Sign In

By signing in or creating an account, you agree with Associated Broadcasting Company's Terms & Conditions and Privacy Policy.

Sapthami Gowda: ‘ಯುವ’ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ: ‘ಹೊಂಬಾಳೆ ಫಿಲ್ಮ್ಸ್​’ ಜೊತೆ ಮತ್ತೆ ಕೈ ಜೋಡಿಸಿದ ‘ಕಾಂತಾರ’ ನಟಿ

Yuva Rajkumar | Hombale Films: ‘ಕಾಂತಾರ’ ಚಿತ್ರದ ಗೆಲುವಿನ ಬಳಿಕ ಸಪ್ತಮಿ ಗೌಡ ಅವರ ಜನಪ್ರಿಯತೆ ಹೆಚ್ಚಿತು. ಈಗ ‘ಯುವ’ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ.

Sapthami Gowda: ‘ಯುವ’ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ: ‘ಹೊಂಬಾಳೆ ಫಿಲ್ಮ್ಸ್​’ ಜೊತೆ ಮತ್ತೆ ಕೈ ಜೋಡಿಸಿದ ‘ಕಾಂತಾರ’ ನಟಿ
ಸಪ್ತಮಿ ಗೌಡ, ಯುವ ರಾಜ್​ಕುಮಾರ್​
Follow us
ಮದನ್​ ಕುಮಾರ್​
|

Updated on:Mar 06, 2023 | 5:35 PM

ಡಾ. ರಾಜ್​ಕುಮಾರ್​ ಕುಟುಂಬದ ಹೊಸ ಪ್ರತಿಭೆ ಯುವ ರಾಜ್​ಕುಮಾರ್​ (Yuva Rajkumar) ಅವರ ‘ಯುವ’ ಸಿನಿಮಾ ಇತ್ತೀಚೆಗಷ್ಟೇ ಅನೌನ್ಸ್​ ಆಯಿತು. ಶೀರ್ಷಿಕೆ ಅನಾವರಣ ಆದ ಬೆನ್ನಲ್ಲೇ ಪಾತ್ರವರ್ಗದ ಬಗ್ಗೆಯೂ ಬಿಗ್​ ಅಪ್​ಡೇಟ್​ ಸಿಕ್ಕಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ (Sapthami Gowda) ಅವರು ನಟಿಸಲಿದ್ದಾರೆ. ಚಿತ್ರತಂಡದಿಂದಲೇ ಈ ಬ್ರೇಕಿಂಗ್​ ನ್ಯೂಸ್​ ಹೊರಬಿದ್ದಿದೆ. ನಿರ್ದೇಶಕ ಸಂತೋಷ್​ ಆನಂದ್ ರಾಮ್​ ಅವರ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಹೊಂಬಾಳೆ ಫಿಲ್ಮ್ಸ್​’ ಬಂಡವಾಳ ಹೂಡುತ್ತಿದೆ. ‘ಯುವ’ ಚಿತ್ರಕ್ಕೆ (Yuva Movie) ಆಯ್ಕೆ ಆಗಿರುವುದಕ್ಕೆ ಸಪ್ತಮಿ ಗೌಡ ಅವರು ಖುಷಿ ಆಗಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

‘ಕಾಂತಾರ’ ಚಿತ್ರದಿಂದ ಸಪ್ತಮಿ ಗೌಡ ಅವರ ಜನಪ್ರಿಯತೆ ಹೆಚ್ಚಿತು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರು ಫೇಮಸ್​ ಆದರು. ಆ ಬಳಿಕ ಸಾಲು ಸಾಲು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆ ಪೈಕಿ ಕೆಲವು ಬೆಸ್ಟ್​ ಪ್ರಾಜೆಕ್ಟ್​ಗಳನ್ನು ಸಪ್ತಮಿ ಗೌಡ ಆಯ್ದುಕೊಳ್ಳುತ್ತಿದ್ದಾರೆ. ಈಗ ಅವರು ಯುವ ರಾಜ್​ಕುಮಾರ್​ಗೆ ಜೋಡಿಯಾಗಲು ಒಪ್ಪಿದ್ದಾರೆ. ಇಬ್ಬರ ಕೆಮಿಸ್ಟ್ರಿ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ
Image
‘ಇನ್ನೂ ರೊಮ್ಯಾನ್ಸ್ ಮಾಡ್ಬೇಕು ರಿಷಬ್​’; ಸೆಟ್​ನಲ್ಲಿ ಪ್ರಗತಿ ಹೇಳುತ್ತಿದ್ದ ಮಾತಿದು
Image
ಕರಾವಳಿ ಕನ್ನಡತಿ ಆದ ಪ್ರಕ್ರಿಯೆಯನ್ನು ವಿವರಿಸಿದ ನಟಿ ಸಪ್ತಮಿ ಗೌಡ
Image
Sapthami Gowda: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ಹೆಚ್ಚಿತು ನಟಿ ಸಪ್ತಮಿ ಗೌಡ ಡಿಮ್ಯಾಂಡ್​
Image
Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ

ಇದನ್ನೂ ಓದಿ: Saptami Gowda: ಮಾಲ್ಡೀವ್ಸ್​ಗೆ ಹಾರಿದ ಸಪ್ತಮಿ ಗೌಡ, ಇಲ್ಲಿವೆ ಚಿತ್ರಗಳು

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ‘ಹೊಂಬಾಳೆ ಫಿಲ್ಮ್ಸ್​’ ಗುರುತಿಸಿಕೊಂಡಿದೆ. ‘ಕಾಂತಾರ’ ಚಿತ್ರಕ್ಕೆ ಬಂಡವಾಳ ಹೂಡಿದ್ದು ಇದೇ ಸಂಸ್ಥೆ. ಈ ಬ್ಯಾನರ್​ ಜೊತೆಯಲ್ಲಿ ಎರಡನೇ ಬಾರಿ ಕೆಲಸ ಮಾಡುವ ಅವಕಾಶ ನೀಡಿರುವುದಕ್ಕೆ ಸಪ್ತಮಿ ಗೌಡ ಅವರು ಧನ್ಯವಾದ ಅರ್ಪಿಸಿದ್ದಾರೆ. ‘ಯುವರಾಜನ ಅರಸಿಗೆ ಆದರದ ಸ್ವಾಗತ’ ಎಂದು ‘ಹೊಂಬಾಳೆ ಫಿಲ್ಮ್ಸ್​’ ಟ್ವೀಟ್​ ಮಾಡಿದೆ. ಸಪ್ತಮಿ ಗೌಡ ಅವರ ಪ್ರತಿಭೆಯನ್ನು ಕೊಂಡಾಡಲಾಗಿದೆ. ‘ಯುವ’ ಚಿತ್ರಕ್ಕೆ ಆಯ್ಕೆ ಆಗಿರುವುದಕ್ಕೆ ಅಭಿಮಾನಿಗಳು ಸಪ್ತಮಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಸಪ್ತಮಿ ಗೌಡ ನಟಿಸಿದ ಮೊದಲ ಸಿನಿಮಾ ‘ಪಾಪ್​ ಕಾರ್ನ್​ ಮಂಕಿ ಟೈಗರ್​’. ಆ ಸಿನಿಮಾದಲ್ಲಿ ಅವರು ಡಾಲಿ ಧನಂಜಯ್​ ಜೊತೆ ತೆರೆ ಹಂಚಿಕೊಂಡಿದ್ದರು. ಎರಡನೇ ಸಿನಿಮಾ ‘ಕಾಂತಾರ’ದಲ್ಲಿ ರಿಷಬ್​ ಶೆಟ್ಟಿ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಅಭಿಷೇಕ್​ ಅಂಬರೀಷ್​ ನಾಯಕತ್ವದ ‘ಕಾಳಿ’ ಸಿನಿಮಾ ಅವರ ಮೂರನೇ ಚಿತ್ರ ಆಗಲಿದೆ. 4ನೇ ಚಿತ್ರದ ಮೂಲಕ ಸಪ್ತಮಿ ಗೌಡ ನೇರವಾಗಿ ಬಾಲಿವುಡ್​ ಟಿಕೆಟ್​ ಪಡೆದರು. ವಿವೇಕ್​ ಅಗ್ನಿಹೋತ್ರಿ ನಿರ್ದೇಶಿಸುತ್ತಿರುವ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರಕ್ಕೆ ಅವರು ನಾಯಕಿಯಾಗಿದ್ದಾರೆ. ಆ ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:35 pm, Mon, 6 March 23

ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ