ವೀಕೆಂಡ್ ವಿತ್ ರಮೇಶ್​ಗೆ ಡಾಲಿ ಧನಂಜಯ್, ಹಲವು ಅಚ್ಚರಿಯ ಅತಿಥಿಗಳು!

Weekend With Ramesh: ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ಶೋನ ಮುಂದಿನ ಅತಿಥಿಯಾಗಿ ಸಾಧಕರ ಕುರ್ಚಿ ಏರಲಿದ್ದಾರೆ.

ವೀಕೆಂಡ್ ವಿತ್ ರಮೇಶ್​ಗೆ ಡಾಲಿ ಧನಂಜಯ್, ಹಲವು ಅಚ್ಚರಿಯ ಅತಿಥಿಗಳು!
ವೀಕೆಂಡ್ ವಿತ್ ರಮೇಶ್​ಗೆ ಡಾಲಿ
Follow us
ಮಂಜುನಾಥ ಸಿ.
|

Updated on: Apr 11, 2023 | 9:24 PM

ವೀಕೆಂಡ್ ವಿತ್ ರಮೇಶ್ (Weekend With Ramesh)​ ಸೀಸನ್ ಐದು ಪ್ರಾರಂಭವಾಗಿ ಮೂರು ವಾರಗಳು ಕಳೆದಿದ್ದು ಈವರೆಗೆ ನಾಲ್ಕು ಅತಿಥಿಗಳು ಸಾಧಕರ ಕುರ್ಚಿ ಅಲಂಕಿರಿಸಿದ್ದಾರೆ. ಇದೀಗ ನಾಲ್ಕನೇ ವಾರದ ಮೊದಲ ಅತಿಥಿ ಯಾರು ಎಂಬ ಚರ್ಚೆಗೆ ಉತ್ತರ ದೊರಕಿದ್ದು, ಈ ವಾರ ಸಾಧಕರ ಕುರ್ಚಿ ಮೇಲೆ ನಟ, ನಿರ್ಮಾಪಕ, ಗೀತ ರಚನೆಕಾರ ಡಾಲಿ ಧನಂಜಯ್ (Daali Dhananjay) ಕೂರಲಿದ್ದಾರೆ. ವಿಶೇಷವೆಂದರೆ ಡಾಲಿ ಧನಂಜಯ್​ರ ಖಾಸಗಿ ಜೀವನದ ಹಲವು ವ್ಯಕ್ತಿಗಳ ಪರಿಚಯ ಈ ಶೋನಲ್ಲಿ ಆಗಲಿದೆ, ಕೆಲವು ಅಪರೂಪದ ಅತಿಥಿಗಳು ಶೋಗೆ ಬರಲಿದ್ದಾರೆ.

ಡಾಲಿ ಧನಂಜಯ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಹತ್ತು ವರ್ಷವಾಗಿದೆ. ಯಾವುದೇ ಗಾಡ್​ಫಾದರ್​ಗಳಿಲ್ಲದೆ ಕೇವಲ ಆಸಕ್ತಿ ಹಾಗೂ ಶ್ರಮದಿಂದಷ್ಟೆ ಚಿತ್ರರಂಗದಲ್ಲಿ ಈ ಹಂತಕ್ಕೆ ಬೆಳೆದು ನಿಂತ ನಟ ಅವರು. ಅವರ ಸಿನಿ ಜರ್ನಿ ಹಲವು ಯುವಕರಿಗೆ ಸ್ಪೂರ್ತಿ. ಇದೇ ಕಾರಣಕ್ಕೆ ವೀಕೆಂಡ್ ವಿತ್ ರಮೇಶ್​ನಲ್ಲಿ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ.

ಡಾಲಿ ಧನಂಜಯ್ ಅವರ ಎಪಿಸೋಡ್​ನಲ್ಲಿ ಅವರ ಜೀವನದ ಬಗ್ಗೆ ಹಲವು ಆಸಕ್ತಿಕರ ವಿಷಯಗಳು ಬೆಳಕಿಗೆ ಬರಲಿವೆ. ಡಾಲಿ ಗೆಳೆಯರ ಬಗ್ಗೆ ಬಹುತೇಕರಿಗೆ ಗೊತ್ತು ಆದರೆ ಅವರ ತಂದೆ-ತಾಯಿ, ಸಹೋದರ, ಸಹೋದರಿಯರ ಬಗ್ಗೆ ಹೆಚ್ಚಿನ ಜನಕ್ಕೆ ಮಾಹಿತಿ ಇಲ್ಲ. ಆದರೆ ವೀಕೆಂಡ್ ವಿತ್ ರಮೇಶ್​ನಲ್ಲಿ ಅದೆಲ್ಲವೂ ಬೆಳಕಿಗೆ ಬರಲಿದೆ. ಮಾತ್ರವಲ್ಲ ಡಾಲಿ ಧನಂಜಯ್​ರ ಅಂಗವಿಕಲ ಸಹೋದರಿ ಸಹ ಅಂದು ಶೋಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಇದು ಸ್ವತಃ ಡಾಲಿಗೆ ಶಾಕ್ ಉಂಟು ಮಾಡಿದೆ ಎನ್ನಲಾಗುತ್ತಿದೆ.

ಡಾಲಿ ಧನಂಜಯ್ ಎಪಿಸೋಡ್​ನಲ್ಲಿ ಚಿತ್ರರಂಗದ ಹಲವು ಗಣ್ಯರು ಕಾಣಿಸಿಕೊಳ್ಳಲಿದ್ದಾರೆ. ನಟಿ ರಮ್ಯಾ, ಕೆಆರ್​ಜಿಯ ಕಾರ್ತಿಕ್ ಗೌಡ, ನಟ ಸುದೀಪ್, ಶಿವಣ್ಣ, ನಿರ್ದೇಶಕ ಸೂರಿ ಇನ್ನೂ ಹಲವರು ಡಾಲಿಗೆ ಶುಭ ಹಾರೈಸಿ ವಿಡಿಯೋಗಳನ್ನು ಕಳಿಸುವ ಸಾಧ್ಯತೆ ಇದೆ. ಜೊತೆಗೆ ಅವರ ಗೆಳೆಯರಾದ ನಾಗಭೂಷಣ್, ಬಾದಲ್, ಮೈಸೂರು ಪೂರ್ಣ ಅವರುಗಳು ಶೋಗೆ ಬರಲಿದ್ದಾರೆ.

ಡಾಲಿ ಧನಂಜಯ್ ವೈಯಕ್ತಿಕ ಜೀವನದ ಹಾಗೂ ವೃತ್ತಿ ಜೀವನದ ಬಗ್ಗೆ ಹಲವು ವಿಷಯಗಳು ಶೋನಲ್ಲಿ ಬಹಿರಂಗಗೊಳ್ಳಲಿವೆ. ಹಾಸ್ಯ ಹಾಗೂ ಭಾವುಕ ಎರಡೂ ಅಂಶಗಳು ಈ ಎಪಿಸೋಡ್​ನಲ್ಲಿ ಇರಲಿವೆ ಎನ್ನಲಾಗುತ್ತಿದೆ. ಇನ್ನು ಡಾಲಿಯ ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಡಾಲಿ ನಟಿಸಿರುವ ಹೊಯ್ಸಳ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಹಿಟ್ ಆಗಿದೆ. ಇದರ ಜೊತೆಗೆ ಉತ್ತರಕಾಂಡ ಹೆಸರಿನ ಸಿನಿಮಾದಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ತೆಲುಗಿನ ಪುಷ್ಪ 2 ಸಿನಿಮಾದಲ್ಲಿಯೂ ಡಾಲಿ ಧನಂಜಯ್ ಇರಲಿದ್ದಾರೆ. ತಮಿಳು ಸಿನಿಮಾ ಒಂದರಲ್ಲಿಯೂ ಧನಂಜಯ್ ನಟಿಸುತ್ತಿದ್ದಾರೆ. ಜೊತೆಗೆ ಸಿನಿಮಾ ಒಂದರ ನಿರ್ಮಾಣವೂ ಚಾಲ್ತಿಯಲ್ಲಿದೆ. ಹೊಸಬರ ಡೇರ್​ಡೆವಿಲ್ ಮುಸ್ತಫಾ ಸಿನಿಮಾವನ್ನು ಪ್ರೆಸೆಂಟ್ ಸಹ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್