Sign In

By signing in or creating an account, you agree with Associated Broadcasting Company's Terms & Conditions and Privacy Policy.

Daali Dhananjay: ಧನಂಜಯ್​ಗೆ ಇತ್ತೀಚೆಗೆ ಬೀಳುತ್ತಿದೆ ಕೆಟ್ಟ ಕನಸು; ಕಾರಣ ತಿಳಿಸಿದ ಡಾಲಿ

ಡಾಲಿ ಧನಂಜಯ್ ಅವರಿಗೆ ಈಗ 36 ವರ್ಷ ವಯಸ್ಸು. ಈವರೆಗೆ ಅವರು ಮದುವೆ ಆಗಿಲ್ಲ. ಹೊಸ ಜೀವನ ಆರಂಭಿಸೋದು ಯಾವಾಗ ಎನ್ನುವ ಪ್ರಶ್ನೆಗೆ ಅವರು ಕೂಡ ಉತ್ತರ ನೀಡಿಲ್ಲ.

Daali Dhananjay: ಧನಂಜಯ್​ಗೆ ಇತ್ತೀಚೆಗೆ ಬೀಳುತ್ತಿದೆ ಕೆಟ್ಟ ಕನಸು; ಕಾರಣ ತಿಳಿಸಿದ ಡಾಲಿ
ಧನಂಜಯ್
Follow us
ರಾಜೇಶ್ ದುಗ್ಗುಮನೆ
|

Updated on: Apr 17, 2023 | 7:56 AM

ಧನಂಜಯ್ ಅವರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ಡಾಲಿ ನಟಿಸಿದ್ದಾರೆ. ಅವರು ‘ವೀಕೆಂಡ್ ವಿತ್ ರಮೇಶ್ ಸೀಸನ್​ 5’ರಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೀವನದ ಪುಟಗಳನ್ನು ಈ ಶೋನಲ್ಲಿ ತೆರೆದಿಡಲಾಗಿದೆ. ಕಳೆದ ವೀಕೆಂಡ್​ನಲ್ಲಿ (ಏಪ್ರಿಲ್​ 15 ಹಾಗೂ 16) ಈ ಎಪಿಸೋಡ್ ಪ್ರಸಾರ ಕಂಡಿದೆ. ಗೆಳೆಯರು, ಕುಟುಂಬದವರು ವೇದಿಕೆ ಮೇಲೆ ಬಂದು ಧನಂಜಯ್ (Dhananjay) ಅವರನ್ನು ಕೊಂಡಾಡಿದ್ದಾರೆ. ಡಾಲಿ (Daali) ಅಜ್ಜಿ ಮಲ್ಲಮ್ಮ ಕೂಡ ವೇದಿಕೆ ಏರಿದ್ದರು. ಅವರು ಧನಂಜಯ್ ಮದುವೆ ಬಗ್ಗೆ ಮಾತನಾಡಿದ್ದಾರೆ.

ಡಾಲಿ ಧನಂಜಯ್ ಅವರಿಗೆ ಈಗ 36 ವರ್ಷ ವಯಸ್ಸು. ಈವರೆಗೆ ಅವರು ಮದುವೆ ಆಗಿಲ್ಲ. ಹೊಸ ಜೀವನ ಆರಂಭಿಸೋದು ಯಾವಾಗ ಎನ್ನುವ ಪ್ರಶ್ನೆಗೆ ಅವರು ಕೂಡ ಉತ್ತರ ನೀಡಿಲ್ಲ. ಅಮೃತಾ ಅಯ್ಯಂಗಾರ್ ಜೊತೆ ಧನಂಜಯ್ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಅವರು ತಳ್ಳಿ ಹಾಕಿದ್ದರು. ‘ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್’ ಎಂದು ಸ್ಪಷ್ಟನೆ ನೀಡಿದ್ದರು. ಹೀಗಿರುವಾಗಲೇ ಧನಂಜಯ್ ಮದುವೆ ಬಗ್ಗೆ ಅಜ್ಜಿ ಮಲ್ಲಮ್ಮ ವೀಕೆಂಡ್ ವಿತ್ ರಮೇಶ್​ನಲ್ಲಿ ಮಾತನಾಡಿದ್ದಾರೆ.

‘ಧನಂಜಯ್​ಗೆ ಮದುವೆ ಮಾಡಬೇಕು. ನಾನು ಇದ್ದಾಗಲೇ ವಿವಾಹ ಮಾಡಬೇಕು ಎಂದು ಹೇಳಿದ್ರೆ, ‘ಆಗೋಣ ತಗೋಳಜ್ಜಿ’ ಎಂದು ಹೇಳುತ್ತಾನೆ. ಎಲ್ಲರ ಮದುವೆಯನ್ನೂ ಮಾಡಿದ್ದೇನೆ. ನಾವು ಹುಡುಕಿದ ಹುಡುಗಿಯನ್ನು ಅವನು ಒಪ್ಪಿಕೊಳ್ಳಬೇಕಲ್ಲ. ಅವನು ಒಪ್ಪಿಕೊಂಡು ಬಂದ್ರೆ ನಾನೇ ಮದುವೆ ಮಾಡ್ತೀನಿ’ ಎಂದರು ಅಜ್ಜಿ ಮಲ್ಲಮ್ಮ. ‘ನನ್ನ ಅಜ್ಜಿಗೆ 95 ವರ್ಷ. ಇನ್ನೂ ಐದು ವರ್ಷ ಅವರು ಇರ್ತಾರೆ. ಹಾಗಾಗಿ, ಆರಮಾಗಿ ಆಗ್ತೀನಿ’ ಎಂದರು ಡಾಲಿ.

ಇದನ್ನೂ ಓದಿ: ‘ಹೊಯ್ಸಳ’ ನಿರ್ಮಾಪಕರಿಂದ ಧನಂಜಯ್​ಗೆ ಕಾರು ಗಿಫ್ಟ್​; ಈ ಕಾರಿನ ಬೆಲೆ 1 ಕೋಟಿ ರೂಪಾಯಿ

‘ಯಾರನ್ನಾದರೂ ನೋಡಿ, ಅವರು ಇಷ್ಟ ಆದ್ರೆ ಮದುವೆ ಆಗೋದು. ಇತ್ತೀಚೆಗೆ ಮದುವೆ ಕನಸು ಬೀಳ್ತಿದೆ. ಒತ್ತಾಯಕ್ಕೆ ಯಾರನ್ನೋ ನೋಡಿ ಒಪ್ಪಿಕೊಂಡಂತೆ, ನಂತರ ಸಫರ್ ಮಾಡಿದಂತೆ ಕನಸು ಬೀಳ್ತಾ ಇದೆ’ ಎಂದರು ಧನಂಜಯ್.

ರಾಜ್​ಕುಮಾರ್ ಸಮಾಧಿ ಬಳಿ ಕೇಳಿಕೊಂಡಿದ್ದ ಮಲ್ಲಮ್ಮ

ಧನಂಜಯ್ ಅವರು ಚಿತ್ರರಂಗಕ್ಕೆ ಕಾಲಿಡುತ್ತೇನೆ ಎಂದಾಗ ಅಜ್ಜಿಗೆ ಅಚ್ಚರಿ ಆಗಿತ್ತು. ಅವರು ರಾಜ್​ಕುಮಾರ್ ಸಮಾಧಿ ಬಳಿ ಬಂದು ‘ನೀವು ಬೆಳದಾಂಗೆ ನನ್ನ ಮೊಮ್ಮಕ್ಕಳು ಬೆಳೀಬೇಕು. ಅಷ್ಟು ಮಾಡಿ’ ಎಂದು ಕೋರಿದ್ದರು. ಈಗ ಅವರ ಕೋರಿಕೆ ಈಡೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ