Viral Video: ಕಾಂತಾರ ಸಿನಿಮಾ ಹಾಡನ್ನು ಕನ್ನಡದಲ್ಲಿ ಹಾಡಿದ ಹಿಂದಿ ಸೀರಿಯಲ್ ನಟಿ

ಕಾಂತರ ಚಲನಚಿತ್ರದ ಕರಮದ ಕಲ್ಲನು ಎಡವಿದ ಮನುಜನ ಬೆರಳಿನ ಗಾಯವು... ಮಾಯದು... ಹಾಡನ್ನು ನಟಿ ತೇಜಸ್ವಿ ಪ್ರಕಾಶ್ ಹಾಡಿದ್ದು, ಆ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Video: ಕಾಂತಾರ ಸಿನಿಮಾ ಹಾಡನ್ನು ಕನ್ನಡದಲ್ಲಿ ಹಾಡಿದ ಹಿಂದಿ ಸೀರಿಯಲ್ ನಟಿ
ತೇಜಸ್ವಿ ಪ್ರಕಾಶ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Mar 08, 2023 | 4:33 PM

ಹಿಂದಿ ಸೀರಿಯಲ್ ನಟಿ ತೇಜಸ್ವಿ ಪ್ರಕಾಶ್ (Tejaswi Prakash) ಅವರು ಕಾಂತಾರ ಚಿತ್ರದ ಕರಮದ ಕಲ್ಲನು ಎಡವಿದ ಮನುಜನ ಬೆರಳಿನ ಗಾಯವು… ಮಾಯದು…ಹಾಡನ್ನು ಹಾಡಿರುವ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಕಾಂತಾರ ಚಿತ್ರ 2022ರ ಬ್ಲಾಕ್‌ಬಸ್ಟರ್ ಹಿಟ್ ಚಿತ್ರವಾಗಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಿನಿ ರಸಿಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಭಾರತ ಚಿತ್ರರಂಗದ ಸಿನಿತಾರೆಯರು ಕೂಡಾ ಈ ಚಿತ್ರವನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಚಿತ್ರದ ಕಥೆ, ಪಾತ್ರಗಳು ಎಷ್ಟೊಂದು ಅದ್ಭುತವಾಗಿದೆಯೋ ಹಾಗೇನೆ ಈ ಚಲನಚಿತ್ರದಲ್ಲಿನ ಪ್ರತಿಯೊಂದು ಹಾಡು ಕೂಡಾ ಸೂಪರ್ ಹಿಟ್ ಆಗಿದೆ. ಬಹಳ ಅರ್ಥಪೂರ್ಣವಾದ ಹಾಡುಗಳನ್ನು ಈ ಚಿತ್ರದಲ್ಲಿ ಕಾಣಬಹುದು. ಬಿಗ್‌ಬಾಸ್ ಸೀಸನ್ 15 ಹಿಂದಿ ಅವತರಣಿಕೆಯ ಸ್ಪರ್ಧಿ ಹಾಗೂ ‘ನಾಗಿನ್ 6’ ಧಾರಾವಹಿಯ ನಟಿ ತೇಜಸ್ವಿ ಪ್ರಕಾಶ್ ಅವರು ಇತ್ತೀಚಿಗೆ ಕಾಂತಾರ ಚಿತ್ರದ ಹಾಡನ್ನು ಹಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂತಾರ ಚಲನಚಿತ್ರದ ಕರಮದ ಕಲ್ಲನು ಎಡವಿದ ಮನುಜನ ಬೆರಳಿನ ಗಾಯವು… ಮಾಯದು… ಹಾಡನ್ನು ನಟಿ ತೇಜಸ್ವಿ ಪ್ರಕಾಶ್ ಹಾಡಿದ್ದು, ಆ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಭಾಷೆ ಬರದಿದ್ದರೂ ಕೂಡಾ ನಟಿ ಈ ಹಾಡನ್ನು ಬಹಳ ಅದ್ಭುತವಾಗಿ ಹಾಡಿದ್ದು, ಇವರ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಪ್ರಶಂಸೆ ದೊರಕಿದೆ. ಹಾಗೂ ಇವರ ಸುಮಧುರ ಕಂಠಕ್ಕೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video : ಮದುವೆಗೆ ಬಂದವರು ಆಧಾರ ಕಾರ್ಡ್​ ತೋರಿಸಿದರೆ ಮಾತ್ರ ಔತಣ

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೊ ಇಲ್ಲಿಯವರೆಗೆ 2.7 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ 365 ಸಾವಿರ ಲೈಕ್ಸ್ ಮತ್ತು 40.8 ಸಾವಿರ ಕಮೆಂಟ್ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ನೀವು ಬಹಳ ಸುಂದರವಾಗಿ ಹಾಡುತ್ತಿರಾ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದು ನನ್ನ ಮೆಚ್ಚಿನ ಹಾಡುಗಳಲ್ಲಿ ಒಂದಾಗಿದೆ. ನಿಮ್ಮ ಧ್ವನಿ ಅದ್ಭುತವಾಗಿದೆ ಹಾಗೂ ಕನ್ನಡ ಹಾಡನ್ನು ಹಾಡುವ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಂ ಎಂದು ಕಮೆಂಟ್ ಮಾಡಿದ್ದಾರೆ. ನಟಿಯ ಗಾಯನ ಶೈಲಿಗೆ ಸಕರಾತ್ಮಕ ಕಮೆಂಟ್‌ಗಳು ಬಂದಿವೆ.

Published On - 4:26 pm, Wed, 8 March 23

ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್