AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramya: ಭಾರತ ಎಂದರೆ ಬಾಲಿವುಡ್ ಮಾತ್ರವಲ್ಲ: ನಟಿ ರಮ್ಯಾ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಬೊಟ್ಟು ಟ್ವೀಟ್ ಮಾಡಿರುವ ರಮ್ಯಾ ಭಾರತ ಎಂದರೆ ಬಾಲಿವುಡ್ ಮಾತ್ರವಲ್ಲ ಎಂದಿದ್ದಾರೆ.

Ramya: ಭಾರತ ಎಂದರೆ ಬಾಲಿವುಡ್ ಮಾತ್ರವಲ್ಲ: ನಟಿ ರಮ್ಯಾ
ರಮ್ಯಾ
ಮಂಜುನಾಥ ಸಿ.
|

Updated on: Mar 13, 2023 | 10:48 PM

Share

ತೆಲುಗಿನ ಆರ್​ಆರ್​ಆರ್ (RRR)​ ಸಿನಿಮಾ ಆಸ್ಕರ್ (Oscar) ಗೆದ್ದ ದಿನವೇ ನಟಿ ರಮ್ಯಾ (Ramya) ಟ್ವೀಟ್ (Tweet) ಒಂದನ್ನು ಮಾಡಿದ್ದು, ಭಾರತ ಎಂದರೆ ಬಾಲಿವುಡ್ ಮಾತ್ರವಲ್ಲ ಎಂದಿದ್ದಾರೆ. ಈ ಮಾತನ್ನು ಆಸ್ಕರ್ ಅನ್ನು ಗುರಿಯಾಗಿಸಿಕೊಂಡು ಮಾತ್ರವೇ ಹೇಳಿಲ್ಲ ರಮ್ಯಾ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಬೊಟ್ಟು ಮಾಡಿ ಈ ಟ್ವೀಟ್ ಮಾಡಿದ್ದಾರೆ. ರಮ್ಯಾರ ಟ್ವೀಟ್​ಗೆ ನೆಟ್ಟಿಗರಿಂದ ಬೆಂಬಲ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ಆಟೋ ಡ್ರೈವರ್ ಒಬ್ಬರು ಹಿಂದಿ ಮಾತನಾಡಲು ಒತ್ತಾಯಿಸಿ ಯುವತಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿತ್ತು. ಯುವತಿಯೊಬ್ಬಾಕೆಯೊಟ್ಟಿಗೆ ಆಟೋ ಡ್ರೈವರ್ ಅನ್ನು ಹಿಂದಿಯಲ್ಲಿ ಮಾತನಾಡುವಂತೆ ಹೇಳಿದಾಗ ಆಟೋ ಡ್ರೈವರ್ ಯುವತಿಯೊಟ್ಟಿಗೆ ವಾಗ್ವಾದ ಮಾಡಿದ್ದರು ಆ ಘಟನೆಯ ವಿಡಿಯೋ ಬಹಳ ವೈರಲ್ ಆಗಿತ್ತು.

ಅದೇ ವೈರಲ್ ವಿಡಿಯೋವನ್ನು ಟ್ವೀಟ್ ಮಾಡಿರುವ ರಮ್ಯಾ ”ಆಸ್ಕರ್​ನಲ್ಲಿ ಇಂದು ನಾಟು-ನಾಟು ಹಾಡನ್ನು ತೆಲುಗಿನಲ್ಲಿ ಪ್ರದರ್ಶನ ನೀಡಿದ್ದು ನನಗೆ ಖುಷಿಯಾಯಿತು. ಭಾರತವು ಹಲವು ಭಾಷೆ, ಸಂಸ್ಕೃತಿಗಳುಳ್ಳ ವೈವಿಧ್ಯಮಯ ದೇಶ ಎಂದು ವಿಶ್ವ ಅರ್ಥ ಮಾಡಿಕೊಳ್ಳುವ ಸಮಯ ಬಂದಾಗಿದೆ. ಭಾರತ ಎಂದರೆ ಹಿಂದಿ ಅಲ್ಲ. ಭಾರತ ಎಂದರೆ ಬಾಲಿವುಡ್ ಮಾತ್ರವಲ್ಲ ಎಂದಿದ್ದಾರೆ.

ಸಿನಿಮಾಗಳಲ್ಲಿ ಮತ್ತೆ ಸಕ್ರಿಯವಾಗಿರುವ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿಯೂ ಸಾಮಾಜಿಕ ವಿಷಯಗಳ ಬಗ್ಗೆ ಆಗಾಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲಿಯೂ ಹಿಂದಿ ಹೇರಿಕೆ ವಿರುದ್ಧ, ಏಕ ಸಂಸ್ಕೃತಿ, ಏಕ ಭಾಷೆಯ ಹೇರಿಕೆ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದೇ ದಿನ ಆಸ್ಕರ್ ಗೆದ್ದ ಎಲಿಫೆಂಟ್ ವಿಸ್ಪರರ್ಸ್ ಕಿರು ಡಾಕ್ಯುಮೆಂಟರಿ ಕುರಿತಾಗಿಯೂ ಟ್ವೀಟ್ ಮಾಡಿರುವ ನಟಿ ರಮ್ಯಾ, ಡಾಕ್ಯುಮೆಂಟರಿ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್​ಗೆ ಅಭಿನಂದನೆ ಸಲ್ಲಿಸಿದ್ದಾರೆ, ಮುಂದುವರೆದು, ನಾನಿನ್ನೂ ಡಾಕ್ಯುಮೆಂಟರಿಯನ್ನು ನೋಡಿಲ್ಲ. ಪ್ರಾಣಿಗಳ ವಿಷಯಕ್ಕೆ ಬಂದಾಗ ನಾನು ತುಂಬಾ ದುರ್ಬಲ ಹೃದಯ ಹೊಂದಿದ್ದೇನೆ, ಬೇಗ ಕರಗಿ ಹೋಗುತ್ತೇನೆ. ಹಾಗಾಗಿಯೇ ಡಾಕ್ಯುಮೆಂಟರಿಯನ್ನು ವೀಕ್ಷಿಸಲು ಶಕ್ತಿಯನ್ನು ಕಂಡುಕೊಂಡು ಶೀಘ್ರದಲ್ಲಿಯೇ ನೋಡುತ್ತೇನೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿದ್ದ ನಟಿ ರಮ್ಯಾ ಕಳೆದ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೀಗ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುತ್ತಿರುವ ರಮ್ಯಾ ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯ ಮೂಲಕ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ