Abhishek Ambareesh Engagement: ಅವಿವಾಗೆ ಪುಣೆಯಲ್ಲಿ ಸ್ಪೆಷಲ್ ಉಂಗುರ ರೆಡಿ ಮಾಡಿಸಿದ ಅಭಿ, ಇದರ ಬೆಲೆ ಅಬ್ಬಬ್ಬಾ…!
ನಟ ಅಭಿಷೇಕ್ ಅಂಬರೀಷ್ ಹಾಗೂ ಮಾಡೆಲ್ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಇಂದು (ಡಿ.11) ನೆರವೇರಿದೆ. ಅಭಿಷೇಕ್ ತಮ್ಮ ಭಾವಿಪತ್ನಿಗೆ ಡೈಮಂಡ್ ರಿಂಗ್ ತೊಡಿಸಿದ್ದು, ಬೆಲೆ ಕೇಳಿದರೆ ಶಾಕ್ ಆಗುವುದಂತು ಗ್ಯಾರಂಟಿ.
ನಟ ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಮಾಡೆಲ್ ಅವಿವಾ ಬಿದ್ದಪ್ಪ (Aviva Bidapa) ಅವರ ನಿಶ್ಚಿತಾರ್ಥ ಇಂದು (ಡಿ.11) ನೆರವೇರಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಈ ಶುಭ ಕಾರ್ಯ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಹಾಗೂ ಕೆಲವೇ ಕೆಲವು ಮಂದಿ ಆಪ್ತರು ಮಾತ್ರ ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಅವರ ಎಲ್ಲರ ಸಮ್ಮುಖದಲ್ಲಿ ಪರಸ್ಪರ ರಿಂಗ್ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಅವಿವಾ ಬಿದ್ದಪ್ಪ ಅವರಿಗೆ ಅಭಿಷೇಕ್ ಅವರು ತೊಡಿಸಿದ ರಿಂಗ್ ಬಗ್ಗೆ ಚರ್ಚೆ ನಡೆಯುತ್ತಿದೆ. ತಮ್ಮ ಭಾವಿಪತ್ನಿಗೆ ಅಭಿಷೇಕ್ ಅಂಬರೀಷ್ ಅವರು ರಿಂಗ್ ಎಲ್ಲಿಂದ ತಂದರು ಮತ್ತು ಅದರ ಬೆಲೆ ಎಷ್ಟಾಗಿರಬಹುದು ಎಂಬ ಹಲವು ಕುತೂಹಲ ಅವರ ಅಭಿಮಾನಿಗಳಲ್ಲಿ ಕಾಡಿದೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಆಗಿರುವ ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಇಬ್ಬರ ನಡುವೆ ಆಪ್ತತೆ ಬೆಳೆದು ಈಗ ನಿಶ್ಚಿತಾರ್ಥದ ಹಂತಕ್ಕೆ ಬಂದಿದೆ. ಎರಡೂ ಕುಟುಂಬದ ಪ್ರಮುಖರ ಸಮ್ಮುಖದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ನಡೆದಿದೆ.
ಈ ಎಂಗೇಜ್ಮೆಂಟ್ಗೆ ತರಿಸಿದ್ದ ರಿಂಗ್ ಸಖತ್ ಸ್ಪೇಷಲ್ ಆಗಿದೆ. ತಮ್ಮ ಪ್ರೀತಿಯ ಒಡತಿಗೆ ಅಂಬರೀಷ್ ಮಗ ರಿಂಗ್ ರೂಪದಲ್ಲಿ ಒಲವಿನ ಉಡುಗೊರೆ ನೀಡಿದ್ದಾರೆ. ಅಭಿಷೇಕ್ ಅವರು ಅವಿವಾಗೊಸ್ಕರ ಪೂಣೆಯಿಂದ ಸ್ಪೆಷಲ್ ರಿಂಗ್ ರೆಡಿ ಮಾಡಿಸಿದ್ದಾರೆ. ಈ ರಿಂಗ್ನ ಬೆಲೆ ಕೇಳಿದರೆ ಶಾಕ್ ಆಗುವುದಂತು ಗ್ಯಾರಂಟಿ. ಅಭಿಷೇಕ್ ಅವರು ತಮ್ಮ ಭಾವಿಪತ್ನಿಗೆ ಬರೋಬ್ಬರಿ 37 ಲಕ್ಷದ ಡೈಮಂಡ್ ರಿಂಗ್ ತೊಡಿಸಿದ್ದಾರೆ.
ಅಭಿಷೇಕ್ ಮತ್ತು ಅವಿವಾ ಕ್ಯೂಟ್ ಲವ್ ಸ್ಟೋರಿ
ನಟ ಅಂಬರೀಷ್ ಸಾಯುವ ಒಂದು ವರ್ಷ ಮುಂಚೆಯೇ ಮಗನ ಲವ್ ಸ್ಟೋರಿ ಬಗ್ಗೆ ತಿಳಿಕೊಂಡಿದ್ದರು. ತಮ್ಮ ಲವ್ ವಿಚಾರವನ್ನು ಅಭಿಷೇಕ್ ತಂದೆಗೆ ಹೇಳಿ ಒಪ್ಪಿಸಿದ್ದರು. ಅಭಿಷೇಕ್ ಮತ್ತು ಅವಿವಾ ಇಬ್ಬರದು ಐದು ವರ್ಷದ ಪ್ರೀತಿ. ಫಾರಿನ್ ನಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ನಂತರ ಪ್ರೀತಿಗೆ ತಿರುಗಿದೆ. ಇವರಿಬ್ಬರ ಪ್ರೀತಿಯನ್ನು ಅಂಬರೀಷ್ ಕೂಡ ಒಪ್ಪಿದ್ದರು. ಸುಮಲತಾ ಕೂಡ ಒಪ್ಪಿ ಹಾರೈಸಿದ್ದರು. ಇಬ್ಬರೂ ಡೈಮಂಡ್ ಉಂಗುರವನ್ನು ಹಾಕಿಕೊಂಡಿದ್ದಾರೆ. ಇಬ್ಬರ ಕುಟುಂಬಕ್ಕೂ ಪ್ರೀತಿ ವಿಷಯ ಮೊದಲನಿಂದಲೂ ಗೊತ್ತಿತ್ತು. ಜೂನ್ನಲ್ಲಿ ಮದುವೆ ಮಾಡೋದಕ್ಕೆ ಭರ್ಜರಿ ಪ್ಲಾನ್ ನಡೆದಿದ್ದು, ಜೊತೆಗೆ ಮಂಡ್ಯದಲ್ಲಿಯೂ ಮದುವೆ ಆರತಕ್ಷತೆ ನಡೆಯಲಿದೆ ಎನ್ನಲಾಗುತ್ತಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.