Kabzaa: ಕಬ್ಜ ಸಿನಿಮಾ ಚಿತ್ರೀಕರಣದಲ್ಲಿ ಉಪೇಂದ್ರ ಎದುರಿಸಿದ್ದ ಸವಾಲುಗಳು ಒಂದೆರಡಲ್ಲ

ಕಬ್ಜ ಸಿನಿಮಾ ಚಿತ್ರೀಕರಣದಲ್ಲಿ ತಾವು ಎದುರಿಸಿದ ಸವಾಲು, ಸಮಸ್ಯೆಗಳ ಬಗ್ಗೆ ನಟ ಉಪೇಂದ್ರ ಮಾತನಾಡಿದ್ದಾರೆ.

Kabzaa: ಕಬ್ಜ ಸಿನಿಮಾ ಚಿತ್ರೀಕರಣದಲ್ಲಿ ಉಪೇಂದ್ರ ಎದುರಿಸಿದ್ದ ಸವಾಲುಗಳು ಒಂದೆರಡಲ್ಲ
ಉಪೇಂದ್ರ
Follow us
ಮಂಜುನಾಥ ಸಿ.
|

Updated on:Mar 10, 2023 | 8:14 PM

ಉಪೇಂದ್ರ (Upendra) ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಆರ್ ಚಂದ್ರು (R Chandru) ಮೊದಲ ಬಾರಿಗೆ ತಮ್ಮ ಮಿತಿ ದಾಟಿ ಬೃಹತ್ ಸಿನಿಮಾ ಒಂದನ್ನು ಕಟ್ಟಿರುವುದು ಟ್ರೈಲರ್, ಟೀಸರ್​ಗಳಿಂದ ತಿಳಿದು ಬರುತ್ತಿದೆ. ಸುಮಾರು ಒಂದು ವರ್ಷದ ಕಾಲ ಈ ಸಿನಿಮಾದ ಚಿತ್ರೀಕರಣದಲ್ಲಿ ಉಪೇಂದ್ರ ತಮ್ಮನ್ನು ತೊಡಗಿಸಿಕೊಂಡಿದ್ದರು, ಈ ಸಂದರ್ಭದಲ್ಲಿ ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಅವರೇ ಮಾತನಾಡಿದ್ದಾರೆ.

ಟಿವಿ9 ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ‘ಕಬ್ಜ’ ಚಿತ್ರೀಕರಣದ ಸಮಯದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿರುವ ಉಪೇಂದ್ರ, ‘ಬೃಹತ್ ಮೇಕಿಂಗ್ ಅನ್ನು ಒಳಗೊಂಡಂಥಹಾ ಇಂಥಹಾ ಸಿನಿಮಾಗಳಲ್ಲಿ ನಟಿಸಲು ಬಹಳ ದೊಡ್ಡ ತಾಳ್ಮೆ ಬೇಕು. ತಾಳ್ಮೆ ಇಲ್ಲದೆ ಇಂಥಹಾ ಉತ್ಪನ್ನವೊಂದನ್ನು ತೆರೆಗೆ ತರಲು ಸಾಧ್ಯವಿಲ್ಲ’ ಎಂದಿದ್ದಾರೆ.

ಮುಂದುವರೆದು, ”ಸತತವಾಗಿ 150-200 ದಿನ ಚಿತ್ರೀಕರಣ ಮಾಡುವುದು ತ್ರಾಸದಾಯಕ ಕೆಲಸ ಅದೂ ಯಾವಾಗೆಂದರೆ ಆವಾಗ ಚಿತ್ರೀಕರಣಕ್ಕೆ ಹೋಗಬೇಕಿತ್ತು. ಡೇಟ್​ಗಳನ್ನು ಹೊಂದಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿತ್ತು. ಕೊಟ್ಟಿರುವ ಡೇಟ್ಸ್​ಗೆ ಅನುಗುಣವಾಗಿ ಮಾತ್ರವೇ ಕೆಲಸ ಮಾಡುತ್ತೇನೆ ಎಂದರೆ ಇಂಥಹಾ ಸಿನಿಮಾಗಳನ್ನು ಮಾಡಲಾಗುವುದಿಲ್ಲ. ಸಂಪೂರ್ಣವಾಗಿ ಅದರೊಳಗೆ ತೊಡಗಬೇಕಾಗುತ್ತದೆ, ನಮ್ಮ ಸಂಪೂರ್ಣವನ್ನು ನೀಡಬೇಕಾಗುತ್ತದೆ” ಎಂದಿದ್ದಾರೆ ಉಪ್ಪಿ.

”ಡೇಟ್ ಕೊಟ್ಟು ಚಿತ್ರೀಕರಣಕ್ಕೆ ಹೋದಾಗಲು ಎಷ್ಟೋ ದಿನ ಒಂದೂ ಶಾಟ್ ನೀಡದೆ ಅಥವಾ ಕೇವಲ ಒಂದು ಶಾಟ್ ನೀಡಿ ವಾಪಸ್ ಬಂದಿದ್ದೂ ಇದೆ. ಕೇವಲ ಒಂದು ಶಾಟ್​ ನೀಡಲು ಗಂಟೆಗಟ್ಟಲೆ ಕಾದಿದ್ದೂ ಇದೆ. ಇದೆಲ್ಲ ಒಂದು ರೀತಿಯ ಪರೀಕ್ಷೆ. ನಾನು ಡೇಟ್ ಪ್ರಕಾರ ನಡೆದುಕೊಳ್ಳಿ, ಸರಿಯಾದ ಸಮಯಕ್ಕೆ ಶಾಟ್ ಕೊಡಿ ಎಂದೆಲ್ಲ ಒತ್ತಡ ಹೇರಿದಿದ್ದರೆ ಅವರಿಗೆ ಈ ಸಿನಿಮಾವನ್ನೇ ಮಾಡಲಾಗುತ್ತಿರಲಿಲ್ಲ. ಆದರೆ ಅದು ಸರಿಯಲ್ಲ, ಕಷ್ಟಪಟ್ಟು ಒಂದೊಳ್ಳೆ ಸಿನಿಮಾ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನಾನು ಅವರಿಗೆ ಬೆಂಬಲಿಸಬೇಕು ಎನಿಸಿ, ಆ ತಂಡದಲ್ಲಿ ಒಬ್ಬವನಾಗಿ, ಸಮಯ ತೆಗೆದುಕೊಂಡರೆ ತೆಗೆದುಕೊಳ್ಳಲಿ ಎಂದು ಅವರಿಗೆ ತಕ್ಕಂತೆ ಕೆಲಸ ಮಾಡಿದೆ” ಎಂದು ವಿವರಿಸಿದ್ದಾರೆ ಉಪ್ಪಿ.

”ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಅಡಚಣೆಗಳು ಆಗುತ್ತಿದ್ದವು, ಫೈಟ್​ಗಳ ಸಂದರ್ಭದಲ್ಲಿ, ಆ ದೂಳು, ಚಿತ್ರೀಕರಣಕ್ಕೆ ಬಳಸುತ್ತಿದ್ದ ಆ ಕಪ್ಪು ಪೌಡರ್ ಇವನ್ನೆಲ್ಲ ಸಹಿಸಿಕೊಂಡು ನಟಿಸಬೇಕಿತ್ತು. ಇವೆಲ್ಲ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಷಯಗಳು. ಒಮ್ಮೊಮ್ಮೆಯಂತೂ ಶೂಟಿಂಗ್ ಮುಗಿಸಿ ಮನೆಗೆ ಹೋಗಿ ಸೀನಿದರೆ ಕಪ್ಪನೆಯ ದ್ರವ ಹೊರಗೆ ಬರುತ್ತಿತ್ತು” ಎಂದು ಶೂಟಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ ಉಪೇಂದ್ರ.

‘ಕಬ್ಜ’ ಸಿನಿಮಾವು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯನಂತರದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಅರಕೇಶ್ವರ ಎಂಬ ಪಾತ್ರದಲ್ಲಿ ಉಪೇಂದ್ರ ನಟಿಸಿದ್ದು ಮೇಕಿಂಗ್ ಅದ್ಭುತವಾಗಿ ಮೂಡಿ ಬಂದಿರುವುದು ಟೀಸರ್-ಟ್ರೈಲರ್​ನಲ್ಲಿ ಕಂಡು ಬರುತ್ತಿದೆ. ಸಿನಿಮಾದಲ್ಲಿ ಉಪೇಂದ್ರ ಎದುರು ನಾಯಕಿಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ನಟ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮಾರ್ಚ್ 17 ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Fri, 10 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ