AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪೇಂದ್ರ, ಸುದೀಪ್​, ಶಿವಣ್ಣ ಅಲ್ಲ, ‘ಕಬ್ಜ’ದಲ್ಲಿರುವ ಅಸಲಿ ಮೂರು ಸ್ಟಾರ್​ಗಳು ಇವರೇ; ಉಪ್ಪಿ ಬಿಚ್ಚಿಟ್ರು ಮಾಹಿತಿ  

ಉಪೇಂದ್ರ, ಸುದೀಪ್​, ಶಿವಣ್ಣ ಅಲ್ಲ, ‘ಕಬ್ಜ’ದಲ್ಲಿರುವ ಅಸಲಿ ಮೂರು ಸ್ಟಾರ್​ಗಳು ಇವರೇ; ಉಪ್ಪಿ ಬಿಚ್ಚಿಟ್ರು ಮಾಹಿತಿ  

ರಾಜೇಶ್ ದುಗ್ಗುಮನೆ
|

Updated on: Mar 11, 2023 | 8:38 AM

Share

‘ಕಬ್ಜ’ ಚಿತ್ರದಲ್ಲಿ ಉಪೇಂದ್ರ, ಸುದೀಪ್ ಹಾಗೂ ಶಿವರಾಜ್​ಕುಮಾರ್ ಇದ್ದಾರೆ. ಆದರೆ, ಈ ಮೂವರು ಸ್ಟಾರ್ಸ್​ ಅಲ್ಲವಂತೆ.

‘ಕಬ್ಜ’ ಸಿನಿಮಾ (Kabzaa Movie) ರಿಲೀಸ್​ಗೆ ರೆಡಿ ಇದೆ. ಮುಂದಿನ ಶುಕ್ರವಾರ (ಮಾರ್ಚ್​ 17) ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರಕ್ಕೆ ಈಗಾಗಲೇ ಅಬ್ಬರದ ಪ್ರಚಾರ ನೀಡಲಾಗುತ್ತಿದೆ. ಆರ್​. ಚಂದ್ರು ಅವರು ಈ ಸಿನಿಮಾನ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಈ ಚಿತ್ರದಲ್ಲಿ ಉಪೇಂದ್ರ (Upendra), ಸುದೀಪ್ ಹಾಗೂ ಶಿವರಾಜ್​ಕುಮಾರ್ ಇದ್ದಾರೆ. ಆದರೆ, ಈ ಮೂವರು ಸ್ಟಾರ್ಸ್​ ಅಲ್ಲವಂತೆ. ‘ಕಬ್ಜ ತಾಂತ್ರಿಕವಾಗಿ ಶ್ರೀಮಂತವಾಗಿರುವ ಸಿನಿಮಾ. ಸಿನಿಮಾದಲ್ಲಿ ಮೂರು ಸ್ಟಾರ್ಸ್ ಇದ್ದಾರೆ. ಕ್ಯಾಮೆರಾಮ್ಯಾನ್ ಎ.ಜೆ. ಶೆಟ್ಟಿ, ಆರ್ಟ್ ಡೈರೆಕ್ಟರ್ ಶಿವಕುಮಾರ್ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರ್ ಇವರು ಚಿತ್ರದ ಸ್ಟಾರ್ಸ್​’ ಎಂದಿದ್ದಾರೆ ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More