Bholaa Twitter Review: ರೀಮೇಕ್ ಕಿಂಗ್ ಅಜಯ್ ದೇವಗನ್ಗೆ ಉಘೆ ಎಂದ ನೆಟ್ಟಿಗರು
ಅಜಯ್ ದೇವಗನ್ ನಟಿಸಿ, ನಿರ್ದೇಶನ ಮಾಡಿರುವ ಭೋಲಾ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ. ಈ ಸಿನಿಮಾವು ತಮಿಳಿನ ಸೂಪರ್ ಹಿಟ್ ಸಿನಿಮಾ ಖೈದಿಯ ರೀಮೇಕ್ ಆಗಿದೆ.
ಅಜಯ್ ದೇವಗನ್ (Ajay Devagan) ನಟನೆಯ ಭೋಲಾ (Bholaa) ಹಿಂದಿ ಸಿನಿಮಾ ಇಂದು (ಮಾರ್ಚ್ 30) ಬಿಡುಗಡೆ ಆಗಿದೆ. ರೀಮೇಕ್ ಕಿಂಗ್ (Remake King) ಎಂದೇ ಕರೆಯಲಾಗುವ ಅಜಯ್ ದೇವಗನ್ರ ಈ ಭೋಲಾ ಸಿನಿಮಾವು ತಮಿಳಿನ ಖೈದಿ (Khaidi) ಸಿನಿಮಾದ ರೀಮೇಕ್ ಆಗಿದೆ. ಸಿನಿಮಾವನ್ನು ಸ್ವತಃ ಅಜಯ್ ದೇವಗನ್ ನಿರ್ದೇಶನ ಮಾಡಿದ್ದಾರೆ. ರೀಮೇಕ್ ಸಿನಿಮಾ ಆಗಿದ್ದರೂ ಸಹ ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ವಿಶ್ವದಾದ್ಯಂತ ಸುಮಾರು 4000 ಸ್ಕ್ರೀನ್ಗಳಲ್ಲಿ ಭೋಲಾ ಸಿನಿಮಾ ಬಿಡುಗಡೆ ಆಗಿದೆ. ಮೊದಲ ದಿನ ಹಲವೆಡೆ ಉತ್ತಮ ಪ್ರತಿಕ್ರಿಯೆಗಳು ಸಿನಿಮಾಕ್ಕೆ ವ್ಯಕ್ತವಾಗಿವೆ. ಮೊದಲ ದಿನ ಸಿನಿಮಾ ನೋಡಿದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶೆ ಹಂಚಿಕೊಂಡಿದ್ದು, ಬಹುತೇಕರು ಸಿನಿಮಾ ಚೆನ್ನಾಗಿದೆಯೆಂದು ಹೊಗಳಿದ್ದಾರೆ.
ಜನಪ್ರಿಯ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಸಿನಿಮಾ ನೋಡಿ ಟ್ವಿಟ್ಟರ್ನಲ್ಲಿ ವಿಮರ್ಶೆ ಹಂಚಿಕೊಂಡಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ. ತಮ್ಮ ನಟನೆ ಹಾಗೂ ಸ್ಕ್ರೀನ್ ಪ್ರೆಸೆನ್ಸ್ನಿಂದ ಅಜಯ್ ದೇವಗನ್ ಹಾಗೂ ಟಬು ಸಿನಿಮಾವನ್ನು ಇನ್ನಷ್ಟು ಮಾಸ್ ಆಗಿಸಿದ್ದಾರೆ. ರವಿ ಬಸ್ರೂರು ಸಿನಿಮಾದ ಪ್ರಮುಖ ಪ್ಲಸ್ ಪಾಯಿಂಟ್. ಚಿತ್ರಕತೆ ಇನ್ನಷ್ಟು ಮೊನಚಾಗಿದ್ದು, ಸಿನಿಮಾದ ಅವಧಿ ತುಸು ಕಡಿಮೆ ಇದ್ದಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು ಎಂದಿದ್ದಾರೆ. ಸಿನಿಮಾಕ್ಕೆ ಐದರಲ್ಲಿ ಮೂರು ರೇಟಿಂಗ್ಸ್ ನೀಡಿದ್ದಾರೆ.
ಎಕೆ ಶರ್ಮಾ ಹೆಸರಿನ ಸಿನಿಮಾ ಪ್ರೇಮಿಯೊಬ್ಬರು, ಭೋಲಾ ಸಿನಿಮಾ ಅತ್ಯದ್ಭುತ ಎಂದಿದ್ದಾರೆ. ಸಿನಿಮಾದ ಕೆಲವು ದೃಶ್ಯಗಳಂತೂ ಬಹಳ ಸಮಯ ನೆನಪಿನಲ್ಲಿ ಉಳಿಯುತ್ತವೆ. ಅತ್ಯುದ್ಭುತವಾದ ಸಿನಿಮಾಟೊಗ್ರಫಿ ಹಾಗೂ ಆಕ್ಷನ್ ಅನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ ನೋಡಿ ವಿಶಲ್ ಹೊಡೆಯಿರಿ, ಎಂಜಾಯ್ ಮಾಡಿರಿ ಎಂದಿದ್ದಾರೆ.
ಇದನ್ನೂ ಓದಿ: Movies Releasing This Week: ಈ ವಾರ ಬಂದಿವೆ ಒಂದಕ್ಕಿಂತ ಒಂದು ದೊಡ್ಡ ಸಿನಿಮಾ, ನಿಮ್ಮ ಆಯ್ಕೆ ಯಾವುದು?
ಭೋಲಾ, ಪಕ್ಕಾ ಪೈಸಾ ವಸೂಲ್ ಸಿನಿಮಾ. ನಟನೆ, ಸ್ಟೋರಿ, ವಿಎಫ್ಎಕ್ಸ್ ಹಾಗೂ ಆಕ್ಷನ್ ದೃಶ್ಯಗಳು ನಿಜಕ್ಕೂ ಅದ್ಭುತವಾಗಿವೆ. ಎಲ್ಲದಕ್ಕೂ 100 ರಲ್ಲಿ 90 ಅಂಕ ನೀಡಬಹುದು ಎಂದಿದ್ದಾರೆ ಅಜಯ್ ಕಾಸ್ವಾನ್. ಭೋಲಾ ಒಂದು ಪಕ್ಕಾ ಆಕ್ಷನ್ ಸಿನಿಮಾ, ಆದರೆ ಸಿನಿಮಾದಲ್ಲಿ ಸೆಂಟಿಮೆಂಟ್ ಎಲಿಮೆಂಟ್ ಸಹ ಚೆನ್ನಾಗಿದೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಇದು. ಅಜಯ್ ದೇವಗನ್ ಆಕ್ಷನ್ ದೃಶ್ಯಗಳು ಸಿನಿಮಾವನ್ನು ಬೇರೆ ಲೆವೆಲ್ಗೆ ಕೊಂಡೊಯ್ದಿವೆ. ಟಬು ಮತ್ತೊಮ್ಮೆ ಮಿಂಚಿದ್ದಾರೆ. ವಿಲನ್ ಪಾತ್ರದಲ್ಲಿ ದೀಪಕ್ ದೋಬ್ರಿಯಲ್ ಮತ್ತೊಮ್ಮೆ ಮಿಂಚಿದ್ದಾರೆ ಎಂದಿದ್ದಾರೆ ರೋಹಿತ್ ಜೈಸ್ವಾಲ್.
ಇದೊಂದು ಅದ್ಭುತವಾದ ಮಾಸ್ ಸಿನಿಮಾ, ಜೊತೆಗೆ ಸಖತ್ ಥ್ರಿಲ್ಲಿಂಗ್ ಅಂಶಗಳೂ ಇವೆ. ಅಜಯ್ ದೇವಗನ್, ಭೋಲಾ ಸಿನಿಮಾವನ್ನು ಪಕ್ಕಾ ಪರ್ಫೆಕ್ಷನ್ ರೀತಿಯಲ್ಲಿ ಸೃಷ್ಟಿ ಮಾಡಿದ್ದಾರೆ. ಸಿನಿಮಾದಲ್ಲಿ ಎಮೋಷನ್ ಇದೆ. ವಿಶಲ್ ಹೊಡೆಸಿಕೊಳ್ಳುವ ದೃಶ್ಯಗಳಿವೆ. ಅದ್ಭುತ ಡೈಲಾಗ್ಸ್ಗಳಿವೆ. ಅತ್ಯದ್ಭುತವಾದ ಆಕ್ಷನ್ ದೃಶ್ಯಗಳಿವೆ. 3ಡಿ ಅನುಭವವಂತೂ ಅದ್ಭುತವಾಗಿದೆ ಎಂದಿದ್ದಾರೆ ಅಶ್ವಿನ್ ಕುಮಾರ್ ಹೆಸರಿನ ಸಿನಿಮಾ ಪ್ರೇಮಿ.
ಭೋಲಾ ಸಿನಿಮಾವು ತಮಿಳಿನ ಖೈದಿ ಸಿನಿಮಾದ ರೀಮೇಕ್ ಆಗಿದೆ. ಆದರೆ ಮೂಲ ಸಿನಿಮಾದ ಕತೆಗೆ ಕೆಲವು ಬದಲಾವಣೆಗಳನ್ನು ಮಾಡಿ ಸಿನಿಮಾವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕ ಅಜಯ್ ದೇವಗನ್, ಮೂಲ ಸಿನಿಮಾದಲ್ಲಿ ಕಾರ್ತಿ ನಿರ್ವಹಿಸಿದ್ದ ನಾಯಕ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದು, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಟಬು ಕಾಣಿಸಿಕೊಂಡಿದ್ದಾರೆ.