AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವೀಕೆಂಡ್​ ವಿತ್​ ರಮೇಶ್’ ಜರ್ನಿ ಹೇಗಿತ್ತು? ವಿಡಿಯೋ ಮೂಲಕ 84 ಸಾಧಕರ ನೆನಪಿಸಿಕೊಂಡ ವಾಹಿನಿ

Weekend With Ramesh Season 5: 2014ರ ಆಗಸ್ಟ್ 2ರಂದು ‘ವೀಕೆಂಡ್ ವಿತ್ ರಮೇಶ್​’ ಮೊದಲ ಸೀಸನ್ ಆರಂಭ ಆಯಿತು. ಅನೇಕ ಸಾಧಕರ ಜರ್ನಿ ಬಗ್ಗೆ ಈ ಶೋನಲ್ಲಿ ತೆರೆದಿಡಲಾಗಿದೆ.

‘ವೀಕೆಂಡ್​ ವಿತ್​ ರಮೇಶ್’ ಜರ್ನಿ ಹೇಗಿತ್ತು? ವಿಡಿಯೋ ಮೂಲಕ 84 ಸಾಧಕರ ನೆನಪಿಸಿಕೊಂಡ ವಾಹಿನಿ
ರಮೇಶ್
ರಾಜೇಶ್ ದುಗ್ಗುಮನೆ
|

Updated on:Mar 25, 2023 | 11:27 AM

Share

‘ವೀಕೆಂಡ್ ವಿತ್ ರಮೇಶ್ ಸೀಸನ್ 5’ ಇಂದಿನಿಂದ (ಮಾರ್ಚ್​ 25) ಆರಂಭ ಆಗುತ್ತಿದೆ. ಈ ಕಾರ್ಯಕ್ರಮವನ್ನು ರಮೇಶ್ ಅರವಿಂದ್ (Ramesh Aravind) ಅವರು ನಡೆಸಿಕೊಡಲಿದ್ದಾರೆ. ಹೊಸ ಸೀಸನ್​ನ ಮೊದಲ ಅತಿಥಿಯಾಗಿ ರಮ್ಯಾ (Ramya Divya Spandana) ಆಗಮಿಸುತ್ತಿದ್ದಾರೆ. ಅವರು ತಮ್ಮ ಜರ್ನಿಯ ನೆನಪನ್ನು ತೆರೆದಿಡಲಿದ್ದಾರೆ. ಅನೇಕ ಸಾಧಕರು ಈ ಶೋಗೆ ಬಂದು ಹೋಗಿದ್ದಾರೆ. ಈವರೆಗೆ 84 ಸಾಧಕರ ಬದುಕನ್ನು ಜನರ ಮುಂದಿಡುವ ಕೆಲಸ ಆಗಿದೆ. ಇದರಲ್ಲಿ ಸಿನಿಮಾ ಮಂದಿ, ರಾಜಕಾರಣಿಗಳು, ಉದ್ಯಮಿಗಳು, ವಕೀಲರು ಮೊದಲಾದ ಕ್ಷೇತ್ರದ ಸಾಧಕರಿದ್ದಾರೆ. ಅವರು ಯಾರ್ಯಾರು ಎನ್ನುವುದನ್ನು ವಿಡಿಯೋ ಮೂಲಕ ಹಂಚಿಕೊಳ್ಳಲಾಗಿದೆ.

2014ರ ಆಗಸ್ಟ್ 2ರಂದು ‘ವೀಕೆಂಡ್ ವಿತ್ ರಮೇಶ್​’ ಮೊದಲ ಸೀಸನ್ ಆರಂಭ ಆಯಿತು. ಪುನೀತ್ ರಾಜ್​ಕುಮಾರ್ ಅವರು ಮೊದಲ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಆ ಸೀಸನ್​ನಲ್ಲಿ ಅನೇಕ ಸಾಧಕರು ತಮ್ಮ ಜರ್ನಿ ಬಗ್ಗೆ ಹೇಳಿಕೊಂಡರು. ಮೊದಲ ಸೀಸನ್ ಯಶಸ್ಸು ಕಾಣುತ್ತಿದ್ದಂತೆ, ಎರಡು, ಮೂರು ಹಾಗೂ ನಾಲ್ಕನೇ ಸೀಸನ್ ಬಂತು. ನಟರಾದ ಅಂಬರೀಷ್, ಕಾಶಿನಾಥ್​, ಯಶ್, ದುನಿಯಾ ವಿಜಯ್, ಶಿವರಾಜ್​ಕುಮಾರ್, ಸುದೀಪ್, ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯ, ಮಾಜಿ ಪ್ರಧಾನಿ ದೇವೇಗೌಡ, ನಟಿ ರಾಧಿಕಾ ಪಂಡಿತ್, ಸುಧಾ ಮೂರ್ತಿ, ಮಾಸ್ಟರ್ ಹಿರಣ್ಣಯ್ಯ ಸೇರಿ ಅನೇಕರು ಸಾಧಕರು ಬಂದು ಹೋಗಿದ್ದಾರೆ.

View this post on Instagram

A post shared by Zee Kannada (@zeekannada)

ಐದನೇ ಸೀಸನ್​ಗೆ ಯಾರೆಲ್ಲ ಬರ್ತಾರೆ?

ಐದನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ರಮ್ಯಾ ಅವರು ಮೊದಲ ಅತಿಥಿಯಾಗಿ ಬರುತ್ತಿದ್ದಾರೆ. ಇದರ ಪ್ರೋಮೋಗಳು ಸದ್ದು ಮಾಡಿವೆ. ರಮ್ಯಾ ಅವರಿಗೆ ಈ ಶೋನಲ್ಲಿ ಸರ್​ಪ್ರೈಸ್ ನೀಡುವ ಕೆಲಸ ಆಗಿದೆ. ರಮ್ಯಾ ಅವರ ಜೀವನದಲ್ಲಿ ಬಂದ ಪ್ರಮುಖರನ್ನು ವೀಕ್ಷಕರಿಗೆ ಪರಿಚಯಿಸಲಾಗುತ್ತಿದೆ. ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಹೀರೋ ಶ್ರೀನಗರ ಕಿಟ್ಟಿ ಸೇರಿ ಅನೇಕರು ವೇದಿಕೆ ಏರಿದ್ದಾರೆ. ಪುನೀತ್ ಅವರ ಫೋಟೋ ನೋಡಿ ರಮ್ಯಾ ಕಣ್ಣೀರು ಹಾಕಿದ್ದಾರೆ.

ಇನ್ನೂ ಯಾರೆಲ್ಲಾ ಬರ್ತಾರೆ?

‘ರಮ್ಯಾ ಅವರ ಎಪಿಸೋಡ್ ಮೊದಲು ಬರುತ್ತದೆ. ಪ್ರಭುದೇವ ಎಪಿಸೋಡ್ ಶೂಟ್ ಮಾಡಿದ್ದೇವೆ. ಇದು ಎರಡನೇ ಎಪಿಸೋಡ್. ಮೂರನೇ ಎಪಿಸೋಡ್ ಓರ್ವ ಸ್ಪೆಷಲ್ ವ್ಯಕ್ತಿಯದ್ದಾಗಿರಲಿದೆ. ರಿಷಬ್ ಡೇಟ್ಸ್ ಕೇಳಿದ್ದೇವೆ. ಅವರು ಸಿಕ್ಕ ನಂತರ ಅವರ ಶೂಟ್ ಕೂಡ ಮಾಡಿಕೊಳ್ಳುತ್ತೇವೆ’ ಎಂದು ರಮೇಶ್ ಅವರು ಇತ್ತೀಚೆಗೆ ಮಾಹಿತಿ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:24 am, Sat, 25 March 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!