AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara Movie: ‘ಸೂಪರ್ ಆ್ಯಕ್ಷನ್, ನಾನಿ ನಟನೆಗೆ ಭೇಷ್’; ‘ದಸರಾ’ ಸಿನಿಮಾ ನೋಡಿ ಫ್ಯಾನ್ಸ್ ಖುಷ್

ನಾನಿ ನಟನೆಯನ್ನು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಲವರ್ ಬಾಯ್ ರೀತಿಯ ಪಾತ್ರಗಳಲ್ಲಿ ನಾನಿ ಹೆಚ್ಚು ಗಮನ ಸೆಳೆದಿದ್ದರು. ಈಗ ಇದೇ ಮೊದಲ ಬಾರಿಗೆ ಅವರು ಬೇರೆಯದೇ ಅವತಾರ ತಾಳಿದ್ದಾರೆ ಎನ್ನುವ ಅಭಿಪ್ರಾಯ ಅನೇಕರಿಂದ ಕೇಳಿ ಬಂದಿದೆ.

Dasara Movie: ‘ಸೂಪರ್ ಆ್ಯಕ್ಷನ್, ನಾನಿ ನಟನೆಗೆ ಭೇಷ್’; ‘ದಸರಾ’ ಸಿನಿಮಾ ನೋಡಿ ಫ್ಯಾನ್ಸ್ ಖುಷ್
ನಾನಿ
ರಾಜೇಶ್ ದುಗ್ಗುಮನೆ
|

Updated on: Mar 30, 2023 | 10:48 AM

Share

ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಕೀರ್ತಿ ಸುರೇಶ್ (Keerthy Suresh) ನಟನೆಯ ‘ದಸರಾ’ ಸಿನಿಮಾ ರಾಮ ನವಮಿ ಪ್ರಯುಕ್ತ ಇಂದು (ಮಾರ್ಚ್​ 30) ರಿಲೀಸ್ ಆಗಿದೆ. ಮುಂಜಾನೆಯಿಂದಲೇ ಶೋ ಆರಂಭ ಆಗಿದ್ದು, ಹಲವು ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಂಡಿದೆ. ನಾನಿ ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗಿದೆ. ಚಿತ್ರ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸುತ್ತಿದ್ದಾರೆ. ನಾನಿ ಅವರು ರಗಡ್ ಅವತಾರದಲ್ಲಿ ಕಾಣಿಸಿಕೊಂಡರೆ, ಕೀರ್ತಿ ಸುರೇಶ್ ಡಿ ಗ್ಲಾಮ್ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ ಎನ್ನುವ ಅಭಿಪ್ರಾಯ ಪ್ರೇಕ್ಷಕರ ವಲಯದಿಂದ ಸಿಕ್ಕಿದೆ.

ನಾನಿ-ಕೀರ್ತಿ ನಟನೆ ಕೊಂಡಾಡಿದ ಅಭಿಮಾನಿಗಳು

ನಾನಿ ನಟನೆಯನ್ನು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಲವರ್ ಬಾಯ್ ರೀತಿಯ ಪಾತ್ರಗಳಲ್ಲಿ ನಾನಿ ಹೆಚ್ಚು ಗಮನ ಸೆಳೆದಿದ್ದರು. ಈಗ ಇದೇ ಮೊದಲ ಬಾರಿಗೆ ಅವರು ಬೇರೆಯದೇ ಅವತಾರ ತಾಳಿದ್ದಾರೆ ಎನ್ನುವ ಅಭಿಪ್ರಾಯ ಅನೇಕರಿಂದ ಕೇಳಿ ಬಂದಿದೆ. ಅವರು ಆ್ಯಕ್ಷನ್ ಹಾಗೂ ಭಾವಾನತ್ಮಕ ದೃಶ್ಯಗಳಿಗೆ ಸರಿಯಾದ ನ್ಯಾಯ ಒದಗಿಸಿದ್ದಾರೆ ಎನ್ನುತ್ತಿದ್ದಾರೆ ಫ್ಯಾನ್ಸ್. ಕೀರ್ತಿ ಸುರೇಶ್ ಅವರ ಅಭಿನಯವನ್ನೂ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ತಾಂತ್ರಿಕವಾಗಿ ಶ್ರೀಮಂತ

ತಾಂತ್ರಿಕವಾಗಿ ನಾನಿ ಸಿನಿಮಾ ಶ್ರೀಮಂತವಾಗಿದೆ ಎಂದು ಫ್ಯಾನ್ಸ್ ಹೇಳಿದ್ದಾರೆ. ಹಿನ್ನೆಲೆ ಸಂಗೀತ, ಚಿತ್ರದ ಛಾಯಾಗ್ರಹಣದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳು ಕೂಡ ಫ್ಯಾನ್ಸ್​ಗೆ ರೋಮಾಂಚನ ಮೂಡಿಸಿದೆ.

ಕೆಲವು ವಿಚಾರ ಇಷ್ಟ ಆಗಿಲ್ಲ ಎಂದ ಫ್ಯಾನ್ಸ್

ಸಿನಿಮಾ ಒಂದು ವರ್ಗದ ಜನರಿಗೆ ಇಷ್ಟವಾಗಿಲ್ಲ. ವಿಲನ್​ಗಳು ಇನ್ನೂ ರಗಡ್ ಆಗಿ ಇರಬೇಕಿತ್ತು ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ. ಕೆಲವು ಕಡೆಗಳಲ್ಲಿ ನಿಧಾನಗತಿಯ ನರೇಷನ್ ಇದೆ ಎಂದು ಹೇಳಿದ್ದಾರೆ. ಕಥೆಯಲ್ಲಿ ಎಲ್ಲಿಯೂ ಟ್ವಿಸ್ಟ್ ಆ್ಯಂಡ್ ಟರ್ನ್​ಗಳು ಇಲ್ಲ ಎಂದು ಫ್ಯಾನ್ಸ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಾನಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟ್​ಗೆ ವ್ಯಯವಾಯ್ತು ಭರ್ಜರಿ ಹಣ; ಇದರಲ್ಲಿ ಮತ್ತೊಂದು ಸಿನಿಮಾ ಮಾಡಬಹುದು

ಜನರಿಗೆ ಸಿನಿಮಾ ಇಷ್ಟ ಆಯ್ತಾ?

‘ನಾನಿ ಅವರ ವೃತ್ತಿಜೀವನದಲ್ಲೇ ಇದು ಅತ್ಯುತ್ತಮ ಸಿನಿಮಾ. ಸಿಳ್ಳೆ ನಿಲ್ಲುವುದೇ ಇಲ್ಲ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ಕೆಲವರು ‘ನಾನಿ ಅಣ್ಣ ಹಿಟ್ ಕೊಟ್ಟ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ನಾನಿ ಎನರ್ಜಿಯನ್ನು ಕೊಂಡಾಡಿದ್ದಾರೆ. ಬಹುತೇಕರಿಗೆ ಸಿನಿಮಾ ಇಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ