Ramesh Aravind: ‘ವೀಕೆಂಡ್ ವಿತ್ ರಮೇಶ್’​​ಗೆ ಈ ವಾರ ಬರಲಿದ್ದಾರೆ ಇಬ್ಬರು ಸಾಧಕರು

Weekend with Ramesh Season 5: ಮೂರನೇ ಅತಿಥಿಯಾಗಿ ವಿಶೇಷ ವ್ಯಕ್ತಿಯೊಬ್ಬರು ಬರಲಿದ್ದಾರೆ ಎಂದು ಈ ಶೋನ ನಿರೂಪಕ ರಮೇಶ್ ಅರವಿಂದ್ ಅವರು ಈ ಮೊದಲೇ ಘೋಷಣೆ ಮಾಡಿದ್ದರು. ಅವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

Ramesh Aravind: ‘ವೀಕೆಂಡ್ ವಿತ್ ರಮೇಶ್’​​ಗೆ ಈ ವಾರ ಬರಲಿದ್ದಾರೆ ಇಬ್ಬರು ಸಾಧಕರು
ರಮೇಶ್ ಅರವಿಂದ್
Follow us
ರಾಜೇಶ್ ದುಗ್ಗುಮನೆ
|

Updated on:Apr 05, 2023 | 10:35 AM

‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ ಈಗಾಗಲೇ ಎರಡು ಸಾಧಕರು ಬಂದು ಹೋಗಿದ್ದಾರೆ. ಈ ವಾರ ಮೂರನೇ ಸಾಧಕರ ಆಗಮನ ಆಗಲಿದೆ. ಮೂರನೇ ಅತಿಥಿಯಾಗಿ ವಿಶೇಷ ವ್ಯಕ್ತಿಯೊಬ್ಬರು ಬರಲಿದ್ದಾರೆ ಎಂದು ಈ ಶೋನ ನಿರೂಪಕ ರಮೇಶ್ ಅರವಿಂದ್ (Ramesh Aravind) ಅವರು ಈ ಮೊದಲೇ ಘೋಷಣೆ ಮಾಡಿದ್ದರು. ಅವರು ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಈ ವಾರ ಹಿರಿಯ ನಟ ದತ್ತಣ್ಣ (Dattanna) ಅವರು ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ದತ್ತಣ್ಣ ಚಿತ್ರರಂಗದಲ್ಲಿ ಮಾಡಿದ ಸಾಧನೆ ತುಂಬಾನೇ ದೊಡ್ಡದು. ಅದೇ ರೀತಿ ಡಾ. ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಹೃದಯಾಘಾತ ಹೆಚ್ಚುತ್ತಿದೆ. ಡಾ. ಮಂಜುನಾಥ್ ಅವರು ಈ ಬಗ್ಗೆ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸುವ ಸಾಧ್ಯತೆ ಇದೆ. ಇವರು ಈ ಕುರ್ಚಿಗೆ ಅರ್ಹರು ಎಂದು ಅನೇಕರು ಹೇಳಿದ್ದಾರೆ.

ದತ್ತಣ್ಣ ಅವರ ಬದುಕು ಅನೇಕರಿಗೆ ಮಾದರಿ. ಅವರಿಗೆ ಈಗ ವಯಸ್ಸು 80! ಈ ವಯಸ್ಸಿನಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಅವರು ಒಪ್ಪಿ ಮಾಡುವ ಪಾತ್ರಗಳು ಈಗಲೂ ಗಮನ ಸೆಳೆಯುತ್ತವೆ. ಒಪ್ಪಿಕೊಂಡ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಭಾರತೀಯ ವಾಯುಪಡೆಯಲ್ಲಿ ವಿಂಗ್​ ಕಮಾಂಡರ್ ಆಗಿದ್ದರು. 1965-86ರವರೆಗೆ ದೇಶಕ್ಕಾಗಿ ಸೇವೆ ಸಲ್ಲಿಸಿದ್ದರು.

1998ರಲ್ಲಿ ದತ್ತಣ್ಣ ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಸಿನಿಮಾಗಳನ್ನು ಮಾಡಿ ಗಮನ ಸೆಳೆದರು. ಅವರ ಜೀವನ ಅನೇಕರಿಗೆ ಮಾದರಿ. ಅವರ ಬಗ್ಗೆ ಜನರಿಗೆ ತಿಳಿಯದ ಇನ್ನೂ ಅನೇಕ ವಿಷಯಗಳಿವೆ. ಅದನ್ನು ಜನರ ಮುಂದಿಡುವ ಕಾರ್ಯ ‘ವೀಕೆಂಡ್ ವಿತ್ ರಮೇಶ್ ಮೂಲಕ ಆಗುತ್ತಿದೆ. ದತ್ತಣ್ಣ ಬರುತ್ತಿರುವ ಎಪಿಸೋಡ್ ನೋಡಲು ವೀಕ್ಷಕರು ಕಾದಿದ್ದಾರೆ.

ಇದನ್ನೂ ಓದಿ:  ಶೋನಲ್ಲಿ ಮಗನ ಬಗ್ಗೆ ಮಾತನಾಡಿಲಿಲ್ಲವೇಕೆ ಪ್ರಭುದೇವ? ಅಂಥಹದ್ದೇನಾಗಿತ್ತು?

‘ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ಕಿರೀಟ ದತ್ತಣ್ಣ ಅವರು ಬರುತ್ತಿರೋದು ಖುಷಿ ಇದೆ’ ಎಂದು ಅನೇಕರು ಹೇಳಿದ್ದಾರೆ. ನಟಿ ರಮ್ಯಾ ಅವರು ‘ವೀಕೆಂಡ್ ವಿತ್ ರಮೇಶ್​’ ಐದನೇ ಸೀಸನ್​ನ ಮೊದಲ ಅತಿಥಿ ಆಗಿದ್ದರು. ಅವರು ಇಂಗ್ಲಿಷ್​ನಲ್ಲಿ ಮಾತನಾಡಿದ್ದಕ್ಕೆ ಅನೇಕರು ಬೇಸರಗೊಂಡಿದ್ದರು. ಎರಡನೇ ಅತಿಥಿಯಾಗಿ ಪ್ರಭುದೇವ ಬಂದಿದ್ದರು. ತಮಿಳು ಮಾತೃಭಾಷೆ ಆದರೂ ಅವರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದರು. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ದತ್ತಣ್ಣ ಅವರು ಅತಿಥಿಯಾಗಿ ಬರ್ತಿರೋದು ಅನೇಕರಿಗೆ ಖುಷಿ ನೀಡಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:31 am, Wed, 5 April 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು