AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಮಾಡಿದ ಒಂದು ಸಣ್ಣ ಕಾರ್ಯ ಪ್ರಭುದೇವ ಜೀವನವನ್ನೇ ಬದಲಿಸಿಬಿಟ್ಟಿತು

ಪ್ರಭುದೇವ ಇಂದು ಬಹು ದೊಡ್ಡ ಸ್ಟಾರ್, ಆದರೆ ಪ್ರಭುದೇವ ಸ್ಟಾರ್ ಆಗಲು ಕಾರಣವಾದ ಆ ಒಂದು ಸಣ್ಣ ಘಟನೆ, ತಂದೆ ಮೂಗೂರು ಸುಂದರಂ ಮಾಡಿದ ಆ ಒಂದು ಸಣ್ಣ ಕಾರ್ಯ ತಮ್ಮ ಜೀವನದ ಮೇಲೆ ಅದೆಷ್ಟು ಪ್ರಭಾವ ಬೀರಿತು ಎಂಬುದನ್ನು ಪ್ರಭುದೇವ ನೆನಪಿಸಿಕೊಂಡಿದ್ದಾರೆ.

ಅಪ್ಪ ಮಾಡಿದ ಒಂದು ಸಣ್ಣ ಕಾರ್ಯ ಪ್ರಭುದೇವ ಜೀವನವನ್ನೇ ಬದಲಿಸಿಬಿಟ್ಟಿತು
ಪ್ರಭುದೇವ
ಮಂಜುನಾಥ ಸಿ.
|

Updated on: Apr 02, 2023 | 11:05 PM

Share

ವೀಕೆಂಡ್ ವಿತ್ ರಮೇಶ್​ನಲ್ಲಿ (Weekend With Ramesh) ಅತಿಥಿಯಾಗಿ ಆಗಮಿಸಿರುವ ನಟ, ನಿರ್ದೇಶಕ, ನೃತ್ಯಗಾರ ಪ್ರಭುದೇವ (Prabhu Deva) ನಿನ್ನೆಯ ಎಪಿಸೋಡ್​ನಲ್ಲಿ ತಮ್ಮ ಬಾಲ್ಯ, ಆಗ ಮಾಡಿದ ತುಂಟಾಟಗಳನ್ನು ನೆನಪು ಮಾಡಿಕೊಂಡಿದ್ದರು. ಇಂದಿನ ಎಪಿಸೋಡ್​ನಲ್ಲಿ ಅವರು ತಮ್ಮ ಸಿನಿಮಾ ಪಯಣ, ಚಿತ್ರರಂಗದಲ್ಲಿ ದೊರಕಿದ ಗೆಳೆಯರು, ವಿವಿಧ ಖ್ಯಾತನಾಮರೊಟ್ಟಿಗೆ ಕೆಲಸ ಮಾಡಿದ ಅನುಭವ, ಎಲ್ಲಕ್ಕಿಂತಲೂ ಮಿಗಿಲಾಗಿ ತಮಗೆ ಸಿಕ್ಕ ಗುರುಗಳು, ಸ್ಪೂರ್ತಿ, ತಮ್ಮ ತಂದೆ ನೀಡಿದ ಸ್ಪೂರ್ತಿಯ ಬಗ್ಗೆ ನೆನಪಿಸಿಕೊಂಡು ಭಾವುಕರಾದರು.

ವ್ಯಕ್ತಿಯೊಬ್ಬ ದೊಡ್ಡ ಸಾಧನೆ ಮಾಡಲು ಅವರ ಕುಟುಂಬದವರು ನೀಡುವ ಬೆಂಬಲ ಬಹಳ ಮುಖ್ಯ. ಪ್ರಭುದೇವಗೆ ಅಂಥಹಾ ಬೆಂಬಲ ದೊರಕಿದ್ದು ಅವರ ತಂದೆ ಮೂಗುರು ಸುಂದರಂ ಅವರಿಂದಲೇ. ಸುಂದರಂ ಅವರು ಮಾಡಿದ್ದು ಬಹಳ ಸರಳವಾದ ಕಾರ್ಯವಷ್ಟೆ ಆದರೆ ಅದು ಪ್ರಭುದೇವ ಜೀವನದಲ್ಲಿ ಬಹಳ ಮಹತ್ವದ ಕಾರ್ಯವಾಯಿತು. ಅದರ ಬಗ್ಗೆ ವೀಕೆಂಡ್ ವಿತ್ ರಮೇಶ್​ನಲ್ಲಿ ಪ್ರಭುದೇವ ಮಾತನಾಡಿದ್ದಾರೆ.

ಡ್ಯಾನ್ಸ್​ನಲ್ಲಿ ಎಳವೆಯಿಂದಲೂ ಅಪ್ರತಿಮರಾಗಿದ್ದ ಪ್ರಭುದೇವ ಅವರು ಓದಿನಲ್ಲಿ ಮೊದಲಿನಿಂದಲೂ ಬಹಳ ಹಿಂದಂತೆ. ಅದರಲ್ಲಿಯೂ ರಸಾಯನಶಾಸ್ತ್ರವೆಂದರೆ ಪ್ರಭುದೇವಗೆ ಭಯವೋ ಭಯ. ಹೀಗಿರುವಾಗ ಪಿಯುಸಿಯಲ್ಲಿ ಪ್ರಭುದೇವ ಫೇಲ್ ಆಗಿಬಿಡುತ್ತಾರೆ. ಅಂದು ಬಹಳ ಭಯದಲ್ಲಿದ್ದ ಪ್ರಭುದೇವ ಮನೆಗೆ ಬಂದರೆ ಅಪ್ಪ ಮನೆಯಲ್ಲಿಯೇ ಇದ್ದಾರೆ. ಮೊದಲೇ ಬಹಳ ಶಿಸ್ತಿನ ವ್ಯಕ್ತಿ ಮೂಗೂರು ಸುಂದರಂ. ಪ್ರಭುದೇವಗೆ ಭಯವೋ ಭಯ. ಫೇಲ್ ಆಗಿ ಭಯದಲ್ಲಿ ರೂಂನಲ್ಲಿ ಕೂತಿದ್ದರಂತೆ ಪ್ರಭು, ಮಗ ಫೇಲ್ ಆಗಿದ್ದಾನೆಂದು ತಿಳಿದ ಮೂಗೂರು ಸುಂದರಂ ಅವರು ನಿಧಾನಕ್ಕೆ ಪ್ರಭು ಇದ್ದ ರೂಮಿಗೆ ಬಂದಿದ್ದಾರೆ. ಏನಾಯ್ತು ಎಂದು ಕೇಳಿದಾಗ ಫೇಲ್ ಆಗಿದ್ದೇನೆ ಎಂದರಂತೆ. ಆಗ ಮೂಗುರು ಸುಂದರಂ ಅವರು ಪ್ರಭುದೇವ ಬೆನ್ನನ್ನು ಎರಡು ಬಾರಿ ಮೆತ್ತಗೆ ತಟ್ಟಿ, ಪರವಾಗಿಲ್ಲ ನಿನಗೆ ಏನು ಇಷ್ಟವಾಗುತ್ತದೆಯೋ ಅದನ್ನು ಮಾಡು ಎಂದರಂತೆ.

ಆ ಕ್ಷಣ ಪ್ರಭುದೇವಗೆ ಅಳು ಬಂದುಬಿಟ್ಟಿತಂತೆ, ಆದರೆ ಅಪ್ಪ ಅಂದು ಬೆನ್ನಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು ಎಂದಿದ್ದಾರೆ ಪ್ರಭುದೇವ. ಅದಾದ ಬಳಿಕ ನಾನು ಬದಲಾಗಿಬಿಟ್ಟೆ, ಅಪ್ಪ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಅಂದು ಅಪ್ಪ ಬೆನ್ನು ತಟ್ಟಿದ್ದರಿಂದಲೇ ನಾನು ಇಂದಿನ ಪ್ರಭುದೇವ ಆಗಲು ಸಾಧ್ಯವಾಗಿದ್ದು ಎಂದಿದ್ದಾರೆ ಪ್ರಭು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ