ಅಬ್ಬರದ ಓಪನಿಂಗ್ ಪಡೆದ ನಾನಿ ನಟನೆಯ ‘ದಸರಾ’; ಆದರೂ, ‘ಕಬ್ಜ’ ದಾಖಲೆ ಮುರಿಯಲಿಲ್ಲ

ನಾನಿ ಅವರು ಲವರ್ ಬಾಯ್ ಮಾದರಿಯ ಸಿನಿಮಾ ಮಾಡಿ ಈ ಮೊದಲು ಗಮನ ಸೆಳೆದಿದ್ದರು. ಇದೇ ಮೊದಲ ಬಾರಿಗೆ ಅವರು ಸಂಪೂರ್ಣ ರಗಡ್ ಲುಕ್​ನಲ್ಲಿ ಆ್ಯಕ್ಷನ್ ಮೆರೆದಿದ್ದಾರೆ.

ಅಬ್ಬರದ ಓಪನಿಂಗ್ ಪಡೆದ ನಾನಿ ನಟನೆಯ ‘ದಸರಾ’; ಆದರೂ, ‘ಕಬ್ಜ’ ದಾಖಲೆ ಮುರಿಯಲಿಲ್ಲ
ನಾನಿ-ಕೀರ್ತಿ ಸುರೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 31, 2023 | 12:09 PM

ನಾನಿ ಹಾಗೂ ಕೀರ್ತಿ ಸುರೇಶ್ (Keerthy Suresh) ನಟನೆಯ ‘ದಸರಾ’ ಸಿನಿಮಾಗೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾ ನೋಡಿದ ಫ್ಯಾನ್ಸ್ ಕೂಡ ಫುಲ್ ಮಾರ್ಕ್ಸ್​ ನೀಡಿದ್ದಾರೆ. ‘ದಸರಾ’ ಸಿನಿಮಾ (Dasara Movie) ಮೊದಲ ದಿನ ಅಬ್ಬರದ ಕಲೆಕ್ಷನ್ ಮಾಡಿದೆ. ನಾನಿ ವೃತ್ತಿಜೀವನದಲ್ಲಿ ಇಷ್ಟು ದೊಡ್ಡ ಓಪನಿಂಗ್ ಪಡೆದ ಮೊದಲ ಸಿನಿಮಾ ಇದು ಎಂದು ಬಾಕ್ಸ್ ಆಫೀಸ್ ಪಂಡಿತರು ಹೇಳಿದ್ದಾರೆ. ಈ ಚಿತ್ರದಿಂದ ನಾನಿ ದೊಡ್ಡ ಗೆಲುವು ಕಂಡಿದ್ದಾರೆ.

ನಾನಿ ಅವರು ಲವರ್ ಬಾಯ್ ಮಾದರಿಯ ಸಿನಿಮಾ ಮಾಡಿ ಈ ಮೊದಲು ಗಮನ ಸೆಳೆದಿದ್ದರು. ಇದೇ ಮೊದಲ ಬಾರಿಗೆ ಅವರು ಸಂಪೂರ್ಣ ರಗಡ್ ಲುಕ್​ನಲ್ಲಿ ಆ್ಯಕ್ಷನ್ ಮೆರೆದಿದ್ದಾರೆ. ಅವರ ಮೇಕೋವರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾ ಮೊದಲ ದಿನ ವಿಶ್ವಾದ್ಯಂತ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿದೆ. ಕೇವಲ ತೆಲುಗು ನಾಡು ಮಾತ್ರವಲ್ಲದೆ, ಕರ್ನಾಟಕ, ತಮಿಳು ನಾಡು ಹಾಗೂ ಹೊರ ದೇಶಗಳಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ.

‘ದಸರಾ’ ಸಿನಿಮಾಗೆ ಅಮೆರಿಕದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ನಾನಿ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ಮೈಲೇಜ್ ಸಿಕ್ಕಿದೆ. ಈ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಒಳ್ಳೆಯ ರೀತಿಯಲ್ಲಿ ಬುಕಿಂಗ್ ಆಗುತ್ತಿದೆ. ಶನಿವಾರ (ಏಪ್ರಿಲ್ 1) ಹಾಗೂ ಭಾನುವಾರ (ಏಪ್ರಿಲ್ 2) ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

ಉಪೇಂದ್ರ, ಶಿವರಾಜ್​ಕುಮಾರ್, ಸುದೀಪ್ ನಟನೆಯ ‘ಕಬ್ಜ’ ಸಿನಿಮಾ ಇತ್ತೀಚೆಗೆ ರಿಲೀಸ್​ ಆಗಿ ಭರ್ಜರಿ ಕಲೆಕ್ಷನ್ ಮಾಡಿತು. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 50 ಕೋಟಿ ರೂಪಾಯಿ. ‘ದಸರಾ’ ಚಿತ್ರದ ಬಳಿ ‘ಕಬ್ಜ’ ಚಿತ್ರದ ಮೊದಲ ದಿನದ ಕಲೆಕ್ಷನ್​ ಹಿಂದಿಕ್ಕೋಕೆ ಸಾಧ್ಯವಾಗಿಲ್ಲ. ಶೀಘ್ರವೇ ‘ದಸರಾ’ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Dasara Movie: ‘ಸೂಪರ್ ಆ್ಯಕ್ಷನ್, ನಾನಿ ನಟನೆಗೆ ಭೇಷ್’; ‘ದಸರಾ’ ಸಿನಿಮಾ ನೋಡಿ ಫ್ಯಾನ್ಸ್ ಖುಷ್

ನಾನಿ ನಟನೆಯನ್ನು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಅವರು ಆ್ಯಕ್ಷನ್ ಹಾಗೂ ಭಾವಾನತ್ಮಕ ದೃಶ್ಯಗಳಿಗೆ ಸರಿಯಾದ ನ್ಯಾಯ ಒದಗಿಸಿದ್ದಾರೆ ಎನ್ನುತ್ತಿದ್ದಾರೆ ಫ್ಯಾನ್ಸ್. ಕೀರ್ತಿ ಸುರೇಶ್ ಅವರ ಅಭಿನಯವನ್ನೂ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ತಾಂತ್ರಿಕವಾಗಿ ನಾನಿ ಸಿನಿಮಾ ಶ್ರೀಮಂತವಾಗಿದೆ ಎಂದು ಫ್ಯಾನ್ಸ್ ಹೇಳಿದ್ದಾರೆ. ಹಿನ್ನೆಲೆ ಸಂಗೀತ, ಚಿತ್ರದ ಛಾಯಾಗ್ರಹಣದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳು ಕೂಡ ಫ್ಯಾನ್ಸ್​ಗೆ ರೋಮಾಂಚನ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ