Sapthami Gowda: ‘ಯುವ’ ಸಿನಿಮಾಕ್ಕೆ ಸಪ್ತಮಿ ಗೌಡ ಆಯ್ಕೆ ಆಗಿದ್ದು ಹೇಗೆ? ಕೆಲವೇ ನಿಮಿಷಗಳಲ್ಲಿ ನಿರ್ಧಾರ

ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ಯುವದಲ್ಲಿ ನಾಯಕಿಯಾಗಿರುವ ಸಪ್ತಮಿ ಗೌಡ, ಸಿನಿಮಾದಲ್ಲಿ ನಟಿಸುವ ಅವಕಾಶ ಲಭಿಸಿದ ಬಗ್ಗೆ ಮಾತನಾಡಿದ್ದಾರೆ.

Sapthami Gowda: 'ಯುವ' ಸಿನಿಮಾಕ್ಕೆ ಸಪ್ತಮಿ ಗೌಡ ಆಯ್ಕೆ ಆಗಿದ್ದು ಹೇಗೆ? ಕೆಲವೇ ನಿಮಿಷಗಳಲ್ಲಿ ನಿರ್ಧಾರ
ಸಪ್ತಮಿ ಗೌಡ-ಯುವ
Follow us
ಮಂಜುನಾಥ ಸಿ.
|

Updated on: Mar 11, 2023 | 10:29 PM

ಕಾಂತಾರ‘ (Kantara) ಸಿನಿಮಾ ಮೂಲಕ ದೊಡ್ಡ ಹಿಟ್ ಸಿನಿಮಾ ಖಾತೆಗೆ ಹಾಕಿಕೊಂಡ ನಟಿ ಸಪ್ತಮಿ ಗೌಡ (Sapthami Gowda) ಅವಕಾಶಗಳ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಕಾಂತಾರದ ಬಳಿಕ ಬಾಲಿವುಡ್ ಸಿನಿಮಾದಲ್ಲಿ ನಟಿಸಿ ಬಂದ ಸಪ್ತಮಿಗೆ ಕಾಳಿ ಸಿನಿಮಾದಲ್ಲಿ ಪಾತ್ರ ಸಿಕ್ಕಿತು ಬಳಿಕ ಇದೀಗ ಯುವ ರಾಜ್​ಕುಮಾರ್ (Yuva Rajkumar) ನಟನೆಯ ಚೊಚ್ಚಿಲ ಸಿನಿಮಾ ಯುವ ನಲ್ಲಿ ಸಪ್ತಮಿಯೇ ನಾಯಕಿ? ಈ ಸಿನಿಮಾಕ್ಕೆ ಸಪ್ತಮಿ ಆಯ್ಕೆ ಆಗಿದ್ದು ಹೇಗೆ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಪ್ತಮಿ ಗೌಡ ಟಿವಿ9 ಜೊತೆ ಮಾತನಾಡಿದ್ದು, ಯುವ ರಾಜ್​ಕುಮಾರ್ ಅವರ ಮೊದಲ ಸಿನಿಮಾದಲ್ಲಿ ನಾಯಕಿಯಾಗಲು ಅವಕಾಶ ಸಿಕ್ಕಿದ್ದು ಬಹಳ ಖುಷಿಯಿದೆ. ನಾನು ಅಪ್ಪು ಅವರ ಅಭಿಮಾನಿ, ಸಿನಿಮಾ ರಂಗಕ್ಕೆ ಬಂದಾಗ ಅವರನ್ನೊಮ್ಮೆ ಭೇಟಿಯಾಗುವ ಆಸೆಯಿತ್ತು ಆದರೆ ಆಗಿರಲಿಲ್ಲ. ಆದರೆ ಈಗ ಅವರ ಕುಟುಂಬದವರಿಗೆ ಮುಖ್ಯವಾದ ಸಿನಿಮಾದಲ್ಲಿ ನಾನು ನಟಿಸುತ್ತಿರುವುದು ಖುಷಿ ಇದೆ ಎಂದಿದ್ದಾರೆ.

ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿ, ಈ ವರೆಗೆ ನಾನು ಕಾಣಿಸಿಕೊಳ್ಳದ ರೀತಿಯ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಲೀಲಾ ಪಾತ್ರಕ್ಕೂ ಈ ಪಾತ್ರಕ್ಕೂ ಬಹಳ ವ್ಯತ್ಯಾಸವಿರಲಿದೆ ಎಂದ ಸಪ್ತಮಿ, ಈ ಸಿನಿಮಾದ ಪಾತ್ರ ಸಿಕ್ಕಿದ್ದು ಒಂದು ರೀತಿ ಅದೃಷ್ಟ. ಎಲ್ಲ ಕೇವಲ 30-40 ನಿಮಿಷದಲ್ಲಿ ಆಗಿಬಿಟ್ಟಿತು. ನನ್ನನ್ನು ಕರೆದು ಲುಕ್ ಟೆಸ್ಟ್ ಮಾಡಿದರು ಕೆಲವು ಫೋಟೊಗಳನ್ನು ತೆಗೆದು ಪಾತ್ರ ಡಿಸ್ಕಸ್ ಮಾಡಿದರು ಅದರ ಮಾರನೇಯ ದಿನವೇ ನಾಯಕಿ ನಾನೇ ಎಂದು ಘೋಷಣೆ ಮಾಡಿಬಿಟ್ಟರು. ಮತ್ತೊಮ್ಮೆ ಹೊಂಬಾಳೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದಿದ್ದಾರೆ ಸಪ್ತಮಿ.

ಅಪ್ಪು ಬಗ್ಗೆ ಮಾತು ಮುಂದುವರೆಸಿ, ನನ್ನ ಕುಟುಂಬದಲ್ಲಿ ನನ್ನ ತಾಯಿ ಅಪ್ಪು ಅವರ ಬಹಳ ದೊಡ್ಡ ಅಭಿಮಾನಿ, ಅದನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ ಆದರೂ ಅಪ್ಪು ಅಗಲಿಕೆ ಅವರನ್ನು ಇಂದಿಗೂ ಕಾಡುತ್ತಿದೆ. ಅಪ್ಪು ಇಲ್ಲ ಎನ್ನುವುದನ್ನು ಅವರಿಗೆ ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ ಎಂದಿದ್ದಾರೆ. ದೊಡ್ಮನೆ ಕುಟುಂಬದವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ತಮ್ಮ ಪೋಷಕರಿಗೆ ಬಹಳ ಖುಷಿ ತಂದಿದೆ ಎಂದೂ ಸಹ ಸಪ್ತಮಿ ಹೇಳಿಕೊಂಡಿದ್ದಾರೆ.

ತಮ್ಮ ಮೊದಲ ಬಾಲಿವುಡ್ ಸಿನಿಮಾ ಬಗ್ಗೆಯೂ ಮಾತನಾಡಿರುವ ಸಪ್ತಮಿ ಗೌಡ, ಆ ಸಿನಿಮಾದ ಶೂಟಿಂಗ್ ಮುಗಿಸಿ ಬಂದಿದ್ದೇನೆ. ಬೇಗನೆ ಶೂಟಿಂಗ್ ಮುಗಿಯಿತು ನನ್ನ ಪಾತ್ರದ ಕೆಲಸವನ್ನು ನಾನು ಮುಗಿಸಿದ್ದೇನೆ. ಆ ಸಿನಿಮಾ ಆಗಸ್ಟ್ 15 ಕ್ಕೆ ತೆರೆಗೆ ಬರಲಿದೆ ಎಂದಿದ್ದಾರೆ. ಸಪ್ತಮಿ, ವ್ಯಾಕ್ಸಿನ್ ವಾರ್ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಸಪ್ತಮಿ ಗೌಡ ಪ್ರಸ್ತುತ ಕಾಂತಾರ 2, ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಹಾಗೂ ಯುವ ರಾಜ್​ಕುಮಾರ್ ನಟನೆಯ ಯುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡಾಲಿ ನಟನೆಯ ಉತ್ತರಕಾಂಡ ಸಿನಿಮಾದಲ್ಲಿಯೂ ಸಪ್ತಮಿ ಇರಲಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್