130 ಮಂದಿಗೆ 70 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟಿ ಕೀರ್ತಿ ಸುರೇಶ್

ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲೊಬ್ಬರಾದ ಕೀರ್ತಿ ಸುರೇಶ್, ನಟನೆ ಜೊತೆಗೆ ತಮ್ಮ ಹೃದಯವೈಶಾಲ್ಯದಿಂದಲೂ ಜನಪ್ರಿಯರು. ಈ ನಟಿ ಇತ್ತೀಚೆಗೆ 135 ಜನರಿಗೆ 70 ಲಕ್ಷ ಮೌಲ್ಯದ ಚಿನ್ನದ ನಾಣ್ಯಗಳನ್ನು ಉಡುಗೊರೆ ನೀಡಿದ್ದಾರಂತೆ!

130 ಮಂದಿಗೆ 70 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟಿ ಕೀರ್ತಿ ಸುರೇಶ್
ಕೀರ್ತಿ ಸುರೇಶ್
Follow us
ಮಂಜುನಾಥ ಸಿ.
|

Updated on: Mar 24, 2023 | 8:13 PM

ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಕೀರ್ತಿ ಸುರೇಶ್ (Keerthy Suresh) ಒಬ್ಬರು. ಮಹಾನಟಿ (Mahanati) ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ (National Award) ಪಡೆದಿರುವ ಈ ನಟಿ ಲುಕ್​ಗಳಿಗಿಂತಲೂ ಹೆಚ್ಚು ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಸೆಳೆದವರು. ಮರಸುತ್ತುವ, ಗ್ಲಾಮರಸ್ ಆಗಿ ಕಾಣುವ ಪಾತ್ರಗಳಿಗೆ ಜೋತುಬೀಳದೆ ನಟನೆಗೆ ಸ್ಕೋಪ್ ಇರುವ ಪಾತ್ರಗಳನ್ನು ಆಯ್ದುಕೊಳ್ಳುತ್ತಾ ಚಿತ್ರರಂಗದಲ್ಲಿ ಛಾಪು ಮೂಡಿಸುತ್ತಿರುವ ಕೀರ್ತಿ ತಮ್ಮ ನಟನೆಯಿಂದ ಮಾತ್ರವಲ್ಲ ತಮ್ಮ ಹೃದಯವಂತಿಕೆಯಿಂದಲೂ, ಸ್ನೇಹಪರ ವ್ಯಕ್ತಿತ್ವದಿಂದಲೂ ಚಿತ್ರರಂಗದಲ್ಲಿ ಎಲ್ಲರ ಕಣ್ಮಣಿ. ಇದೀಗ 130 ಮಂದಿಗೆ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿ ನಟಿ ಕೀರ್ತಿ ಮತ್ತೊಮ್ಮೆ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ.

ಕೀರ್ತಿ ಸುರೇಶ್ ಪ್ರಸ್ತುತ ತೆಲುಗು ಸಿನಿಮಾ ದಸರಾನಲ್ಲಿ (Dasara Movie) ನಾಯಕಿಯಾಗಿ ನಟಿಸಿದ್ದಾರೆ. ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕೀರ್ತಿ ನಟಿಸಿದ್ದು, ನಾನಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಮೂಡಿದೆ. ಸಿನಿಮಾದಲ್ಲಿ ವೆನ್ನಿಲ ಹೆಸರಿನ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಸಿನಿಮಾವನ್ನು ಬಹಳ ಕಷ್ಟಪಟ್ಟು ನಿರ್ಮಿಸಿದ್ದು, ಸಿನಿಮಾದ ಔಟ್​ಪುಟ್ ಚೆನ್ನಾಗಿ ಮೂಡಿಬಂದಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಿನಿಮಾ ತಂಡದ ಶ್ರಮಕ್ಕೆ ಮಾರುಹೋಗಿರುವ ನಟಿ ಕೀರ್ತಿ ಸುರೇಶ್ ಚಿತ್ರತಂಡದ ಎಲ್ಲರಿಗೂ ಒಂದೊಂದು ಚಿನ್ನದ ನಾಣ್ಯಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

ಸಿನಿಮಾಕ್ಕೆ ಕೆಲಸ ಮಾಡಿದ ಲೈಟ್ ಬಾಯ್, ಡ್ರೈವರ್​, ಅಸಿಸ್ಟೆಂಟ್​ಗಳು, ಪ್ರಸಾಧನ ಕಲಾವಿದರು ಎಲ್ಲರಿಗೂ ಕೀರ್ತಿ ಸುರೇಶ್ ಚಿನ್ನದ ನಾಣ್ಯ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿದ್ದು, ದಸರಾ ಸಿನಿಮಾದ ತಂಡವೇ ಈ ಮಾಹಿತಿಯನ್ನು ನೀಡಿರುವುದಾಗಿ ಮಾಧ್ಯಮಗಳು ಹೇಳಿಕೆ ದಾಖಲಿಸಿವೆ. ಎಷ್ಟು ಗ್ರಾಂ ತೂಕದ ಚಿನ್ನದ ನಾಣ್ಯಗಳು ಎಂಬ ಬಗ್ಗೆ ಮಾಹಿತಿ ಇಲ್ಲ ಆದರೆ ಸುಮಾರು 70-80 ಲಕ್ಷ ಮೌಲ್ಯದ ಚಿನ್ನದ ನಾಣ್ಯಗಳನ್ನು ಕೀರ್ತಿ ಸುರೇಶ್ ನೀಡಿದ್ದಾರೆ ಎಂದು ಚಿತ್ರತಂಡದವರೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.

ಮಲಯಾಳಂ ಮೂಲದ ಈ ನಟಿ ಮೊದಲಿಗೆ ಬಾಲನಟಿಯಾಗಿ ನಟಿಸಿ 2013 ರಿಂದ ಈಚೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೋಹನ್​ಲಾಲ್, ವಿಜಯ್, ಸೂರ್ಯ, ಮಹೇಶ್ ಬಾಬು, ವಿಕ್ರಂ ಇನ್ನೂ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿರುವ ಕೀರ್ತಿ ಸುರೇಶ್, ನಾನಿ ಜೊತೆ ಈ ಹಿಂದೆಯೂ ನಟಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ಕೀರ್ತಿ ಸುರೇಶ್​ಗೆ ಅಣ್ಣಾವ್ರ ಕುಟುಂಬದೊಟ್ಟಿಗೆ ಒಳ್ಳೆಯ ಅನುಬಂಧವಿದೆ.

ದಸರಾ ಸಿನಿಮಾ ಹೊರತುಪಡಿಸಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಭೋಲಾ ಶಂಕರ್, ಉದಯನಿಧಿ ಸ್ಟಾಲಿನ್ ಜೊತೆಗೆ ಮಾನಮನ್ ಹೆಸರಿನ ತಮಿಳು ಸಿನಿಮಾ, ಜಯಂ ರವಿ ಜೊತೆಗೆ ಸಿರೆನ್, ರಘು ತಾತ, ರಿವಾಲ್ವರ್ ರೀಟಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ