Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್ ವಿತ್ ರಮೇಶ್​ಗೆ ಬರ್ತಾರಾ ಡಾ ಬ್ರೋ? ರಮೇಶ್ ಅರವಿಂದ್ ಹೇಳಿದ್ದು ಹೀಗೆ…

ಯೂಟ್ಯೂಬರ್ ಡಾ ಬ್ರೋ ಅವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆಸಬೇಕೆಂಬ ಒತ್ತಾಯ ಜೋರಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಕಾರ್ಯಕ್ರಮದ ನಿರೂಪಕ, ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ.

ವೀಕೆಂಡ್ ವಿತ್ ರಮೇಶ್​ಗೆ ಬರ್ತಾರಾ ಡಾ ಬ್ರೋ? ರಮೇಶ್ ಅರವಿಂದ್ ಹೇಳಿದ್ದು ಹೀಗೆ...
ವೀಕೆಂಡ್ ವಿತ್ ರಮೇಶ್
Follow us
ಮಂಜುನಾಥ ಸಿ.
|

Updated on: Apr 03, 2023 | 6:08 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್ ಪ್ರಾರಂಭವಾಗಿ ಎರಡು ವಾರಗಳಾಗಿವೆ. ಈಗಾಗಲೇ ಇಬ್ಬರು ಸಾಧಕರು ಸಾಧಕರ ಕುರ್ಚಿ ಏರಿದ್ದಾರೆ. ಪ್ರತಿ ಬಾರಿ ವೀಕೆಂಡ್ ವಿತ್ ರಮೇಶ್ ಆರಂಭವಾಗುವಾಗಲೂ ಈ ಬಾರಿ ಇಂಥಹಾ ಸಾಧಕರು ಕುರ್ಚಿ ಅಲಂಕರಿಸಿದರೆ ಚೆಂದ ಎಂಬ ನಿರೀಕ್ಷೆ ಪ್ರೇಕ್ಷಕರಿಗಿರುತ್ತದೆ. ಸಾಮಾಜಿಕ ಜಾಲತಾಣದ ಮೂಲಕ ಅದನ್ನು ಪ್ರಕಟ ಪಡಿಸುತ್ತಾರೆ ಸಹ. ಹಾಗೆಯೇ ಈ ಬಾರಿ ಜನಪ್ರಿಯ ಕನ್ನಡ ಯೂಟ್ಯೂಬರ್ ಡಾ ಬ್ರೊ (Dr Bro) ಅವರನ್ನು ವೀಕೆಂಡ್ ವಿತ್ ರಮೇಶ್​ಗೆ ಕರೆಸಿ ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು (Raghavendra Hunasuru) ಅವರು ‘ಡಾ ಬ್ರೋ ಇನ್ನೂ ಅಷ್ಟೋಂದು ಜನಪ್ರಿಯರಲ್ಲ, ಮುಂದೆ ನೋಡೋಣ’ ಎಂಬರ್ಥದ ಮಾತುಗಳನ್ನಾಡಿದ್ದರು. ಇದು ಹಲವು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್ ಈ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಹೊಸ ಸಿನಿಮಾ ಶಿವಾಜಿ ಸೂರತ್ಕಲ್ 2 (Shivaji Surathkal 2) ಪ್ರಚಾರಾರ್ಥ ಯೂಟ್ಯೂಬ್ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಮೇಶ್ ಅರವಿಂದ್, ”ನಾನು ಸಾಮಾನ್ಯವಾಗಿ ಅತಿಥಿಗಳ ಆಯ್ಕೆ ವಿಷಯದಲ್ಲಿ ಹೆಚ್ಚಾಗಿ ತಲೆ ಹಾಕುವುದಿಲ್ಲ. ಆದರೆ ಕರ್ನಾಟಕದ ಎಲ್ಲ ಒಳ್ಳೆಯ ಜನರನ್ನು, ಸಾಧಕರನ್ನು ಕಾರ್ಯಕ್ರಮಕ್ಕೆ ಕರೆತರಬೇಕು, ಅವರನ್ನು ಪರಿಚಯಿಸಬೇಕು ಎಂಬ ಆಸೆ. ಯಾವುದೋ ಒಂದು ಕಾರಣಕ್ಕೆ ಒಬ್ಬರು ಯುವಕರಿಗೆ ಹಿಡಿಸಿದ್ದಾರೆ ಎಂದರೆ ಅದನ್ನು ನಾವು ಗೌರವಿಸಲೇ ಬೇಕಾಗುತ್ತದೆ” ಎಂದಿದ್ದಾರೆ.

”ಕಾರ್ಯಕ್ರಮದ ಉದ್ದೇಶವೇ ಸಾಧಕರನ್ನು ಗುರುತಿಸುವುದು ಗೌರವಿಸುವುದು ಆಗಿದೆ. ಹಾಗಾಗಿ ಕೇವಲ ಒಬ್ಬರು ಮಾತ್ರವೇ ಅಲ್ಲ ಎಲ್ಲ ಸಾಧಕರನ್ನು ಗುರುತಿಸಿ ಅವರ ಕತೆಗಳನ್ನು ಜನರಿಗೆ ಹೇಳಬೇಕು ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಶುರು ಮಾಡಿರುವುದು. ಆದರೆ ಎಲ್ಲವೂ ಈಗಲೇ ಆಗಿಬಿಡಬೇಕು, ಮುಂದಿನ ವಾರವೇ ಮುಗಿದು ಬಿಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ. ಎಲ್ಲ ಸಾಧಕರು ಆ ಕುರ್ಚಿಯ ಮೇಲೆ ಕೂರಬೇಕು, ಸ್ವಲ್ಪ ತಡ ಆಗಬಹುದು. ಆದರೆ ಎಲ್ಲರೂ ವೇದಿಕೆಗೆ ಬರಬೇಕು ಎಂಬುದೇ ನನ್ನ ವೈಯಕ್ತಿಕ ಆಸೆ” ಎಂದು ಘನತೆಯುಕ್ತ ಉತ್ತರ ನೀಡಿದ್ದಾರೆ ರಮೇಶ್ ಅರವಿಂದ್.

ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ ಲಾಂಚ್ ಸಂದರ್ಭದಲ್ಲಿ ಇದೇ ವಿಷಯವಾಗಿ ಮಾತನಾಡಿದ್ದ ರಾಘವೇಂದ್ರ ಹುಣಸೂರು ಅವರು, ಡಾ.ಬ್ರೋ ಅವರನ್ನು ಕರೆಸುತ್ತೀರ ಎಂದು ಪ್ರಶ್ನೆ ಮಾಡಿದ ಸಂದರ್ಶಕನನ್ನು ಉದ್ದೇಶಿಸಿ ”ನಿಮ್ಮ ತಾಯಿಗೆ ಡಾ ಬ್ರೊ ಗೊತ್ತಾ? ನಿಮ್ಮ ಅಜ್ಜಿಗೆ ಗೊತ್ತಾ?’ ಎಂದು ಪ್ರಶ್ನಿಸಿದ್ದರು, ಮಾತು ಮುಂದುವರೆಸಿ, ”ಟಿವಿ ಎಂಬುದು ಬಹಳ ಭಿನ್ನ ಮಾಧ್ಯಮ. ನಾವು ಟ್ರೆಂಡಿಂಗ್, ಟ್ರೋಲಿಂಗ್ ಎಂದು ಕರೆಯುತ್ತೀವಲ್ಲ ಅದು ಬಹಳ ಸಂಕುಚಿತ ವ್ಯಾಪ್ತಿ ಹೊಂದಿರುವ ಪ್ರಪಂಚ. ಟಿವಿ ಎಂಬುದು ಗ್ರಾಮೀಣ ಪ್ರದೇಶವೂ ಒಳಗೊಂಡಂತೆ ಬಹಳ ದೊಡ್ಡ ಸಾಗರ. ಡಾ ಬ್ರೋ ಅನ್ನು ಗಣನೆಗೆ ತೆಗೆದುಕೊಳ್ಳಲು ಅಡ್ಡಿಯಿಲ್ಲ, ಆದರೆ ಸದ್ಯಕ್ಕೆ ಅವರನ್ನು ಆಹ್ವಾನಿಸುತ್ತಿಲ್ಲ. ನಮ್ಮ ತಂಡವು ಆ ಬಗ್ಗೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತದೆ” ಎಂದಿದ್ದರು.

ಇದನ್ನೂ ಓದಿ: ‘ಸಂಜು ಐ ಲವ್​ ಯೂ’ ಎಂದ ರಮ್ಯಾ, ಅಪ್ಪು ನೆನೆದು ಕಣ್ಣೀರು; ‘ವೀಕೆಂಡ್ ವಿತ್ ರಮೇಶ್’ ಹೈಲೈಟ್ಸ್

ಡಾ ಬ್ರೋ ಕನ್ನಡದ ಜನಪ್ರಿಯ ಟ್ರಾವೆಲ್ ವ್ಲಾಗ್ ಯೂಟ್ಯೂಬರ್. ವಿದೇಶಗಳಿಗೆ ಹೋಗಿ ಅಲ್ಲಿ ಅದ್ಭುತ ಸಾಹಸಗಳನ್ನು ಮಾಡುವ, ಅಲ್ಲಿನ ಪರಿಸರ, ಜನರ ಬದುಕು, ರೀತಿ ನೀತಿಗಳನ್ನು ಪರಿಚಯಿಸುವ ಕಾರ್ಯವನ್ನು ಅವರು ಮಾಡುತ್ತಾ ಬಂದಿದ್ದಾರೆ. ಡಾ ಬ್ರೋಗೆ ಈಗಾಗಲೇ ದೊಡ್ಡ ಅಭಿಮಾನಿ ವರ್ಗವಿದೆ. ಇನ್ನು ವೀಕೆಂಡ್ ವಿತ್ ರಮೇಶ್​ನ ನಾಲ್ಕು ಎಪಿಸೋಡ್​ಗಳು ಮುಗಿದಿದ್ದು, ರಮ್ಯಾ ಹಾಗೂ ಪ್ರಭುದೇವ ಅವರುಗಳು ಅತಿಥಿಗಳಾಗಿ ಭಾಗವಹಿಸಿದ್ದಾರೆ. ಮುಂದೆ ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್, ಸದ್ಗುರು ಜಗ್ಗಿ ವಾಸುದೇವ್, ನಟ, ನಿರ್ದೇಶಕ ರಿಷಬ್ ಶೆಟ್ಟಿ, ಧೃವ ಸರ್ಜಾ, ಮಾಲಾಶ್ರೀ, ರಚಿತಾ ರಾಮ್, ಇನ್ನೂ ಕೆಲವರು ಭಾಗವಹಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?