Abishek Ambareesh: ಕ್ಯೂಟ್ ಫೋಟೊ ಹಂಚಿಕೊಂಡು ಭಾವಿ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ ಮರಿ ರೆಬಲ್ ಸ್ಟಾರ್

ಭಾವಿ ಪತ್ನಿ ಅವಿವಾ ಹುಟ್ಟುಹಬ್ಬಕ್ಕೆ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ ಅಭಿಷೇಕ್ ಅಂಬರೀಶ್. ಇಬ್ಬರೂ ಜೊತೆಗಿರುವ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

Abishek Ambareesh: ಕ್ಯೂಟ್ ಫೋಟೊ ಹಂಚಿಕೊಂಡು ಭಾವಿ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ ಮರಿ ರೆಬಲ್ ಸ್ಟಾರ್
ಅಭಿಷೇಕ್-ಅವಿವಾ
Follow us
ಮಂಜುನಾಥ ಸಿ.
|

Updated on: Mar 06, 2023 | 4:11 PM

ಇಲ್ಲ-ಇಲ್ಲ ಎನ್ನುತ್ತಲೇ ಕಳೆದ ಡಿಸೆಂಬರ್ ನಲ್ಲಿ ಅಭಿಷೇಕ್ ಅಂಬರೀಶ್ (Abishek Ambareesh), ಬೆಂಗಳೂರಿನ ಬೆಡಗಿ ಅವಿವಾ (Aviva Bidappa) ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಇಂದು (ಮಾರ್ಚ್ 06) ಅಭಿಷೇಕ್​ರ ಭಾವಿ ಪತ್ನಿ ಅವಿವಾರ ಹುಟ್ಟುಹಬ್ಬವಿದ್ದು, ಇಬ್ಬರೂ ಜೊತೆಗಿರುವ ಕೆಲವು ಕ್ಯೂಟ್ ಫೋಟೊಗಳನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ಅಭಿಷೇಕ್.

ಅಭಿಷೇಕ್ ಹಾಗೂ ಅವಿವಾ ವಿದೇಶ ಪ್ರವಾಸಕ್ಕೆ ಹೋದಾಗಿನ ಫೋಟೊ, ಇಬ್ಬರೂ ಒಟ್ಟಿಗಿರುವ ಹಳೆಯ ಫೋಟೊ, ಅವಿವಾರ ಬಾಲ್ಯದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ಹಂಚಿಕೊಂಡಿದ್ದು ”ನಾನು ನಿನ್ನನ್ನು ಪಡೆದುಕೊಂಡು ಬಿಟ್ಟೆ. ನಿನಗೆ ಹುಟ್ಟುಹಬ್ಬದ ಶುಭಾಶಯಗಳು, ಅದ್ಭುತವಾದ ವರ್ಷ ನಿನ್ನದಾಗಲಿ, ಮುಂದೆ ಬರುವ ಎಲ್ಲದಕ್ಕೂ ನಾನು ಕಾತರನಾಗಿದ್ದೇನೆ. ದೇವರು ನಿನಗೆ ಒಳ್ಳೆಯದು ಮಾಡಲಿ ಲಿಟಲ್ ಕ್ಯೂಟಿ” ಎಂದು ಮುದ್ದಾಗಿ ವಿಶ್ ಮಾಡಿದ್ದಾರೆ ಮರಿ ರೆಬಲ್ ಸ್ಟಾರ್.

ಇನ್​ಸ್ಟಾಗ್ರಾಂನಲ್ಲಿ ಅಭಿಷೇಕ್ ಅಂಬರೀಶ್ ಜೊತೆಗಿನ ಕ್ಯೂಟ್ ಫೋಟೊವೊಂದನ್ನು ಹಂಚಿಕೊಂಡಿರುವ ಅವಿವಾ, ”ಇದು ನನ್ನ ಈವರೆಗಿನ ಅತ್ಯುತ್ತಮ ಹುಟ್ಟುಹಬ್ಬ. ಸಮಯ ಮಾಡಿಕೊಂಡು ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು” ಎಂದಿದ್ದಾರೆ. ಅವಿವಾರ ಪೋಸ್ಟ್​ಗೆ ಕಮೆಂಟ್ ಮಾಡಿರುವ ಅಭಿಷೇಕ್, ”ಹುಟ್ಟುಹಬ್ಬದ ಶುಭಾಶಯಗಳು, ಅತ್ಯುತ್ತಮ ವರ್ಷ ನಿನ್ನದಾಗಲಿ. ನನ್ನ ನಗು, ಪ್ರೀತಿ, ಖುಷಿ ಎಲ್ಲವೂ ನೀನೆ. ನಾನು ಸದಾ ನಿನ್ನವನಾಗಿ ಇರುತ್ತೇನೆ” ಎಂದಿದ್ದಾರೆ.

ಅಭಿಷೇಕ್ ಅಂಬರೀಶ್ ಹಾಗೂ ಅವಿವಾರ ನಿಶ್ಚಿತಾರ್ಥ ಡಿಸೆಂಬರ್ 11 ರಂದು ಬೆಂಗಳೂರಿನಲ್ಲಿ ನಡೆದಿತ್ತು. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೆಲವರಿಗಷ್ಟೆ ಆಹ್ವಾನ ನೀಡಲಾಗಿತ್ತು. ತೀರ ಆಪ್ತೇಷ್ಟರಿಗಷ್ಟೆ ಆಹ್ವಾನವಿದ್ದು ನಟ ಯಶ್, ದರ್ಶನ್, ರಾಕ್​ಲೈನ್ ವೆಂಕಟೇಶ್ ಇನ್ನು ಕೆಲವರಷ್ಟೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಭಿಷೇಕ್ ವಿವಾಹವಾಗುತ್ತಿರುವ ಅವಿವಾ, ಬೆಂಗಳೂರಿನ ಜನಪ್ರಿಯ ವಸ್ತ್ರ ವಿನ್ಯಾಸಕ ಪ್ರಸಾದ್ ಬಿದ್ದಪ್ಪ ಪುತ್ರಿ. ಅಭಿಷೇಕ್ ಹಾಗೂ ಅವಿವಾ ಅವರದ್ದು ಹಳೆಯ ಪರಿಚಯ. ಇಬ್ಬರ ಮನೆಯವರ ಒಪ್ಪಿಗೆಯ ಮೇರೆಗೆ ಈ ಪ್ರೇಮ ವಿವಾಹ ನಡೆಯಲಿದೆ.

ತಂದೆಯಂತೆಯೇ ಫ್ಯಾಷನ್ ಲೋಕದಲ್ಲಿ ಆಸಕ್ತಿವಹಿಸಿರುವ ಅವಿವಾ ಫ್ಯಾಷನ್ ಮ್ಯಾನೇಜ್​ಮೆಂಟ್ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಫ್ಯಾಷನ್​ ಡಿಸೈನಿಂಗ್​ನಲ್ಲಿಯೂ ಆಸಕ್ತಿ ಹೊಂದಿದ್ದಾರೆ. ತಾವೂ ಸಹ ಇನ್​ಸ್ಟಾ ಮಾಡೆಲ್ ಆಗಿದ್ದು, ಆಗಾಗ್ಗೆ ಮೋಹಕ ಫೋಟೊಶೂಟ್ ಮಾಡಿಸಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಯುವ ಜೋಡಿಯ ಮದುವೆ ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ದಿನಾಂಕ ಖಾತ್ರಿಯಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್