‘ಸಂಜು ಐ ಲವ್​ ಯೂ’ ಎಂದ ರಮ್ಯಾ, ಅಪ್ಪು ನೆನೆದು ಕಣ್ಣೀರು; ‘ವೀಕೆಂಡ್ ವಿತ್ ರಮೇಶ್’ ಹೈಲೈಟ್ಸ್

Weekend With Ramesh: ಮೊದಲ ಎಪಿಸೋಡ್​ಗೆ ರಮ್ಯಾ ಅತಿಥಿ ಎಂದಾಗ ಈ ಕುತೂಹಲ ದುಪ್ಟಟ್ಟಾಗಿತ್ತು. ರಮ್ಯಾ ಎಪಿಸೋಡ್​ನಲ್ಲಿ ಏನೆಲ್ಲ ಇರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

‘ಸಂಜು ಐ ಲವ್​ ಯೂ’ ಎಂದ ರಮ್ಯಾ, ಅಪ್ಪು ನೆನೆದು ಕಣ್ಣೀರು; ‘ವೀಕೆಂಡ್ ವಿತ್ ರಮೇಶ್’ ಹೈಲೈಟ್ಸ್
ರಮೇಶ್-ರಮ್ಯಾ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Mar 23, 2023 | 11:14 AM

‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರ (Weekend with Ramesh) ಮೊದಲ ಎಪಿಸೋಡ್ ಶನಿವಾರ (ಮಾರ್ಚ್ 25) ಪ್ರಸಾರ ಕಾಣಲಿದೆ. ಇದಕ್ಕೆ ಮೊದಲ ಅತಿಥಿಯಾಗಿ ರಮ್ಯಾ ಆಗಮಿಸಲಿದ್ದಾರೆ. ಈಗಾಗಲೇ ಇದರ ಶೂಟಿಂಗ್ ಪೂರ್ಣಗೊಂಡಿದೆ. ಹೊಸ ಸೀಸನ್​ನ ಮೊದಲ ಎಪಿಸೋಡ್​ನಲ್ಲಿ ಏನೆಲ್ಲ ಇರಲಿದೆ ಎಂಬ ವಿಚಾರವನ್ನು ಜೀ ಕನ್ನಡ ವಾಹಿನಿ ರಿವೀಲ್ ಮಾಡಿದೆ. ರಮ್ಯಾ ಎಪಿಸೋಡ್​ನ ಪ್ರೋಮೋನ ಹಂಚಿಕೊಳ್ಳಲಾಗಿದೆ. ಇದರಲ್ಲಿ ರಮ್ಯಾ ಅವರು ಸೀರೆಯಲ್ಲಿ ಮಿಂಚಿದ್ದಾರೆ. ತಮ್ಮ ಜರ್ನಿಯಲ್ಲಿ ಬಂದವರನ್ನು ಅವರು ನೆಪಿಸಿಕೊಂಡಿದ್ದಾರೆ. ಹಲವರು ವೇದಿಕೆ ಏರಿ ರಮ್ಯಾ ಅವರಿಗೆ ಸರ್​ಪ್ರೈಸ್ ನೀಡಿದ್ದಾರೆ. ‘ವೀಕೆಂಡ್ ವಿತ್ ರಮೇಶ್’ ಈಗಾಗಲೇ ನಾಲ್ಕು ಸೀಸನ್ ಪೂರ್ಣಗೊಳಿಸಿದೆ. ಐದನೇ ಸೀಸನ್ ಆರಂಭ ಆಗುತ್ತದೆ ಎಂದಾಗಲೇ ಸಾಕಷ್ಟು ಕುತೂಹಲ ಸೃಷ್ಟಿ ಆಗಿತ್ತು. ಅದರಲ್ಲೂ ಮೊದಲ ಎಪಿಸೋಡ್​ಗೆ ರಮ್ಯಾ ಅತಿಥಿ ಎಂದಾಗ ಈ ಕುತೂಹಲ ದುಪ್ಟಟ್ಟಾಗಿತ್ತು. ಈಗ ಇದರ ಪ್ರೋಮೋ ಹಂಚಿಕೊಳ್ಳಲಾಗಿದೆ. ‘ಮೊದಲ ಎಪಿಸೋಡ್‌ನಲ್ಲಿ ಮೋಡಿ ಮಾಡಲು ಬಂದರು ಸ್ಯಾಂಡಲ್‌ವುಡ್ ಕ್ವೀನ್. ವೀಕೆಂಡ್ ವಿತ್ ರಮೇಶ್-5. ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ’ ಎಂದು ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ.

ಇದನ್ನೂ ಓದಿ: Ramya: ‘ವೀಕೆಂಡ್ ವಿತ್​ ರಮೇಶ್’ ಮೊದಲ ಎಪಿಸೋಡ್​ ಅತಿಥಿ ರಮ್ಯಾ; ‘ನಮ್ಮ ಕ್ವೀನ್​’ ಎಂದ ಫ್ಯಾನ್ಸ್

ರಮ್ಯಾ ಅವರ ವೃತ್ತಿ ಜೀವನದಲ್ಲಿ ರಾಜ್​ಕುಮಾರ್ ಕುಟುಂಬ ವಿಶೇಷವಾಗಿದೆ. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಅವರಿಗೆ ರಮ್ಯಾ ಎಂದು ನಾಮಕರಣ ಮಾಡಿದ್ದೂ ಅವರೇ. ಇದನ್ನು ರಮ್ಯಾ ಉಲ್ಲೇಖ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ ‘ಸಂಜು ಮತ್ತು ಗೀತ’ ಸಿನಿಮಾ ಯಶಸ್ಸು ಕಂಡಿತ್ತು. ಶ್ರೀನಗರ ಕಿಟ್ಟಿ ಕೂಡ ವೇದಿಕೆ ಏರಿದ್ದಾರೆ. ಈ ವೇಳೆ ‘ಐ ಲವ್ ಯೂ ಸಂಜು’ ಎಂದಿದ್ದಾರೆ ರಮ್ಯಾ. ಪುನೀತ್ ಹಾಗೂ ರಮ್ಯಾ ಅವರದ್ದು ಹಿಟ್ ಕಾಂಬಿನೇಷನ್. ಆ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. ರಮ್ಯಾ ಪುನೀತ್ ನೆನೆದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ‘ನಾವು ಭಾರತೀಯರು, ಹಾಗೆಯೇ ಕನ್ನಡಿಗರೂ ಕೂಡ’; ಅದ್ನಾನ್ ಸಮಿ ಹೇಳಿಕೆಗೆ ರಮ್ಯಾ ತಿರುಗೇಟು

2003ರಲ್ಲಿ ರಿಲೀಸ್ ಆದ ಪುನೀತ್ ರಾಜ್​ಕುಮಾರ್ ನಟನೆಯ ‘ಅಭಿ’ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಹೆಚ್ಚಿತು. ಅದೇ ವರ್ಷ ರಿಲೀಸ್ ಆದ ‘ಎಕ್ಸ್​ಕ್ಯೂಸ್​ ಮಿ’ ಸಿನಿಮಾ ಕೂಡ ಗೆದ್ದಿತು. ನಂತರ ಸುದೀಪ್ ಸೇರಿ ಅನೇಕ ಸ್ಟಾರ್​ಗಳ ಜೊತೆ ಅವರು ತೆರೆಹಂಚಿಕೊಂಡರು. ‘ವೀಕೆಂಡ್ ವಿತ್​ ರಮೇಶ್​’ ವೇದಿಕೆ ಮೇಲೆ ಅವರು ಪುನೀತ್ ಕುರಿತ ಅಪರೂಪದ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:38 am, Thu, 23 March 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್