Daali Dhananjay: ಸಾಧಕರ ಕುರ್ಚಿಯಲ್ಲಿ ಕೂತು ತನ್ನವರ ನೆನೆದು ಕಣ್ಣೀರಾದ ನಟ ‘ರಾಕ್ಷಸ’

Daali Dhananjay: ವೀಕೆಂಡ್ ವಿತ್ ರಮೇಶ್ ನ ಈ ವಾರದ ಅತಿಥಿ ಡಾಲಿ ಧನಂಜಯ್ ಸಾಧಕರ ಕುರ್ಚಿಯಲ್ಲಿ ಕೂತು, ತನ್ನವರನ್ನು ನೆನಪಿಸಿಕೊಂಡು ಭಾವುಕರಾದರು.

Daali Dhananjay: ಸಾಧಕರ ಕುರ್ಚಿಯಲ್ಲಿ ಕೂತು ತನ್ನವರ ನೆನೆದು ಕಣ್ಣೀರಾದ ನಟ 'ರಾಕ್ಷಸ'
ವೀಕೆಂಡ್ ವಿತ್ ರಮೇಶ್​ನಲ್ಲಿ ಡಾಲಿ ಧನಂಜಯ್
Follow us
ಮಂಜುನಾಥ ಸಿ.
|

Updated on: Apr 16, 2023 | 8:07 AM

ದೊಡ್ಡ ಕುಟುಂಬದಲ್ಲಿ ಜನಿಸಿ ಹಲವರ ಪ್ರೇಮ ಕಂಡು ಬೆಳೆದ ಡಾಲಿ ಧನಂಜಯ್ (Daali Dhananjay), ವೀಕೆಂಡ್ ವಿತ್ ರಮೇಶ್ (Weekend With Ramesh)​ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿ ಮೇಲೆ ಕುಳಿತು ತನ್ನ ಈ ಸಾಧನೆಗೆ ಕಾರಣಕರ್ತರಾದ ತನ್ನವರನ್ನೆಲ್ಲ ನೆನಪಿಸಿಕೊಳ್ಳುವಾಗ ತಮ್ಮ ಅನ್ವರ್ಥನಾಮ ‘ನಟರಾಕ್ಷಸ’ ಎಂಬುದನ್ನು ಮರೆತು ಭಾವುಕರಾಗಿ ಕಣ್ಣೀರು ಹಾಕಿದರು.

ಐದನೇ ಸೀಸನ್​ನ ಈ ವಾರದ ಅತಿಥಿಯಾಗಿದ್ದವರು ಡಾಲಿ ಧನಂಜಯ್. ವೀಕೆಂಡ್​ನ ಮೊದಲ ದಿನದ ಎಪಿಸೋಡ್​ನಲ್ಲಿ ಡಾಲಿಯವರ ಹುಟ್ಟು, ಬಾಲ್ಯ, ಕುಟುಂಬ, ಶಾಲೆ, ಕಾಲೇಜು, ಶಿಕ್ಷಣ, ಕಾಲೇಜು ಹಲವು ವಿಷಯಗಳ ಪರಿಚಯವನ್ನು ಮಾಡಿಕೊಡಲಾಯ್ತು. ತಮ್ಮ ಜೀವನದ ಮುಖ್ಯ ವ್ಯಕ್ತಿಗಳ ಉಲ್ಲೇಖ ಬಂದಾಗೆಲ್ಲ ಅವರು ತಮಗೆ ತೋರಿದ ಪ್ರೀತಿ, ತಮಗಾಗಿ ಅವರು ಮಾಡಿದ ತ್ಯಾಗಗಳನ್ನು ನೆನದು ಕಣ್ಣೀರಾದರು ಡಾಲಿ. ಮೂಲತಃ ಭಾವ ಜೀವಿಯೇ ಆಗಿರುವ ಡಾಲಿ, ಕ್ಯಾಮೆರಾ ಮುಂದೆ ಕಣ್ಣೀರು ಹಾಕಬಾರದೆಂದು ಬಹಳ ಪ್ರಯಾಸದಿಂದ ದುಃಖ ತಡೆದುಕೊಳ್ಳಲು ಯತ್ನಿಸಿ ಹಲವು ಬಾರಿ ವಿಫಲವಾದರು.

ಗರ್ಭಪಾತ ಮಾಡಿಸಲು ಹೋಗಿದ್ದ ತಂದೆ-ತಾಯಿಯನ್ನು ತಡೆದು ಬುದ್ಧಿಹೇಳಿ ತಮ್ಮ ಜನನಕ್ಕೆ ಕಾರಣರಾದ ವೈದ್ಯೆಯನ್ನು ಇದೇ ಮೊದಲ ಬಾರಿಗೆ ಡಾಲಿ ಧನಂಜಯ್ ವೀಕೆಂಡ್​ ವಿತ್ ರಮೇಶ್​ ವೇದಿಕೆಯಲ್ಲಿ ಭೇಟಿಯಾಗಿದ್ದು ಅಪರೂಪದ ಸನ್ನಿವೇಶ. ಆ ಬಳಿಕ ತಮ್ಮ ದೊಡ್ಡ ಕುಟುಂಬದ ಬಗ್ಗೆ ಭಾವುಕರಾಗಿಯೇ ಮಾತನಾಡಿದ ಡಾಲಿ, ಅಜ್ಜಿ ಗೌರಮ್ಮನ ಚಿತ್ರ ಪರದೆಯ ಮೇಲೆ ಮೂಡುತ್ತಿದ್ದಂತೆ ತೀರ ಭಾವುಕರಾಗಿಬಿಟ್ಟರು. ಅವರು ತಮಗೆ ತೋರಿಸುತ್ತಿದ್ದ ಪ್ರೀತಿಯನ್ನು ನೆನಪಿಸಿಕೊಂಡ ಡಾಲಿ, ಅವರು ಸೇರಿದಂತೆ ತಮ್ಮ ಅಜ್ಜಿಯರು, ಚಿಕ್ಕಪ್ಪ, ಮಾವಂದಿರು ತೋರುತ್ತಿದ್ದ ಪ್ರೀತಿ, ಅವರುಗಳು ತನಗೆ ಕೊಟ್ಟ ಐದು-ಹತ್ತರ ನೋಟುಗಳ ಮೇಲೆ ಅವರ ಹೆಸರು ಬರೆದು ಸಂಗ್ರಹಿಸಿಡುತ್ತಿದ್ದನ್ನು ನೆನಪು ಮಾಡಿಕೊಂಡರು.

ಆ ಬಳಿಕ ಕಾರ್ಯಕ್ರಮಕ್ಕೆ ಅವರ ಸಹೋದರ, ಅತ್ತಿಗೆ, ಡಾಲಿಯ ಅಕ್ಕ ಆಗಮಿಸಿ ಪ್ರೀತಿಯ ತಮ್ಮನ ಬಗ್ಗೆ ಭಾವುಕವಾಗಿಯೇ ಮಾತನಾಡಿದರು. ಅದಾದ ಬಳಿಕ ಡಾಲಿಯ ಮತ್ತೊಬ್ಬ ಅಕ್ಕ ಸಹ ಕಾರ್ಯಕ್ರಮಕ್ಕೆ ಬಂದರು ಆಗಲಂತೂ ಡಾಲಿಗೆ ಕಣ್ಣೀರು ತಡೆಯಲಾಗಲಿಲ್ಲ. ಡಾಲಿಯ ಅಕ್ಕನಿಗೆ ಎಳವೆಯಲ್ಲಿಯೇ ಪೋಲಿಯೋ ಆಗಿ ಕಣ್ಣು ದೃಷ್ಟಿ ಹೊರಟು ಹೋಗಿದೆ ಅವರ ಬುದ್ಧಿಯೂ ತುಸು ಭ್ರಮಣೆಯಾಗಿದೆ. ಅವರನ್ನು ವೇದಿಕೆಗೆ ಕರೆತಂದಾಗ ಡಾಲಿ ಭಾವುಕರಾದರು. ”ಆಕೆ ನಮಗೆ ಅಕ್ಕನಲ್ಲ, ನಮಗೆ ಮಗು. ಆಕೆಯ ಪುಣ್ಯದಿಂದಲೇ ನಾವೆಲ್ಲ ಇಂದು ಚೆನ್ನಾಗಿದ್ದೇವೆ ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ತಾವು ಸಣ್ಣವರಿದ್ದಾಗ ದೇವರಿಗೆ ಕೈಮುಗಿದಾಗಲೆಲ್ಲ ಅಕ್ಕನಿಗೆ ಕಣ್ಣು ಬರಲಿ ಎಂದುಕೊಳ್ಳುತ್ತಿದ್ದ ಬಗ್ಗೆ ಹೇಳಿದಾಗಲಂತೂ ವೇದಿಕೆ ಮೇಲಿದ್ದ ಡಾಲಿಯ ಕುಟುಂಬದವರೆಲ್ಲರೂ ಕಣ್ಣೀರಾದರು.

ಆ ಬಳಿಕ ಡಾಲಿಯ ಶಿಕ್ಷಣದ ಕಡೆಗೆ ಮಾತು ಹೊರಳಿತು, ”ಡಾಲಿ ಮೊದಲು ಕಲಿತ ಶಾರದಾ ಕಾನ್ವೆಂಟ್​ನ ಇಬ್ಬರು ಶಿಕ್ಷಕಿಯರು ವಿಡಿಯೋ ಮೂಲಕ ಮಾತನಾಡಿದರು. ಆ ಶಾಲೆಯನ್ನು ಕಟ್ಟಿದ ಮುಖ್ಯಶಿಕ್ಷಕಿ ಮಾತನಾಡಿದಾಗ ಡಾಲಿ ಮತ್ತೆ ಭಾವುಕಗೊಂಡರು. ಅವರ ತಂದೆಯವರೂ ಭಾವುಕರಾಗಿ ಕಣ್ಣೀರು ಹಾಕಿದರು. ಅದಕ್ಕೆ ಕಾರಣ ಆ ವಿಡಿಯೋ ಶೂಟ್ ಮಾಡಿದ ಕೆಲವೇ ದಿನಗಳಲ್ಲಿ ಆ ಶಿಕ್ಷಕಿ ನಿಧನ ಹೊಂದಿದ್ದರು. ಅವರೆಂದರೆ ಡಾಲಿಗೆ ಬಹಳ ಭಯ ಜೊತೆಗೆ, ಒಂಟಿ ಮಹಿಳೆಯಾಗಿ ಅಷ್ಟು ದೊಡ್ಡ ಶಾಲೆಯನ್ನು ಕಟ್ಟಿದ ಅವರ ಬಗ್ಗೆ ಡಾಲಿಗೆ ಬಹಳ ಗೌರವ.

ಅದಾದ ಬಳಿಕ ಮಾತು ಕಾಲೇಜಿನ ಕಡೆಗೆ ಹೊರಳಿ ತಮ್ಮ ಹಾಸ್ಟೆಲ್ ವಾಸ, ಅಲ್ಲಿ ತಮಗೆ ಸಿಕ್ಕ ಗೆಳೆಯರು, ಓದಿನಲ್ಲಿ ಸದಾ ಮುಂದಿರುತ್ತಿದ್ದ ರೀತಿ, ಹಾಸ್ಟೆಲ್​ನಲ್ಲಿದ್ದಾಗ ಆಡುತ್ತಿದ್ದ ಆಟ, ನೋಡುತ್ತಿದ್ದ ಸಿನಿಮಾಗಳು, ಸೀನಿಯರ್​ಗಳೊಟ್ಟಿಗೆ ಆಡುತ್ತಿದ್ದ ಇಸ್ಪೀಟ್ ಆಟ, ಕ್ರಿಕೆಟ್, ವಾಲಿಬಾಲ್ ಎಲ್ಲವನ್ನೂ ಡಾಲಿ ಧನಂಜಯ್ ನೆನಪು ಮಾಡಿಕೊಂಡರು. ಅದಾದ ಬಳಿಕ ಎಂಜಿನಿಯರಿಂಗ್ ಸೇರಿದಾಗ ಅಲ್ಲಿ ಸಿಕ್ಕಿದ ಗೆಳೆಯರು. ಅಲ್ಲಿ ನಾಟಕದೊಟ್ಟಿಗೆ ಬೆರೆತ ನಂಟು, ಆತ್ಮೀಯ ಗೆಳೆಯ ನಾಗಭೂಷಣ್ ಸಿಕ್ಕ ಬಗೆ ಎಲ್ಲವನ್ನೂ ನೆನಪು ಮಾಡಿಕೊಂಡು ನಕ್ಕರು. ಡಾಲಿಯ ಹಲವು ಗೆಳೆಯರು ಶೋಗೆ ಆಗಮಿಸಿದ್ದರು. ಇನ್ನು ನಾಳೆ (ಭಾನುವಾರ) ಡಾಲಿಯ ಜೀವನದ ಇನ್ನಷ್ಟು ಘಟನೆಗಳನ್ನು ವೀಕೆಂಡ್ ವಿತ್ ರಮೇಶ್ ಹೊತ್ತು ತರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ
ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನವೆಂದರೆ ಮಂತ್ರಿಯ ಹುದ್ದೆಯಲ್ಲ: ವಿಜಯೇಂದ್ರ
ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನವೆಂದರೆ ಮಂತ್ರಿಯ ಹುದ್ದೆಯಲ್ಲ: ವಿಜಯೇಂದ್ರ
ಕೇರಳದ ತ್ರಿಶೂರ್‌ನಲ್ಲಿ ಟ್ಯಾಂಕ್‌ಗೆ ಬಿದ್ದು ಆನೆ ಮರಿ ಸಾವು; ವಿಡಿಯೋ ವೈರಲ್
ಕೇರಳದ ತ್ರಿಶೂರ್‌ನಲ್ಲಿ ಟ್ಯಾಂಕ್‌ಗೆ ಬಿದ್ದು ಆನೆ ಮರಿ ಸಾವು; ವಿಡಿಯೋ ವೈರಲ್
ಟಾಯ್ಲೆಟ್ ಕಮೋಡ್ ಒಳಗಿಂದ ಹೊರಬಂದ ಉಡದ ಮರಿ!
ಟಾಯ್ಲೆಟ್ ಕಮೋಡ್ ಒಳಗಿಂದ ಹೊರಬಂದ ಉಡದ ಮರಿ!
‘ಪುಷ್ಪ 2’ ನೋಡಲು ಫ್ಯಾಮಿಲಿ ಸಮೇತ ಬಂದ ಅಲ್ಲು ಅರ್ಜುನ್ ಅಭಿಮಾನಿಗಳು
‘ಪುಷ್ಪ 2’ ನೋಡಲು ಫ್ಯಾಮಿಲಿ ಸಮೇತ ಬಂದ ಅಲ್ಲು ಅರ್ಜುನ್ ಅಭಿಮಾನಿಗಳು