AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸರಿಗಮಪ ಲಿಟಲ್​​ ಚಾಂಪ್ಸ್’ ವಿನ್ನರ್​ ಪ್ರಗತಿ ಬಡಿಗೇರ್​ಗೆ 21 ಲಕ್ಷ ಮೌಲ್ಯದ ಸೈಟ್​; ಶಿವಾನಿಗೆ ಏನು?

ಈ ಬಾರಿಯ ‘ಸರಿಗಮಪ’ ಫಿನಾಲೆ ಕೊಪ್ಪಳದಲ್ಲಿ ನಡೆದಿದೆ. ಅದ್ದೂರಿ ವೇದಿಕೆ ಮೇಲೆ ಅನುಶ್ರೀ ಅವರು ಆ್ಯಂಕರಿಂಗ್ ಮಾಡಿದರು.

‘ಸರಿಗಮಪ ಲಿಟಲ್​​ ಚಾಂಪ್ಸ್’ ವಿನ್ನರ್​ ಪ್ರಗತಿ ಬಡಿಗೇರ್​ಗೆ 21 ಲಕ್ಷ ಮೌಲ್ಯದ ಸೈಟ್​; ಶಿವಾನಿಗೆ ಏನು?
ಪ್ರಗತಿ-ಶಿವಾನಿ
ರಾಜೇಶ್ ದುಗ್ಗುಮನೆ
|

Updated on: Apr 17, 2023 | 11:12 AM

Share

‘ಸರಿಗಮಪ’ (Sa Re Ga Ma Pa) ರಿಯಾಲಿಟಿ ಶೋ ಹಲವು ಸೀಸನ್​​ಗಳನ್ನು ಯಶಸ್ವಿ ಆಗಿ ಪೂರೈಸಿದೆ. ಏಪ್ರಿಲ್ 15 ಹಾಗೂ 16ರಂದು ‘ಸರಿಗಮಪ ಲಿಟಲ್​ ಚಾಂಪ್ಸ್​ ಸೀಸನ್ 19ರ’ ಫಿನಾಲೆ ಎಪಿಸೋಡ್ ಪ್ರಸಾರ ಕಂಡಿದೆ. ಪ್ರಗತಿ ಬಡಿಗೇರ್ ಅವರು ಈ ಟೈಟಲ್ ಗೆದ್ದಿದ್ದಾರೆ. ಅವರಿಗೆ ಒಂದು ಸೈಟ್ ಹಾಗೂ ನಗದು ಬಹುಮಾನ ಸಿಕ್ಕಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಫಿನಾಲೇ ರೇಸ್​​ನಲ್ಲಿದ್ದ ಶಿವಾನಿ (Shivani) ಅವರು ಮೊದಲ ರನ್ನರ್ ಅಪ್ ಆದರೆ, ಮಂಗಳೂರಿನ ಪ್ರತಿಭೆ ತನುಶ್ರೀ ಎರಡನೇ ರನ್ನರ್ ಅಪ್ ಆಗಿದ್ದಾರೆ. ಅವರೆಲ್ಲರಿಗೂ ಶುಭಾಶಯ ಬರುತ್ತಿದೆ.

‘ಸರಿಗಮಪ’ ಶೋನ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತದೆ. ಆದರೆ, ಫಿನಾಲೆ ಮಾತ್ರ ರಾಜ್ಯದ ವಿವಿಧ ನಗರಗಳಲ್ಲಿ ನಡೆಸಲಾಗುತ್ತದೆ. ಈ ಬಾರಿಯ ‘ಸರಿಗಮಪ’ ಫಿನಾಲೆ ಕೊಪ್ಪಳದಲ್ಲಿ ನಡೆದಿದೆ. ಅದ್ದೂರಿ ವೇದಿಕೆ ಮೇಲೆ ಅನುಶ್ರೀ ಅವರು ಆ್ಯಂಕರಿಂಗ್ ಮಾಡಿದರು. ಹಂಸಲೇಖ ಅವರು ಮಹಾಗುರುಗಳಾಗಿ ವೇದಿಕೆ ಮೇಲಿದ್ದರು. ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮೊದಲಾದವರು ಜಡ್ಜ್​ ಸ್ಥಾನದಲ್ಲಿದ್ದರು. ಅಂತಿಮ ಹಂತದಲ್ಲಿ ಪ್ರಗತಿ, ಶಿವಾನಿ ಹಾಗೂ ತನುಶ್ರೀ ಇದ್ದರು. ಈ ಪೈಕಿ ಪ್ರಗತಿ ಗೆದ್ದು ಬೀಗಿದ್ದಾರೆ.

ವಿನ್ನರ್ ಆದ ಪ್ರಗತಿ ಬಡಿಗೇರ್​ಗೆ ನೆಲಮಂಗಲ ಪ್ರಾಜೆಕ್ಟ್​​ನಲ್ಲಿ 30-40 ಅಡಿಯ ಸೈಟ್ ಸಿಕ್ಕಿದೆ. 21 ಲಕ್ಷ ರೂಪಾಯಿ ಇದರ ಮೌಲ್ಯ. ಇದರ ಜೊತೆ 4 ಲಕ್ಷ ರೂಪಾಯಿ ನಗದು ದೊರೆತಿದೆ. ಮೊದಲ ರನ್ನರ್​ಅಪ್​ ಶಿವಾನಿಗೆ 20 ಲಕ್ಷ ರೂಪಾಯಿ ಕ್ಯಾಶ್ ಸಿಕ್ಕಿದೆ. ಎರಡನೇ ರನ್ನರ್ ಅಪ್​ ತನುಶ್ರೀಗೆ ಐದು ಲಕ್ಷ ರೂಪಾಯಿ ಎಲೆಕ್ಟ್ರಿಕ್ ವಾಹನ ಹಾಗೂ ಐದು ಲಕ್ಷ ರೂಪಾಯಿ ನಗದು ದೊರೆತಿದೆ.

ಇದನ್ನೂ ಓದಿ: Anchor Anushree: ‘ಸರಿಗಮಪ’ ಜಡ್ಜ್​​ಗಳ ಜತೆ ಅನುಶ್ರೀ ಸಂಕ್ರಾಂತಿ ಸಂಭ್ರಮ; ಫೋಟೋ ವೈರಲ್

ಪ್ರತಿ ರಿಯಾಲಿಟಿ ಶೋನಲ್ಲಿ ಯಾರೇ ವಿನ್ ಆದರೂ ಒಂದು ಚರ್ಚೆ ಹುಟ್ಟಿಕೊಳ್ಳುತ್ತದೆ. ಅದೇ ರೀತಿ, ‘ಸರಿಗಮಪ ಲಿಟಲ್​ ಚಾಂಪ್ಸ್’ 19ನೇ ಸೀಸನ್ ಕೂಡ ಚರ್ಚೆ ಹುಟ್ಟುಹಾಕಿದೆ. ಅನೇಕರು ಶಿವಾನಿ ಅವರು ಗೆಲ್ಲಬೇಕಿತ್ತು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು, ‘ಶಿವಾನಿ ನಮ್ಮ ವಿನ್ನರ್’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More