Weekend With Ramesh: ಅಮವಾಸ್ಯೆಯಲ್ಲಿ ಮೂಡಿದ ಚಂದಿರ ಪ್ರಭುದೇವ!

ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಎರಡನೇ ಅತಿಥಿಯಾಗಿ ಕನ್ನಡಿಗರೇ ಆದ ಆದರೆ ಪರಭಾಷೆಯಲ್ಲಿಯೇ ಮಿಂಚುತ್ತಿರುವ ನೃತ್ಯ ನಿರ್ದೇಶಕ, ನಟ, ನಿರ್ದೇಶಕ, ನಿರ್ಮಾಪಕ ಪ್ರಭುದೇವ ಅವರು ಅತಿಥಿಯಾಗಿ ಆಗಮಿಸಿದ್ದರು.

Weekend With Ramesh: ಅಮವಾಸ್ಯೆಯಲ್ಲಿ ಮೂಡಿದ ಚಂದಿರ ಪ್ರಭುದೇವ!
ಪ್ರಭುದೇವ
Follow us
ಮಂಜುನಾಥ ಸಿ.
|

Updated on:Apr 02, 2023 | 2:33 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್​ನ ಎರಡನೇ ಅತಿಥಿಯಾಗಿ ಕನ್ನಡಿಗರೇ ಆದ ಆದರೆ ಪರಭಾಷೆಯಲ್ಲಿಯೇ ಮಿಂಚುತ್ತಿರುವ ನೃತ್ಯ ನಿರ್ದೇಶಕ, ನಟ, ನಿರ್ದೇಶಕ, ನಿರ್ಮಾಪಕ ಪ್ರಭುದೇವ ಅವರು ಅತಿಥಿಯಾಗಿ ಆಗಮಿಸಿದ್ದರು. ಅವರ ಬಾಲ್ಯ, ಶಿಕ್ಷಣ, ನೃತ್ಯದ ಬಗೆಗಿನ ಸೆಳೆತ, ವೃತ್ತಿಯಲ್ಲಿ ಪ್ರಗತಿ ಎಲ್ಲದರ ಬಗ್ಗೆ ಪ್ರಭುದೇವ ಹಾಗೂ ಅವರ ಆತ್ಮೀಯರು ಮಾಹಿತಿ ನೀಡಿದ್ದಾರೆ. ಅದರಲ್ಲಿಯೂ ಪ್ರಭುದೇವ ಅವರು ಜನಿಸಿದ ದಿನದ ಬಗ್ಗೆ ಅವರ ತಂದೆ ಮೂಗೂರು ಸುಂದರಂ ಆಡಿದ ಮಾತುಗಳು ಗಮನ ಸೆಳೆದವು.

ಅಮವಾಸ್ಯೆಯನ್ನು ಕೆಟ್ಟ ದಿನವನ್ನಾಗಿ ನೋಡಲಾಗುತ್ತದೆ. ಆದರೆ ಪ್ರಭುದೇವ ಜನಿಸಿದ್ದು ಅಮವಾಸ್ಯೆಯಂದೆ. ಅದೂ ಮಂಗಳವಾರದ ಅಮವಾಸ್ಯೆ, ಮಧ್ಯಾಹ್ನ 12 ಗಂಟೆಗೆ. ಅಮವಾಸ್ಯೆ ದಿನ ಹುಟ್ಟಿದ್ದಾನೆಂದು ಮೂಗೂರು ಸುಂದರಂ ಅವರ ಸಂಬಂಧಿಕರೆಲ್ಲರೂ ಮೂಗು ಮುರಿದರಂತೆ, ಆದರೆ ತಂದೆ ಸುಂದರಂಗೆ ಮಗನ ಮೇಲೆ ವಿಪರೀತ ಪ್ರೀತಿ, ಅಪಶಕುನಗಳನ್ನೆಲ್ಲ ನಂಬದೆ ಮಗುವನ್ನು ಒಪ್ಪಿ, ಅಪ್ಪಿಕೊಂಡಿದ್ದಾರೆ.

ಮೂಗೂರು ಸುಂದರಂ ಹಾಗೂ ಮಹದೇವಮ್ಮ ಸುಂದರಂ ಅವರಿಗೆ ಪ್ರಭುದೇವ ಎರಡನೇ ಪುತ್ರ. ಮೊದಲನೇ ಮಗನಿಗೆ ಪ್ರಭುದೇವ ಎಂದು ಹೆಸರಿಡುವ ಆಸೆ ಮೂಗೂರು ಸುಂದರಂ ಅವರಿಗೆ ಇತ್ತಂತೆ ಆದರೆ ಮೊದಲ ಮಗನ ಜಾತಕದ ಪ್ರಕಾರ ಬ ಅಕ್ಷರದಿಂದ ಹೆಸರಿಡಬೇಕು ಎಂದು ಹೇಳಿದರಾದ್ದನಿಗೆ ಅವನಿಗೆ ಬಸವರಾಜು ಎಂದು ಹೆಸರಿಡಲಾಯ್ತು. ಎರಡನೇ ಮಗನಿಗಾದರೂ ತನ್ನಿಷ್ಟದ ಹೆಸರಿಡಬೇಕೆಂದು ಪ್ರಭುದೇವ ಎಂದು ಸುಂದರಂ ಹೆಸರಿಟ್ಟರು. ಆದರೆ ಪ್ರಭುದೇವ ಅಸಲಿ ಹೆಸರು ಚೆನ್ನಮಲ್ಲಿಕಾರ್ಜುನ! ಹುಟ್ಟಿದ ಮಗುವಿಗೆ ದೇವರ ಹೆಸರಿಡಬೇಕೆಂದು ಹಠಮಾಡಿ ಅವರ ತಾಯಿ ಇಟ್ಟ ಹೆಸರಿದು.

ಪ್ರಭುದೇವ ತಮ್ಮ ಬಾಲ್ಯ ಕಳೆದಿದ್ದು ಮೈಸೂರಿನ ದೂರ ಎಂಬ ಊರಿನಲ್ಲಿ. ಬಹುತೇಕರ ಬಾಲ್ಯದಂತೆಯೇ ಬಹಳ ವರ್ಣಮಯವಾಗಿತ್ತು ಪ್ರಭುದೇವ ಅವರ ಬಾಲ್ಯ. ಬಹುತೇಕರ ಬಾಲ್ಯದಂತೆಯೇ ತುಂಟಾಟ, ಆಟ, ಸ್ನೇಹಿತರ ಒಡನಾಟಗಳಿಂದ ದುಂಬಿತ್ತು ಪ್ರಭುದೇವ ಬಾಲ್ಯ. ಪ್ರಭುದೇವ ಅವರ ಎಪಿಸೋಡ್ ವೀಕ್ಷಕರಿಗೆ ತಮ್ಮ ಬಾಲ್ಯವನ್ನು ನೆನಪಿಸುಂತಿತ್ತು.

ಗೆಳೆಯರೊಟ್ಟಿಗೆ ಗೋಳಿ ಆಡಿದ್ದು, ಟೈರು ಉರುಳಿಸಿದ್ದು, ಹಣ್ಣು, ಎಳನೀರು ಕದ್ದಿದ್ದು, ಮಾವನ ಹೆಗಲ ಮೇಲೆ ಕೂತು ಮೈಸೂರು ದಸರಾ ನೋಡಿದ್ದು, ಶಾಲೆಯಲ್ಲಿ ಏಟು ತಿಂದಿದ್ದು, ಹಳ್ಳಿ ಬಿಟ್ಟು ದೊಡ್ಡ ನಗರಕ್ಕೆ ಹೋದಾಗ ಅನುಭವಿಸಿದ ಬೇಸರ, ಏಕಾಂತ ಎಲ್ಲವನ್ನೂ ಪ್ರಭುದೇವ ಶೋನಲ್ಲಿ ನೆನಪಿಸಿಕೊಂಡರು. ಅವರ ಹಲವು ಗೆಳೆಯರು ಶೋಗೆ ಆಗಮಿಸಿ ಪ್ರಭುದೇವ ಕುರಿತಾಗಿ ಮಾತನಾಡಿದರು. ಭಾನುವಾರ ರಾತ್ರಿ ಪ್ರಭುದೇವ ಅವರ ಜೀವನ ಪಯಣದ ಎರಡನೇ ಎಪಿಸೋಡ್ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:56 pm, Sat, 1 April 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ