Prabhu Deva: ‘ವೀಕೆಂಡ್ ವಿತ್ ರಮೇಶ್’ ವೇದಿಕೆ ಮೇಲೆ ಪ್ರಭುದೇವ ಮೂನ್​ವಾಕ್​; ವೀಕ್ಷಕರು ಏನಂದ್ರು?

Weekend With Ramesh: ಕಳೆದ ವಾರ ರಮ್ಯಾ ದಿವ್ಯಾ ಸ್ಪಂದನ ಅವರು ಆಗಮಿಸಿದ್ದರು. ಈ ವಾರ ಪ್ರಭುದೇವ ಅವರು ಆಗಮಿಸಲಿದ್ದಾರೆ. ಈ ಎಪಿಸೋಡ್​ನ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ವೀಕೆಂಡ್​ನಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.

Prabhu Deva: ‘ವೀಕೆಂಡ್ ವಿತ್ ರಮೇಶ್’ ವೇದಿಕೆ ಮೇಲೆ ಪ್ರಭುದೇವ ಮೂನ್​ವಾಕ್​; ವೀಕ್ಷಕರು ಏನಂದ್ರು?
ಪ್ರಭುದೇವ
Follow us
ರಾಜೇಶ್ ದುಗ್ಗುಮನೆ
|

Updated on:Mar 29, 2023 | 2:49 PM

ನಟ ಪ್ರಭುದೇವ (Prabhu Deva) ಅವರು ಡ್ಯಾನ್ಸರ್, ಕೊರಿಯೋಗ್ರಾಫರ್​, ನಿರ್ಮಾಪಕ, ನಟ,  ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಅವರನ್ನು ಅನೇಕರು ಭಾರತದ ಮೈಕಲ್​ ಜಾಕ್ಸನ್ ಎಂದು ಕರೆಯುತ್ತಾರೆ. ‘ವೀಕೆಂಡ್ ವಿತ್ ರಮೇಶ್​ ಸೀಸನ್ 5’ರ (Weekend With Ramesh Season 5) ಎರಡನೇ ಅತಿಥಿಯಾಗಿ ಪ್ರಭುದೇವ ಆಗಮಿಸಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದರಲ್ಲಿ ಪ್ರಭುದೇವ ಮೂನ್ ವಾಕ್ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಬಂದಿದೆ. ಕೆಲವರು ನೆಗೆಟಿವ್ ಕಮೆಂಟ್ ಮಾಡಿದ್ದಾರೆ.

‘ವೀಕೆಂಡ್ ವಿತ್​ ರಮೇಶ್’ ಎಪಿಸೋಡ್ ಅನೇಕ ಸಾಧಕರಿಗೆ ವೇದಿಕೆ ಆಗಿದೆ. ಅನೇಕರ ಸಾಧನೆಯನ್ನು, ಅದರ ಹಿಂದಿನ ಶ್ರಮವನ್ನು ಈ ಶೋ ಮೂಲಕ ಪ್ರೇಕ್ಷಕರ ಮುಂದಿಡುವ ಕಾರ್ಯ ಆಗುತ್ತಿದೆ. ಕಳೆದ ವಾರ ರಮ್ಯಾ ದಿವ್ಯಾ ಸ್ಪಂದನ ಅವರು ಆಗಮಿಸಿದ್ದರು. ಈ ವಾರ ಪ್ರಭುದೇವ ಅವರು ಆಗಮಿಸಲಿದ್ದಾರೆ. ಈ ಎಪಿಸೋಡ್​ನ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ವೀಕೆಂಡ್​ನಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.

View this post on Instagram

A post shared by Zee Kannada (@zeekannada)

‘ಸಾಧಕರ ಕುರ್ಚಿಯಲ್ಲಿ ಮೋಡಿ ಮಾಡೋಕೆ ಈ ವೀಕೆಂಡ್ ಬರ್ತಿದ್ದಾರೆ ಭಾರತದ ಮೈಕೆಲ್ ಜಾಕ್ಸನ್. ವೀಕೆಂಡ್ ವಿತ್ ರಮೇಶ್-5.  ಶನಿ-ಭಾನು ರಾತ್ರಿ 9ಕ್ಕೆ’ ಎಂದು ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡು ಕ್ಯಾಪ್ಶನ್ ನೀಡಿದೆ.

ಪ್ರಭುದೇವ ಹಿನ್ನೆಲೆ

ಪ್ರಭುದೇವ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಡ್ಯಾನ್ಸರ್ ಆಗಿ. 1986ರಲ್ಲಿ ರಿಲೀಸ್ ಆದ ‘ಮೌನ ರಾಗಂ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ, ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ, ಕೊರಿಯೋಗ್ರಾಫರ್ ಆಗಿ ಅವರು ಮಿಂಚಿದ್ದಾರೆ. 2022ರಲ್ಲಿ ರಿಲೀಸ್ ಆದ ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಜೊತೆ ಪ್ರಭುದೇವ ಹೆಜ್ಜೆ ಹಾಕಿದ್ದರು. ಈ ನೆನಪನ್ನು ಅವರು ತೆರೆದಿಡೋ ಸಾಧ್ಯತೆ ಇದೆ.

ಇದನ್ನೂ ಓದಿ: ‘ವೀಕೆಂಡ್​ ವಿತ್​ ರಮೇಶ್’ ಜರ್ನಿ ಹೇಗಿತ್ತು? ವಿಡಿಯೋ ಮೂಲಕ 84 ಸಾಧಕರ ನೆನಪಿಸಿಕೊಂಡ ವಾಹಿನಿ

ಸಲ್ಮಾನ್ ಖಾನ್ ಜೊತೆ ಪ್ರಭುದೇವ ಅವರಿಗೆ ಒಳ್ಳೆಯ ಬಾಂಧವ್ಯ ಇದೆ. ಸಲ್ಲು ನಟನೆಯ ‘ವಾಂಟೆಡ್​’, ‘ದಬಾಂಗ್ 3’, ‘ರಾಧೆ’ ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ‘ರೌಡಿ ರಾಥೋಡ್’ ಮೊದಲಾದ ಚಿತ್ರಗಳಿಗೆ ಇವರ ನಿರ್ದೇಶನ ಇದೆ. ‘ದೇವಿ’ ಮೊದಲಾದ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಇಷ್ಟೇ ಅಲ್ಲದೆ ಗಾಯಕನಾಗಿ, ಗೀತಸಾಹಿತಿ ಆಗಿಯೂ ಅವರು ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:46 pm, Wed, 29 March 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ