Weekend With Ramesh: ಪ್ರಭುದೇವಗೆ ಕೈಗೆ ಸಿಕ್ಕ ಆ ಒಂದು ಕ್ಯಾಸೆಟ್, ಅವರ ಭವಿಷ್ಯ ಬದಲಾಯಿಸಿತು

Weekend With Ramesh: ಪ್ರಭುದೇವ ಕೈಗೆ ಸಿಕ್ಕ ಒಂದು ಕ್ಯಾಸೆಟ್ ಅವರ ಭವಿಷ್ಯವನ್ನು ಬದಲಾಯಿಸಿತು, ನೃತ್ಯವನ್ನು ಅವರ ನೋಡುತ್ತಿದ್ದ ರೀತಿಯನ್ನು ಬದಲಾಯಿಸಿತು. ಯಾವುದು ಆ ಕ್ಯಾಸೆಟ್?

Weekend With Ramesh: ಪ್ರಭುದೇವಗೆ ಕೈಗೆ ಸಿಕ್ಕ ಆ ಒಂದು ಕ್ಯಾಸೆಟ್, ಅವರ ಭವಿಷ್ಯ ಬದಲಾಯಿಸಿತು
ಪ್ರಭುದೇವ
Follow us
ಮಂಜುನಾಥ ಸಿ.
|

Updated on: Apr 02, 2023 | 11:42 PM

ವೀಕೆಂಡ್ ವಿತ್ ರಮೇಶ್​ ಗೆ (Weekend With Ramesh) ಅತಿಥಿಯಾಗಿ ಬಂದಿದ್ದ ಪ್ರಭುದೇವ (Prabhu Deva) ತಮ್ಮ ಜೀವನದ ಹಲವು ಪ್ರಮುಖ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ತಮ್ಮ ಭವಿಷ್ಯವನ್ನು ಬದಲಾಯಿಸಿದ ಒಂದು ಘಟನೆಯನ್ನು ಪ್ರಭುದೇವ ನೆನಪು ಮಾಡಿಕೊಂಡಿದ್ದಾರೆ. ಪ್ರಭುದೇವ ಬಹಳ ಎಳವೆಯಿಂದಲೇ ನೃತ್ಯ ಕಲಿಯಲು ಆರಂಭಿಸಿದ್ದರು. ಅವರ ತಂದೆ ಮೂಗುರು ಸುಂದರಂ ಅವರು ದೊಡ್ಡ ನೃತ್ಯ ನಿರ್ದೇಶಕರಾಗಿದ್ದರಾದ್ದರಿಂದ ತಮ್ಮ ಮಕ್ಕಳಾದ ರಾಜಸುಂದರಂ, ಪ್ರಭುದೇವ ಹಾಗೂ ನಾಗೇಂದ್ರ ಪ್ರಸಾದ್ ಅವರನ್ನು ಒಳ್ಳೆಯ ನೃತ್ಯ ಗುರುಗಳ ಬಳಿ ಭರತ ನಾಟ್ಯ ಕಲಿಯಲು ತೊಡಗಿಸಿದ್ದರು. ಆದರೆ ಭರತ ನಾಟ್ಯ ಕಲಿಯುವ ಸಂದರ್ಭದಲ್ಲಿಯೇ ಪ್ರಭುದೇವ ಅವರ ಕೈಗೆ ಸಿಕ್ಕ ಕ್ಯಾಸೆಟ್ ಒಂದು ಅವರಿಗೆ ನೃತ್ಯದ ಬಗೆಗಿದ್ದ ದೃಷ್ಟಿಕೋನವನ್ನೇ ಬದಲಾಯಿಸಿಬಿಟ್ಟಿತು.

ಹೌದು, ಪ್ರಭುದೇವ ನೃತ್ಯ ಕಲಿಯುವಾಗ ಅವರಿಗೆ ಥ್ರಿಲ್ಲರ್ ಹೆಸರಿನ ಕ್ಯಾಸೆಟ್ ಸಿಕ್ಕಿತ್ತು. ವಿಶ್ವಪ್ರಸಿದ್ಧ ಸಂಗೀತಗಾರ ಹಾಗೂ ಡ್ಯಾನ್ಸರ್ ಮೈಕಲ್ ಜಾಕ್ಸನ್ (Michael Jackson) ಅವರ 1982 ರ ಸೂಪರ್ ಹಿಟ್ ಆಲ್ಬಂ ಥ್ರಿಲ್ಲರ್. ಬೀಟ್ ಇಟ್ ಸೇರಿದಂತೆ ಹಲವು ಹಾಡುಗಳು ಆ ಆಲ್ಬಂನಲ್ಲಿದ್ದವು. ಪ್ರಭುದೇವ ಅವರು ಆ ಆಲ್ಬಂನ ವಿಸಿಆರ್ ಕ್ಯಾಸೆಟ್ ಅನ್ನು ತೆಗೆದುಕೊಂಡು ಅದನ್ನು ನೋಡಲು ವಿಸಿಆರ್ ಅನ್ನು ಬಾಡಿಗೆ ತಂದಿದ್ದರಂತೆ. ‘ಆ ಕ್ಯಾಸೆಟ್ ನೋಡುತ್ತಲೇ ನನಗೆ ರೋಮಾಂಚನವಾಗಿ ಬಿಟ್ಟಿತು. ನಾನು ಹೊಸದೇನನ್ನೋ ನೋಡಿದೆ. ಅಲ್ಲಿಯವರೆಗೆ ನಾನು ಆ ರೀತಿಯ ಡ್ಯಾನ್ಸ್ ನೋಡಿರಲೇ ಇಲ್ಲ. ಮೈಕಲ್ ಜಾಕ್ಸನ್ ಡ್ಯಾನ್ಸ್ ಮಾಡಿದ ರೀತಿ ನನ್ನನ್ನು ಮಂತ್ರಮುಗ್ಧಗೊಳಿಸಿಬಿಟ್ಟಿತು’ ಎಂದು ನೆನಪಿಸಿಕೊಂಡಿದ್ದಾರೆ ಪ್ರಭುದೇವ.

‘ಅಂದು ಮೈಕಲ್ ಜಾಕ್ಸನ್​ರ ಥ್ರಿಲ್ಲರ್ ನೋಡಿದ ಬಳಿಕ ಆ ಮಾದರಿಯ ಡ್ಯಾನ್ಸ್ ನನ್ನನ್ನು ಕಾಡಲು ಆರಂಭಿಸಿತು. ನಾನು ಎಲ್ಲಿದ್ದರು ಏನು ಮಾಡುತ್ತಿದ್ದರೂ ಡ್ಯಾನ್ಸ್ ಮಾಡಲು ಆರಂಭಿಸಿದೆ. ಒಂದು ರೀತಿ ಹುಚ್ಚನಾಗಿಬಿಟ್ಟಿದ್ದೆ, ನೃತ್ಯ ಕಲಿಯುವಾಗಲು ಮಧ್ಯದಲ್ಲಿ ಒಂದೊಂದು ಬ್ರೇಕ್ ಡ್ಯಾನ್ಸ್ ಸ್ಟೆಪ್ಸ್ ಸೇರಿಸಿಬಿಡುತ್ತಿದ್ದ, ನನ್ನ ಗುರುಗಳು ನನ್ನನ್ನು ಬೈಯ್ಯುತ್ತಿದ್ದರೂ ಆದರೂ ಆ ಅಭ್ಯಾಸ ನನ್ನಿಂದ ಹೋಗುತ್ತಿರಲಿಲ್ಲ’ ಎಂದ ಪ್ರಭುದೇವ, ‘ಮೈಕಲ್ ಜಾಕ್ಸನ್ ನನ್ನ ಮೇಲೆ ಬೀರಿದ ಪ್ರಭಾವ ಬಹಳ ದೊಡ್ಡದು’ ಎಂದು ನೆನಪು ಮಾಡಿಕೊಂಡರು.

ಇದನ್ನೂ ಓದಿ: Prabhu Deva: ಅಪ್ಪ ಮಾಡಿದ ಒಂದು ಸಣ್ಣ ಕಾರ್ಯ ಪ್ರಭುದೇವ ಜೀವನವನ್ನೇ ಬದಲಿಸಿಬಿಟ್ಟಿತು

ಶೋನಲ್ಲಿ ಹಲವು ಬಾರಿ ಅವರು ಮೈಕಲ್ ಜಾಕ್ಸನ್ ಅವರನ್ನು ನೆನಪು ಮಾಡಿಕೊಂಡರು ಪ್ರಭುದೇವ. ಮೈಕಲ್ ಜಾಕ್ಸನ್ ಒಮ್ಮೆ ಮುಂಬೈಗೆ ಬಂದಾಗ ನಿರ್ಮಾಪಕರೊಬ್ಬರ ಸಹಾಯದಿಂದ ತಾವು ಅವರನ್ನು ಭೇಟಿಯಾಗಿದ್ದಾಗಿಯೂ, ಅಂದು ಅವರು ನನಗೆ ಏನೋ ಹೇಳಿದರು ಆದರೆ ಅದು ನನಗೆ ನೆನಪಿಲ್ಲ ಏಕೆಂದರೆ ಅವರನ್ನು ನೋಡಿ ನಾನು ಶಾಕ್​ನಲ್ಲಿದ್ದೆ ಅವರನ್ನೇ ನೋಡುತ್ತಿದ್ದೆ ಎಂದಿದ್ದಾರೆ ಪ್ರಭುದೇವ. ಶೋನ ಕೊನೆಯಲ್ಲಿ ನಿಮ್ಮ ಈ ಸಾಧನೆಗೆ ಮುಖ್ಯ ಕಾರಣಕರ್ತರು ಯಾರೆಂದಾಗ ತಮಗೆ ನೃತ್ಯ ಹೇಳಿಕೊಟ್ಟ ಧರ್ಮರಾಜ್ ಮಾಸ್ಟರ್, ಲಕ್ಷ್ಮಿನಾರಾಯಣ ಮಾಸ್ಟರ್ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ಸಹ ತಮಗೆ ಗುರುವೇ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ