಬಂದಿದ್ದು ಕನ್ನಡಜ್ವರ! ಸೃಷ್ಟಿ ಡಾಕ್ಟರ್​ ಕೊಟ್ಟ ಔಷಧಿ ಏನು? 

ಆದರೆ ರಿಯಾಲಿಟಿ ಷೋ ಮುಗಿದ ಮೇಲೆ ಸ್ಪರ್ಧಾಳುಗಳು ಎಲ್ಲಿಗೆ ಹೋಗುತ್ತಾರೆ, ಎಲ್ಲರಿಗೂ  ಅವಕಾಶಗಳು ಸಿಗುತ್ತವೆಯೇ? ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಸಮಾಧಾನಕರ ಉತ್ತರ ದೊರೆತಿದೆ. ತಮ್ಮ ಮೆಚ್ಚಿನ ಕಲಾವಿದರ ಹಾಡುಗಳನ್ನು ಕೇಳಲು ಕಲಾಸಕ್ತರು ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡುತ್ತಾರೆ. ಪ್ರಗತಿ ಕೂಡ ಆಗಾಗ ತನ್ನ ಇನ್​ಸ್ಟಾ ಖಾತೆಯಲ್ಲಿ ಹಾಡುಗಳನ್ನು ಹಾಡಿ ಅಪ್​ಲೋಡ್ ಮಾಡುತ್ತಿರುತ್ತಾಳೆ. ತಾನೊಬ್ಬಳೇ ಅಲ್ಲ ತನ್ನ ಪುಟ್ಟ ಸೋದರಿಯೊಂದಿಗೆ ಈಕೆ ಹಾಡುತ್ತಿರುತ್ತಾಳೆ. ಈ ಮೂವರ ಭವಿಷ್ಯ ಉಜ್ವಲವಾಗಿರಲಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Click on your DTH Provider to Add TV9 Kannada