‘ಇನ್ನೂ ರೊಮ್ಯಾನ್ಸ್ ಮಾಡ್ಬೇಕು ರಿಷಬ್​’; ಸೆಟ್​ನಲ್ಲಿ ಪ್ರಗತಿ ಹೇಳುತ್ತಿದ್ದ ಮಾತಿದು

‘ಇನ್ನೂ ರೊಮ್ಯಾನ್ಸ್ ಮಾಡ್ಬೇಕು ರಿಷಬ್​’; ಸೆಟ್​ನಲ್ಲಿ ಪ್ರಗತಿ ಹೇಳುತ್ತಿದ್ದ ಮಾತಿದು

TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 10, 2022 | 3:04 PM

ಈ ಚಿತ್ರದ ರೊಮ್ಯಾಂಟಿಕ್ ದೃಶ್ಯಗಳ ಶೂಟಿಂಗ್ ವೇಳೆ ಪ್ರಗತಿ ಕೂಡ ಸೆಟ್​ನಲ್ಲಿ ಇರುತ್ತಿದ್ದರು. ಅವರು ರೊಮ್ಯಾನ್ಸ್ ಮಾಡೋಕೆ ಒತ್ತು ಕೊಡುತ್ತಿದ್ದರು.

ರಿಷಬ್ ಶೆಟ್ಟಿ (Rishab Shetty)  ಅವರು ‘ಕಾಂತಾರ’ ಚಿತ್ರದ (Kantara Movie) ಕೆಲ ದೃಶ್ಯಗಳಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕಲಾವಿದರಿಗೆ ಬಟ್ಟೆ ವಿನ್ಯಾಸ ಮಾಡಿದ್ದು ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ. ವಿಶೇಷ ಎಂದರೆ ಈ ಚಿತ್ರದ ರೊಮ್ಯಾಂಟಿಕ್ ದೃಶ್ಯಗಳ ಶೂಟಿಂಗ್ ವೇಳೆ ಪ್ರಗತಿ ಕೂಡ ಸೆಟ್​ನಲ್ಲಿ ಇರುತ್ತಿದ್ದರು. ಅವರು ರೊಮ್ಯಾನ್ಸ್ ಮಾಡೋಕೆ ಒತ್ತು ಕೊಡುತ್ತಿದ್ದರು. ‘ಇನ್ನೂ ರೊಮ್ಯಾನ್ಸ್ ಮಾಡ್ಬೇಕು ರಿಷಬ್​’ ಎಂದು ಪ್ರಗತಿ ಹೇಳುತ್ತಿದ್ದರು ಎಂಬುದಾಗಿ ಸಪ್ತಮಿ ಗೌಡ ಹೇಳಿದ್ದಾರೆ.