Ramya: ‘ವೀಕೆಂಡ್ ವಿತ್​ ರಮೇಶ್’ ಮೊದಲ ಎಪಿಸೋಡ್​ ಅತಿಥಿ ರಮ್ಯಾ; ‘ನಮ್ಮ ಕ್ವೀನ್​’ ಎಂದ ಫ್ಯಾನ್ಸ್

ಸಾಧಕರ ಸೀಟ್​ನಲ್ಲಿ ರಮ್ಯಾ ಕುಳಿತಿದ್ದಾರೆ. ಅವರ ಪಕ್ಕ ರಮೇಶ್ ಅರವಿಂದ್ ನಿಂತಿದ್ದಾರೆ. ಈ ಫೋಟೋನ ಬ್ಲರ್ ಮಾಡಲಾಗಿದೆ. ಸದ್ಯ ಈ ಫೋಟೋ ವೈರಲ್ ಆಗಿದೆ.

Ramya: ‘ವೀಕೆಂಡ್ ವಿತ್​ ರಮೇಶ್’ ಮೊದಲ ಎಪಿಸೋಡ್​ ಅತಿಥಿ ರಮ್ಯಾ; ‘ನಮ್ಮ ಕ್ವೀನ್​’ ಎಂದ ಫ್ಯಾನ್ಸ್
Follow us
ರಾಜೇಶ್ ದುಗ್ಗುಮನೆ
|

Updated on:Mar 22, 2023 | 1:07 PM

‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರ (Weekend With Ramesh Season 5) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 25ರಿಂದ ಹೊಸ ಸೀಸನ್ ಶುರುವಾಗಲಿದೆ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಈ ಶೋಗೆ ಮೊದಲ ಅತಿಥಿ ಯಾರು ಎಂಬುದು ರಿವೀಲ್ ಆಗಿದೆ. ಮೋಹಕ ತಾರೆ ರಮ್ಯಾ (Ramya) ಅವರು ಐದನೇ ಸೀಸನ್​ನ ಮೊದಲ ಎಪಿಸೋಡ್​ಗೆ ಅತಿಥಿಯಾಗಿ ಬರಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜೀ ಕನ್ನಡ ವಾಹಿನಿ ಹೊಸ ಪೋಸ್ಟರ್ ಹಂಚಿಕೊಂಡಿದೆ. ಇದನ್ನು ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಈ ಎಪಿಸೋಡ್ ನೋಡಲು ಕಾದಿದ್ದಾರೆ.

ಸಾಧಕರ ಸೀಟ್​ನಲ್ಲಿ ರಮ್ಯಾ ಕುಳಿತಿದ್ದಾರೆ. ಅವರ ಪಕ್ಕ ರಮೇಶ್ ಅರವಿಂದ್ ನಿಂತಿದ್ದಾರೆ. ಈ ಫೋಟೋನ ಬ್ಲರ್ ಮಾಡಲಾಗಿದೆ. ಈ ಫೋಟೋಗೆ ಜೀ ಕನ್ನಡ ವಾಹಿನಿ, ‘ನಿಮ್ಮೆಲ್ಲ ಪ್ರಶ್ನೆ, ಕುತೂಹಲಗಳಿಗೆ ಉತ್ತರ ಕೊಡೋಕೆ ಬರ್ತಿರೋ ಬಹುನಿರೀಕ್ಷಿತ ಶೋನ 5ನೇ ಸೀಸನ್‌ನ ಮೊದಲ ಅತಿಥಿ ಯಾರು ಗೆಸ್ ಮಾಡಿ’ ಎಂದು ಬರೆದುಕೊಂಡಿದೆ. ಇದಕ್ಕೆ ಎಲ್ಲರೂ ಮೋಹಕತಾರೆ ರಮ್ಯಾ ಎಂದು ಕ್ಯಾಪ್ಶನ್ ನೀಡಿದ್ದಾರೆ.

‘ವೀಕೆಂಡ್ ವಿತ್ ರಮೇಶ್​’ ಕಾರ್ಯಕ್ರಮವನ್ನು ಅನೇಕರು ಇಷ್ಟಪಡುತ್ತಾರೆ. ಸಾಧಕರ ಹಿಂದಿನ ಶ್ರಮವನ್ನು ತೋರಿಸುವ ಕೆಲಸ ಈ ಶೋನಿಂದ ಆಗುತ್ತಿದೆ. ರಮ್ಯಾ ಬದುಕಲ್ಲಿ ನಡೆದ ಅನೇಕ ಘಟನೆಗಳು, ಅನೇಕ ಖುಷಿಯ ಕ್ಷಣಗಳು ‘ವೀಕೆಂಡ್ ವಿತ್ ರಮೇಶ್​’ ಎಪಿಸೋಡ್​ನಿಂದ ಪ್ರೇಕ್ಷಕರಿಗೆ ಲಭ್ಯವಾಗಲಿದೆ.

ಇದನ್ನೂ ಓದಿ: ‘ನಾವು ಭಾರತೀಯರು, ಹಾಗೆಯೇ ಕನ್ನಡಿಗರೂ ಕೂಡ’; ಅದ್ನಾನ್ ಸಮಿ ಹೇಳಿಕೆಗೆ ರಮ್ಯಾ ತಿರುಗೇಟು

2003ರಲ್ಲಿ ರಿಲೀಸ್ ಆದ ಪುನೀತ್ ರಾಜ್​ಕುಮಾರ್ ನಟನೆಯ ‘ಅಭಿ’ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಹೆಚ್ಚಿತು. ಅದೇ ವರ್ಷ ರಿಲೀಸ್ ಆದ ‘ಎಕ್ಸ್​ಕ್ಯೂಸ್​ ಮಿ’ ಸಿನಿಮಾ ಕೂಡ ಗೆದ್ದಿತು. ನಂತರ ಸುದೀಪ್ ಸೇರಿ ಅನೇಕ ಸ್ಟಾರ್​ಗಳ ಜೊತೆ ಅವರು ತೆರೆಹಂಚಿಕೊಂಡರು. ಸುದೀಪ್ ಹಾಗೂ ರಮ್ಯಾ, ಪುನೀತ್-ರಮ್ಯಾ ಕೆಮಿಸ್ಟ್ರಿ ಕೆಲಸ ಮಾಡಿತ್ತು. ‘ವೀಕೆಂಡ್ ವಿತ್​ ರಮೇಶ್​’ ವೇದಿಕೆ ಮೇಲೆ ಅವರು ಪುನೀತ್ ಕುರಿತ ಅಪರೂಪದ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: Ramya: ಭಾರತ ಎಂದರೆ ಬಾಲಿವುಡ್ ಮಾತ್ರವಲ್ಲ: ನಟಿ ರಮ್ಯಾ

ರಮ್ಯಾ ಸಿನಿಮಾ ತೊರೆದು ರಾಜಕೀಯದಲ್ಲಿ ಬ್ಯುಸಿ ಆದರು. ನಂತರ ಬಣ್ಣದ ಲೋಕ ಹಾಗೂ ರಾಜಕೀಯ ತೊರೆದು ಹಲವು ವರ್ಷ ಸೈಲೆಂಟ್ ಆಗಿದ್ದರು. ಸದ್ಯ ರಮ್ಯಾ ಅವರು ‘ಉತ್ತರಾಖಂಡ’ ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಡಾಲಿ ಹೀರೋ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:06 pm, Wed, 22 March 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್