‘ಕನ್ನಡ ಕಲಿಯಿರಿ’; ವೇದಿಕೆ ಮೇಲೆ ಮುಂಬೈ ಮಂದಿಗೆ ನೇರವಾಗಿ ಹೇಳಿದ ಕಿಚ್ಚ ಸುದೀಪ್

ಈ ರೀತಿ ಅವಕಾಶ ಸಿಕ್ಕಾಗ ಅವರು ಎಂದಿಗೂ ಬಿಡುವುದಿಲ್ಲ. ಮುಂಬೈನಲ್ಲಿ ನಡೆದ ‘ಕಬ್ಜ’ ಕಾರ್ಯಕ್ರಮದಲ್ಲೂ ಸುದೀಪ್ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

‘ಕನ್ನಡ ಕಲಿಯಿರಿ’; ವೇದಿಕೆ ಮೇಲೆ ಮುಂಬೈ ಮಂದಿಗೆ ನೇರವಾಗಿ ಹೇಳಿದ ಕಿಚ್ಚ ಸುದೀಪ್
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Mar 11, 2023 | 10:34 AM

ಕಿಚ್ಚ ಸುದೀಪ್​ಗೆ (Kichcha Sudeep) ಕನ್ನಡದ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಪ್ರೀತಿ ಇದೆ. ಯಾರಾದರೂ ಕನ್ನಡದ ತಂಟೆಗೆ ಬಂದರೆ ಅವರು ಸುಮ್ಮನಿರುವುದಿಲ್ಲ. ಕಳೆದ ವರ್ಷ ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳಿದ್ದ ಅಜಯ್​ ದೇವಗನ್ ಅವರಿಗೆ ಸುದೀಪ್ ಟ್ವಿಟರ್​ನಲ್ಲೇ ತಿರುಗೇಟು ಕೊಟ್ಟಿದ್ದರು. ಸದ್ಯ ಅವರು ‘ಕಬ್ಜ’ ಚಿತ್ರದ (Kabzaa Movie) ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಮುಂಬೈಗೆ ತೆರಳಿದ್ದ ಅವರು ಕನ್ನಡ ಕಲಿಯಿರಿ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರಕ್ಕಾಗಿ ಬಾಲಿವುಡ್​ಗೆ ತೆರಳಿದ್ದರು. ಅಲ್ಲಿ ಅವರು ಕನ್ನಡವನ್ನು ‘ಕನ್ನಡ್​​’ ಎಂದವರಿಗೆ ಸರಿಯಾದ ಉಚ್ಚಾರ ಯಾವುದು ಎಂಬುದನ್ನು ತಿದ್ದಿ ಹೇಳುವ ಪ್ರಯತ್ನ ಮಾಡಿದ್ದರು. ಈ ರೀತಿ ಅವಕಾಶ ಸಿಕ್ಕಾಗ ಅವರು ಎಂದಿಗೂ ಬಿಡುವುದಿಲ್ಲ. ಮುಂಬೈನಲ್ಲಿ ನಡೆದ ‘ಕಬ್ಜ’ ಕಾರ್ಯಕ್ರಮದಲ್ಲೂ ಸುದೀಪ್ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ
Image
ಉಪೇಂದ್ರ, ಸುದೀಪ್​, ಶಿವಣ್ಣ ಅಲ್ಲ, ‘ಕಬ್ಜ’ದಲ್ಲಿರುವ ಅಸಲಿ ಮೂರು ಸ್ಟಾರ್​ಗಳು ಇವರೇ; ಉಪ್ಪಿ ಬಿಚ್ಚಿಟ್ರು ಮಾಹಿತಿ  
Image
Kabzaa: ಕಬ್ಜ ಸಿನಿಮಾ ಟಿಕೆಟ್ ಬುಕಿಂಗ್ ಆರಂಭ ಆದರೆ ಬೆಂಗಳೂರಿನಲ್ಲಲ್ಲ!
Image
‘ನನಗೆ ಸಂಭಾವನೆ ಕೊಡುವಾಗ ಅವರು ಅತ್ತರು’; ವೇದಿಕೆ ಮೇಲೆ ಆರ್​. ಚಂದ್ರು ಕಾಲೆಳೆದ ಸುದೀಪ್

ಇದನ್ನೂ ಓದಿ: ಉಪೇಂದ್ರ, ಸುದೀಪ್​, ಶಿವಣ್ಣ ಅಲ್ಲ, ‘ಕಬ್ಜ’ದಲ್ಲಿರುವ ಅಸಲಿ ಮೂರು ಸ್ಟಾರ್​ಗಳು ಇವರೇ; ಉಪ್ಪಿ ಬಿಚ್ಚಿಟ್ರು ಮಾಹಿತಿ   

ವೇದಿಕೆ ಮೇಲೆ ಆಗಿದ್ದೇನು?

‘ಕಬ್ಜ’ ವೇದಿಕೆ ಮೇಲೆ ಸುದೀಪ್​, ಶ್ರೀಯಾ ಶರಣ್​, ಉಪೇಂದ್ರ, ಆರ್​. ಚಂದ್ರು ಇದ್ದರು. ಈ ವೇಳೆ ಆರ್​. ಚಂದ್ರು ಅವರು ಕನ್ನಡದಲ್ಲಿ ಮಾತನಾಡಿದರು. ‘ಕಬ್ಜ ಟೀಂವರ್ಕ್​. ಇದು ಒಳ್ಳೆಯ ತಾಂತ್ರಿಕವರ್ಗದಿಂದ ಆಗಿರೋ ಸಿನಿಮಾ’ ಎಂದರು. ಮುಂಬೈ ಮಂದಿಗೆ ಆರ್. ಚಂದ್ರು ಹೇಳಿದ್ದೇನು ಎಂಬುದು ಅರ್ಥವಾಗಿಲ್ಲ. ಈ ಕಾರಣಕ್ಕೆ ಸುದೀಪ್ ಅವರು ಚಂದ್ರು ಹೇಳಿದ್ದನ್ನು ಭಾಷಾಂತರ ಮಾಡ್ತೀನಿ ಎಂದು ಮೈಕ್ ತೆಗೆದುಕೊಂಡರು. ‘ಅವರು ಹೇಳಿದ್ದು ಇಷ್ಟೇ. ಬೇಗ ಕನ್ನಡ ಕಲಿಯಿರಿ ಎಂದು’ ಎಂಬುದಾಗಿ ಸುದೀಪ್ ಹೇಳಿದರು. ಇದನ್ನು ಕೇಳಿ ಅಲ್ಲಿದ್ದವರೆಲ್ಲ ದೊಡ್ಡದಾಗಿ ನಕ್ಕರು.

ಇದನ್ನೂ ಓದಿ: ‘ನನಗೆ ಸಂಭಾವನೆ ಕೊಡುವಾಗ ಅವರು ಅತ್ತರು’; ವೇದಿಕೆ ಮೇಲೆ ಆರ್​. ಚಂದ್ರು ಕಾಲೆಳೆದ ಸುದೀಪ್

ಮಾರ್ಚ್​ 17ಕ್ಕೆ ಕಬ್ಜ

ಮಾರ್ಚ್​ 17ರಂದು ‘ಕಬ್ಜ’ ಸಿನಿಮಾ ರಿಲೀಸ್ ಆಗುತ್ತಿದೆ. ಅಂದು ಪುನೀತ್​ ರಾಜ್​ಕುಮಾರ್ ಅವರ ಬರ್ತ್​ಡೇ ಅನ್ನೋದು ವಿಶೇಷ. ಈ ಕಾರಣಕ್ಕೂ ಸಿನಿಮಾ ರಿಲೀಸ್ ದಿನಾಂಕ ವಿಶೇಷ ಎನಿಸಿಕೊಂಡಿದೆ. ಈ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶನ ಇದೆ. ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುದೀಪ್, ಶಿವರಾಜ್​ಕುಮಾರ್ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಯಾ ಶರಣ್ ಚಿತ್ರದ ನಾಯಕಿ. ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿ ಹವಾ ಸೃಷ್ಟಿ ಮಾಡಿದೆ. ಟ್ರೇಲರ್ ಕೋಟ್ಯಂತರಬಾರಿ ವೀಕ್ಷಣೆ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:30 am, Sat, 11 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ