ಡಾಲಿಯ ಹೆಸರನ್ನು ಮೊಬೈಲ್​ನಲ್ಲಿ ಏನೆಂದು ಸೇವ್ ಮಾಡಿದ್ದಾರೆ ಸಪ್ತಮಿ ಗೌಡ?

Weekend With Ramesh: ಡಾಲಿ ಧನಂಜಯ್ ಬಗ್ಗೆ ಹಲವು ಅಪರೂಪದ ಸಂಗತಿಗಳ ಹಂಚಿಕೊಂಡ ನಟಿ ಸಪ್ತಮಿ ಗೌಡ. ತಮ್ಮ ಮೊಬೈಲ್​ನಲ್ಲಿ ಡಾಲಿಯ ಹೆಸರನ್ನು ಏನೆಂದು ಸೇವ್ ಮಾಡಿದ್ದಾಗಿಯೂ ಹೇಳಿದ್ದಾರೆ.

ಡಾಲಿಯ ಹೆಸರನ್ನು ಮೊಬೈಲ್​ನಲ್ಲಿ ಏನೆಂದು ಸೇವ್ ಮಾಡಿದ್ದಾರೆ ಸಪ್ತಮಿ ಗೌಡ?
ಸಪ್ತಮಿ ಗೌಡ
Follow us
ಮಂಜುನಾಥ ಸಿ.
|

Updated on: Apr 16, 2023 | 10:59 PM

ಒಂದೇ ಸಿನಿಮಾದ ಯಶಸ್ಸು ನಟಿ ಸಪ್ತಮಿ ಗೌಡ (Sapthami Gowda) ಅವರನ್ನು ಪ್ಯಾನ್ ಇಂಡಿಯಾ (Pan India) ತಾರೆಯನ್ನಾಗಿ ಮಾಡಿದೆ. ಕಾಂತಾರ (Kantara) ಸಿನಿಮಾ ಮೂಲಕ ದೊಡ್ಡ ಯಶಸ್ಸು ಗಳಿಸಿರುವ ಸಪ್ತಮಿ ಗೌಡ (Sapthami Gowda) ಅದರ ಬಳಿಕ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಿ ಬಂದಿದ್ದು ಕನ್ನಡದಲ್ಲಿಯೂ ಒಂದರ ಹಿಂದೆ ಒಂದು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಸಪ್ತಮಿ ಗೌಡಗೆ ದೊಡ್ಡ ಯಶಸ್ಸು ಕೊಟ್ಟಿದ್ದು ಕಾಂತಾರ ಸಿನಿಮಾ ಆದರೂ, ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾಪ್​ಕಾರ್ನ್ ಮಂಕಿ ಟೈಗರ್ (Popcorn Monkey Tiger) ಸಿನಿಮಾ. ಆ ಸಿನಿಮಾದಲ್ಲಿ ಸಪ್ತಮಿ ಎದುರು ಡಾಲಿ ಧನಂಜಯ್ ನಾಯಕ. ಆಗಿನಿಂದಲೂ ಡಾಲಿ ಜೊತೆ ಗೆಳತಿಯಾಗಿರುವ ಸಪ್ತಮಿ ಡಾಲಿಯ ಹೆಸರನ್ನು ಭಿನ್ನವಾಗಿ ಮೊಬೈಲ್​ನಲ್ಲಿ ಸೇವ್ ಮಾಡಿಕೊಂಡಿದ್ದಾರೆ.

ವೀಕೆಂಡ್ ವಿತ್ ರಮೇಶ್​ ಐದನೇ ಸೀಸನ್​ಗೆ ಈ ವಾರದ ಅತಿಥಿಯಾಗಿ ಆಗಮಿಸಿದ್ದ ನಟ ಡಾಲಿ ಧನಂಜಯ್ ಅವರ ಜೀವನಕ್ಕೆ ಸಂಬಂಧಿಸಿದ ಅನೇಕರು ಶೋಗೆ ಬಂದು ಡಾಲಿ ಜೊತೆಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು. ಡಾಲಿಗೆ ಹಲವು ಆತ್ಮೀಯ ಗೆಳೆಯರು ಚಿತ್ರರಂಗದಲ್ಲಿ, ಚಿತ್ರರಂಗದ ಹೊರಗೆ ಇದ್ದಾರೆ. ಅವರಲ್ಲಿ ಅನೇಕರು ಶೋಗೆ ಆಗಮಿಸಿದ್ದರು, ಆದರೆ ನಟಿ ಸಪ್ತಮಿ ಗೌಡ ಶೋಗೆ ಆಗಮಿಸಿ ಡಾಲಿ ಹಾಗೂ ತಮ್ಮ ಗೆಳೆತನ ಎಷ್ಟು ಗಾಢವಾದದ್ದು ಎಂದು ಹೇಳಿದರು. ಸಪ್ತಮಿ, ಡಾಲಿಯ ಶೋಗೆ ಬಂದಿದ್ದು ಸ್ವತಃ ಡಾಲಿಗೆ ಆಶ್ಚರ್ಯ ತಂದಿತು.

ಸಪ್ತಮಿ ಗೌಡ ಕಾಲೇಜು ಓದುವಾಗ ಇವೆಂಟ್ ಒಂದಕ್ಕೆ ಡಾಲಿ ಧನಂಜಯ್ ಅವರನ್ನು ಅತಿಥಿಯಾಗಿ ಕರೆಸಿದ್ದರಂತೆ. ಖಡಕ್ ಪೊಲೀಸ್ ಅಧಿಕಾರಿಯ ಮಗಳು ಕರೆಯುತ್ತಿದ್ದಾಳೆ ಎಂದು ಡಾಲಿ ಸಹ ಹೋಗಿದ್ದಾರೆ ಅಲ್ಲಿ ಹೋದರೆ, ಯುವತಿಯೊಬ್ಬಾಕೆ, ಹುಡುಗರಿಗೆ ಆವಾಜ್ ಹಾಕುತ್ತಾ ಆ ಕೆಲಸ ಮಾಡಿ ಈ ಕೆಲಸ ಮಾಡಿ ಎಂದು ಆಜ್ಞೆ ನೀಡುತ್ತಿದ್ದರಂತೆ ಅವರೇ ಸಪ್ತಮಿ ಗೌಡ. ಅದಾಗಿ ಕೆಲ ಸಮಯದ ಬಳಿಕ ಸೂರಿ ಅವರು ಸಪ್ತಮಿ ಗೌಡ ಅವರನ್ನು ಪಾಪ್​ ಕಾರ್ನ್ ಮಂಕಿ ಟೈಗರ್ ಸಿನಿಮಾಕ್ಕೆ ಹಾಕಿಕೊಂಡಾಗ, ಆ ಪಾತ್ರಕ್ಕೆ ಸರಿಯಾದ ಆಯ್ಕೆಯೇ ಇದು ಎನಿಸಿತ್ತಂತೆ ಧನಂಜಯ್​ಗೆ.

ಇನ್ನು ಶೋಗೆ ಬಂದ ಸಪ್ತಮಿ ಗೌಡ, ಡಾಲಿಯನ್ನು ಎಲ್ಲರೂ ಅಮಾಯಕ, ಮುಗ್ಧ ಎಂದೆಲ್ಲ ಹೇಳುತ್ತಾರೆ ಆದರೆ ಅವರು ಬಹಳ ಪೋಲಿ ಸಹ. ಅವರು ಹೇಳುವ ಜೋಕುಗಳನ್ನು ನಾನು ಕೇಳಿದ್ದೇನೆ ಬಹಳ ನಗಿಸುತ್ತಾರೆ ಎಂದೆಲ್ಲ ಡಾಲಿ ಬಗ್ಗೆ ಗುಟ್ಟು ರಟ್ಟು ಮಾಡಿದರು ಸಪ್ತಮಿ ಗೌಡ. ಜೊತೆಗೆ ತಮ್ಮ ಮೊಬೈಲ್​ನಲ್ಲಿ ಡಾಲಿ ಹೆಸರನ್ನು ದಕ್ಷಿಣಪಥಶ್ವರ ಎಂದು ಸೇವ್ ಮಾಡಿಕೊಂಡಿರುವುದಾಗಿಯೂ ಹೇಳಿದರು. ಈಗ ಅದಕ್ಕೆ ತಕ್ಕಂತೆ ಇಡೀ ದಕ್ಷಿಣ ಭಾರತವನ್ನು ಆಳುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ ಎಂದರು ಸಪ್ತಮಿ.

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್​ಗೆ ಡಾಲಿ ಧನಂಜಯ್, ಹಲವು ಅಚ್ಚರಿಯ ಅತಿಥಿಗಳು!

ಡಾಲಿ ಧನಂಜಯ್ ಜೊತೆಗೆ ಮತ್ತೊಂದು ಘಟನೆ ನೆನಪು ಮಾಡಿಕೊಂಡ ಧನಂಜಯ್, ಪಾಪ್ ಕಾರ್ನ್ ಮಂಕಿ ಟೈಗರ್ ಸಮಯದಲ್ಲಿ, ಲಿಫ್ಟ್​ನಲ್ಲಿ ಹೋಗುತ್ತಿದ್ದಾಗ ಕೆಲವರು ಬಂದು ಡಾಲಿ ಜೊತೆ ಚಿತ್ರತೆಗೆಸಿಕೊಳ್ಳುತ್ತಿದ್ದರಂತೆ ಆದರೆ ಡಾಲಿಯೇ ಸಪ್ತಮಿಯನ್ನು ಅವರಿಗೆ ಪರಿಚಯಿಸಿ ಅವರನ್ನೂ ಫೋಟೊಕ್ಕೆ ಕರೆದರಂತೆ. ನಮ್ಮ ಕುಟುಂಬವೆಲ್ಲ ಜನಪ್ರಿಯ ಆಗಬೇಕು ಎಂದು ಅಂದು ಹೇಳಿದ್ದರಂತೆ ಡಾಲಿ. ಅದು ಅವರ ಗುಣ, ತಾವೊಬ್ಬರೇ ಬೆಳೆದರೆ ಅವರಿಗೆ ಖುಷಿ ಆಗುವುದಿಲ್ಲ ತಮ್ಮೊಟ್ಟಿಗೆ ಎಲ್ಲರೂ ಬೆಳೆಯಬೇಕು ಎಂಬುದು ಅವರ ಆಸೆ ಅವರ ಡಾಲಿ ಪಿಕ್ಚರ್ಸ್ ಧ್ಯೇಯ ಸಹ ಅದೇ ಎಂದು ಹೊಗಳಿದರು ಸಪ್ತಮಿ ಗೌಡ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ