ಬಳ್ಳಾರಿಯ ನನ್ನ ಮನೆ, ನಟಿ ರಮ್ಯಾಕೃಷ್ಣರ 300 ಎಕರೆ ಜಮೀನು ಕಬಳಿಸಿದ: ಜನಾರ್ದನ ರೆಡ್ಡಿ ವಿರುದ್ಧ ಅನಿಲ್ ಲಾಡ್ ಗಂಭೀರ ಆರೋಪ

ದೌರ್ಜನ್ಯ ಮತ್ತು ದಬ್ಬಾಳಿಕೆಯ ಮೂಲಕ ಬಳ್ಳಾರಿಯ ನನ್ನ ಮನೆಯನ್ನು ಸೇರಿ ನಟಿ ರಮ್ಯಾಕೃಷ್ಣರವರ 300 ಎಕರೆ ಜಮೀನು ಮತ್ತು ನದಾಫ್ ಸಮುದಾಯದ 150ಎಕರೆ ಜಮೀನು ಕಬಳಿಸಿದ್ದಾರೆ ಎಂದು ಜನಾರ್ದನ ರೆಡ್ಡಿ ವಿರುದ್ದ ಮಾಜಿ ಶಾಸಕ ಅನಿಲ್ ಲಾಡ್ ಆರೋಪಿಸಿದ್ದಾರೆ.

ಬಳ್ಳಾರಿಯ ನನ್ನ ಮನೆ, ನಟಿ ರಮ್ಯಾಕೃಷ್ಣರ 300 ಎಕರೆ ಜಮೀನು ಕಬಳಿಸಿದ: ಜನಾರ್ದನ ರೆಡ್ಡಿ ವಿರುದ್ಧ ಅನಿಲ್ ಲಾಡ್ ಗಂಭೀರ ಆರೋಪ
ಅನಿಲ್​ ಲಾಡ್​, ಜನಾರ್ದನ ರೆಡ್ಡಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 13, 2023 | 1:42 PM

ಬಳ್ಳಾರಿ: ಅಕ್ರಮ ಗಣಿಗಾರಿಕೆ ಅಲ್ಲ, ಜನಾರ್ದನ ರೆಡ್ಡಿ(G. Janardhana Reddy) ಅಕ್ರಮ ಭೂ‌ ಕಬಳಿಕೆ ಮಾಡಿದ್ದಾರೆ. ಇಷ್ಟು ದಿನ ಇವರು ಬಿಜೆಪಿಯಲ್ಲಿ ಇದ್ದರು, ರೆಡ್ಡಿ ಮತ್ತು ಅಮಿತ್ ಶಾ ಒಂದೇ ಎಂದುಕೊಂಡು ದೂರು ನೀಡಿರಲಿಲ್ಲ ಎಂದು ಮಾಜಿ ಶಾಸಕ  ಅನಿಲ್ ಲಾಡ್(Anil Lad)  ಹೇಳಿದರು. ದೌರ್ಜನ್ಯ ಮತ್ತು ದಬ್ಬಾಳಿಕೆಯ ಮೂಲಕ ಬಳ್ಳಾರಿಯ ನನ್ನ ಮನೆಯನ್ನು ಕೂಡ ಕಬಳಿಸಿದ್ದಾರೆ. ಕೆಕೆಆರ್​ಪಿ ಪಕ್ಷ ಕಟ್ಟಿ ಬಳ್ಳಾರಿ ಅಭಿವೃದ್ಧಿ ಮಾಡಿದ್ದು ನಾನೇ ಎನ್ನುವ ರೆಡ್ಡಿ. ಬಳ್ಳಾರಿಯಲ್ಲಿ ಕೇವಲ ನನ್ನ ಮನೆಯಲ್ಲ. ನಟಿ ರಮ್ಯಾಕೃಷ್ಣರವರ 300 ಎಕರೆ ಜಮೀನು ಮತ್ತು ನದಾಫ್ ಸಮುದಾಯದ 150ಎಕರೆ ಜಮೀನು ಕಬಳಿಸಿದ್ದಾರೆ ಎಂದಿದ್ದಾರೆ.

ಮಾಜಿ ಶಾಸಕ ಅನಿಲ್ ಲಾಡ್ ಬಳ್ಳಾರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ವೇ ನಂ 519 ನಂಬರಿನ ನನ್ನ ಮನೆಯನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ. ರಿಜಿಸ್ಟ್ರಾರ್ ಆಫಿಸ್​ನಲ್ಲಿ ಅಲ್ಲ. ನನ್ನ ಮನೆಯನ್ನು ಜಿಂದಾಲ್ ಕಂಪನಿ ಆವರಣದಲ್ಲಿ ಬರೆಸಿಕೊಳ್ಳಲಾಯ್ತು. ನಾನು ಭಯದಿಂದ ಬರೆದುಕೊಟ್ಟೇ. ಇಷ್ಟೇಲ್ಲ ಜಮೀನು ಮನೆ ಬರೆಸಿ‌ಕೊಂಡವರು ಕೇವಲ ನಮಗಷ್ಟೇ ಅಲ್ಲ ಸರ್ಕಾರಕ್ಕೂ ತೆರಿಗೆ ಕಟ್ಟಿಲ್ಲ. ರಿಜಿಸ್ಟರ್ ವ್ಯಾಲ್ಯೂ ಹಣದಿಂದ ರಿಜಿಸ್ಟರ್ ಮಾಡಿಲ್ಲ. ನಾನು ಬಳ್ಳಾರಿ ನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಪಕ್ಷ ನನಗೆ ಟಿಕೆಟ್ ನೀಡುವ ಭರವಸೆ ಇದೆ ಎಂದರು.

ಇದನ್ನೂ ಓದಿ:ಜನಾರ್ಧನ ರೆಡ್ಡಿ ಮತ್ತು ನಾನು ವಿರುದ್ಧ ದಿಕ್ಕುಗಳಲ್ಲಿ ಸಾಗುತ್ತಿದ್ದೇವೆ, ಈ ಬಾರಿ ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧಿಸುತ್ತೇನೆ: ಬಿ ಶ್ರೀರಾಮುಲು

ಇನ್ನು ನಾರಾ ಭರತ್​ ರೆಡ್ಡಿ ಸಹ ಟಿಕೆಟ್​ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಭರತ್​ ರೆಡ್ಡಿಗೆ ಟಿಕೆಟ್ ನೀಡಿದ್ರೆ 150 ಕೋಟಿ ಹಣ ಮಾಡ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ನನಗೆ ಟಿಕೆಟ್ ಸಿಗದಿದ್ದರೇ, ಮುಂದೆ ಎಂಎಲ್​ಸಿ ಮಾಡಿ ಎಂದು ಸೋನಿಯಾ ಗಾಂಧಿಯವರಿಗೆ ಮನವಿ ಮಾಡುತ್ತೆನೆ ಎಂದಿದ್ದಾರೆ. ಜೊತೆಗೆ ಜನಾರ್ದನ ರೆಡ್ಡಿ ವಿರುದ್ಧ ಭೂಕಬಳಿಕೆ ಕುರಿತು ಅಮಿತ್ ಶಾ ಅವರಿಗೆ ದೂರು‌ ನೀಡುವುದಾಗಿ ಮಾಜಿ ಶಾಸಕ ಅನಿಲ್ ಲಾಡ್ ಹೇಳಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ