‘ಹೊಯ್ಸಳ’ ನಿರ್ಮಾಪಕರಿಂದ ಧನಂಜಯ್​ಗೆ ಕಾರು ಗಿಫ್ಟ್​; ಈ ಕಾರಿನ ಬೆಲೆ 1 ಕೋಟಿ ರೂಪಾಯಿ

ಟೊಯೊಟೋ ವೆಲ್​ಫೈರ್​ ಕಾರನ್ನು ಧನಂಜಯ್​ಗೆ ಉಡುಗೊರೆಯಾಗಿ ನೀಡಲಾಗಿದೆ. ಇದರ ಎಕ್ಸ್​ ಶೋ ರೂಂ ಬೆಲೆ 96 ಲಕ್ಷ ರೂಪಾಯಿ ಇದೆ.

‘ಹೊಯ್ಸಳ’ ನಿರ್ಮಾಪಕರಿಂದ ಧನಂಜಯ್​ಗೆ ಕಾರು ಗಿಫ್ಟ್​; ಈ ಕಾರಿನ ಬೆಲೆ 1 ಕೋಟಿ ರೂಪಾಯಿ
Follow us
ರಾಜೇಶ್ ದುಗ್ಗುಮನೆ
|

Updated on:Mar 31, 2023 | 1:46 PM

ನಟ ಡಾಲಿ ಧನಂಜಯ್ (Dhananjay) ನಟನೆಯ 25ನೇ ಸಿನಿಮಾ ‘ಹೊಯ್ಸಳ’ ರಿಲೀಸ್ ಆಗಿ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಡಾಲಿ ಧನಂಜಯ್ ಅವರು ಖಡಕ್ ಪೊಲೀಸ್ ಅಧಿಕಾರಿ ಆಗಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಿದ ಕೆಆರ್​ಜಿ ಸ್ಟುಡಿಯೋಸ್​ನ ಯೋಗಿ ರಾಜ್ ಹಾಗೂ ಕಾರ್ತಿಕ್ ಗೌಡ (Kartik Gowda) ಲಾಭ ಕಂಡಿದ್ದಾರೆ. ಇದೇ ಖುಷಿಯಲ್ಲಿ ಧನಂಜಯ್​ಗೆ 1 ಕೋಟಿ ರೂಪಾಯಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡು ಧನಂಜಯ್ ಸಂತಸ ವ್ಯಕ್ತಪಡಿಸಿದ್ದಾರೆ.

ಟೊಯೊಟೋ ವೆಲ್​ಫೈರ್​ ಕಾರನ್ನು ಧನಂಜಯ್​ಗೆ ಉಡುಗೊರೆಯಾಗಿ ನೀಡಲಾಗಿದೆ. ಇದರ ಎಕ್ಸ್​ ಶೋ ರೂಂ ಬೆಲೆ 96 ಲಕ್ಷ ರೂಪಾಯಿ ಇದೆ. ಆನ್​ರೋಡ್​ ಬೆಲೆ 1.19 ಕೋಟಿ ರೂಪಾಯಿ ಆಗಲಿದೆ. ಕಾರಿನ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಧನಂಜಯ್ ಹಂಚಿಕೊಂಡಿದ್ದಾರೆ. ಯೋಗಿ ಹಾಗೂ ಕಾರ್ತಿಕ್ ಕೂಡ ಜೊತೆಗಿದ್ದಾರೆ.

‘25 ನೇ ಚಿತ್ರ ಮತ್ತು ನನ್ನ ವಿಶೇಷ ವ್ಯಕ್ತಿಗಳಿಂದ ವಿಶೇಷ ಉಡುಗೊರೆ’ ಎಂದು ಧನಂಜಯ್ ಬರೆದುಕೊಂಡಿದ್ದಾರೆ. ‘ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ’ ಎಂದು ಕೂಡ ಧನಂಜಯ್ ಹೇಳಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಜೊತೆಗೆ ಧನಂಜಯ್​ಗೆ ಶುಭಾಶಯ ತಿಳಿಸಿದ್ದಾರೆ.

ಧನಂಜಯ್ ಅವರು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಇದೆ. ‘ಪುಷ್ಪ’ ಚಿತ್ರದಲ್ಲಿ ಅವರು ನಟಿಸಿದ್ದರು. ‘ಪುಷ್ಪ 2’ ಚಿತ್ರದಲ್ಲೂ ಅವರು ಬಣ್ಣ ಹಚ್ಚಲಿದ್ದಾರೆ. ‘ಕೆಆರ್​ಜಿ ಸ್ಟುಡಿಯೋಸ್​’ ಜೊತೆ ಈ ಮೊದಲು ಧನಂಜಯ್ ಮಾಡಿದ್ದ ‘ರತ್ನನ್ ಪ್ರಪಂಚ’ ಸಿನಿಮಾ ಯಶಸ್ಸು ಕಂಡಿತ್ತು. ಈ ನಿರ್ಮಾಣ ಸಂಸ್ಥೆ ಜೊತೆ ಧನಂಜಯ್ ಮಾಡಿರೋ ಎರಡನೇ ಸಿನಿಮಾ ಇದು. ಈಗ ಅವರಿಗೆ ಈ ನಿರ್ಮಾಣ ಸಂಸ್ಥೆಯಿಂದ ಕಾರು ಉಡುಗೊರೆಯಾಗಿ ಸಿಕ್ಕಿರೋದು ವಿಶೇಷ.

‘ಹೊಯ್ಸಳ’ ಸಿನಿಮಾಗೆ ವಿಜಯ್​ ಎನ್​. ನಿರ್ದೇಶನ ಇದೆ. ಡಾಲಿ ಧನಂಜಯ್​, ಅಮೃತಾ ಅಯ್ಯಂಗಾರ್​, ನವೀನ್​ ಶಂಕರ್, ಅನಿರುದ್ಧ್​ ಭಟ್​, ಮಯೂರಿ ನಟರಾಜ್​, ಅಚ್ಯುತ್​ ಕುಮಾರ್​, ರಾಜೇಶ್​ ನಟರಂಗ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಕಾರಿನ ವಿಶೇಷತೆ

2492 ಸಿಸಿ ಇಂಜಿನ್​​ ಅನ್ನು ಕಾರು ಹೊಂದಿದೆ.  ಕಾರಿನ ಮೈಲೇಜ್​ ಪ್ರತಿ ಲೀಟರ್​ ಪೆಟ್ರೋಲ್​ಗೆ 16 ಕಿ.ಮೀ ಇದೆ. ಏಳು ಸೀಟರ್​​ ಕಾರು ಇದಾಗಿದ್ದು, ಅತ್ಯಂತ ಲಕ್ಸುರಿ ಸೌಲಭ್ಯ ಇದೆ. ಜೀರೋದಿಂದ 100 ಕಿ.ಮೀ ವೇಗವನ್ನು 8 ಸೆಕೆಂಡ್​ನಲ್ಲಿ ವೆಲ್​ಫೈರ್ ತಲುಪುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:20 pm, Fri, 31 March 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು