ನಮ್ಮನ್ನು ಅವಮಾನಿಸಲಾಗುತ್ತಿದೆ: ಚಿರಂಜೀವಿ ಅಭಿಮಾನಿಗಳಲ್ಲಿ ಒಡಕು, ಹೈದರಾಬಾದ್ ಚಲೋ ಕರೆ

ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು, ಅಭಿಮಾನಿ ಸಂಘಗಳನ್ನು ಹೊಂದಿರುವ ಅಗ್ರಗಣ್ಯ ನಟರಲ್ಲಿ ಮೆಗಾಸ್ಟಾರ್ ಚಿರಂಜೀವಿ ಒಬ್ಬರು. ಆದರೆ ಅವರ ಅಭಿಮಾನಿಗಳ ನಡುವೆ ವೈಮನಸ್ಯ ಉಂಟಾಗಿದೆ.

ನಮ್ಮನ್ನು ಅವಮಾನಿಸಲಾಗುತ್ತಿದೆ: ಚಿರಂಜೀವಿ ಅಭಿಮಾನಿಗಳಲ್ಲಿ ಒಡಕು, ಹೈದರಾಬಾದ್ ಚಲೋ ಕರೆ
ಚಿರಂಜೀವಿ
Follow us
ಮಂಜುನಾಥ ಸಿ.
|

Updated on:Mar 24, 2023 | 5:57 PM

ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು, ಅಭಿಮಾನಿ ಸಂಘಗಳನ್ನು ಹೊಂದಿರುವ ಸೂಪರ್ ಸ್ಟಾರ್​ಗಳಲ್ಲಿ (Super Star) ಒಬ್ಬರು ತೆಲುಗಿನ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi). ಒಂದು ಕಾಲದಲ್ಲಿ ಅಭಿಮಾನಿ ಸಂಘಗಳನ್ನು (Fans Association) ಸಿನಿಮಾಕ್ಕೆ ಹಾಗೂ ಸಾಮಾಜಿಕ ಕಾರ್ಯಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡ ನಟ ಚಿರಂಜೀವಿ ಎಂದು ಸಿನಿ ಪಂಡಿತರು ವಿಶ್ಲೇಷಿಸುತ್ತಾರೆ. ಭಾರಿ ದೊಡ್ಡ ಅಭಿಮಾನಿ ಪಡೆಯೇ ಚಿರಂಜೀವಿ ಅವರಿಗೆ ಇದೆ. ಆದರೆ ಈಗ ಈ ಅಭಿಮಾನಿ ಪಡೆಯಲ್ಲಿ ಭಿನ್ನಾಭಿಪ್ರಾಯ ತಲೆದೂರಿದೆ. ಹಳೆಯ ಚಿರಂಜೀವಿ ಅಭಿಮಾನಿ ಸಂಘಗಳು ತಮಗೆ ಅವಮಾನ ಆಗಿದೆಯೆಂದು ಆರೋಪಿಸಿದ್ದು, ಚಿರಂಜೀವಿ ಹಾಗೂ ರಾಮ್ ಚರಣ್ ಅವರನ್ನು ಭೇಟಿಯಾಗಿ ದೂರು ನೀಡಲು ಹೈದರಾಬಾದ್ ಚಲೋ ಯಾತ್ರೆಗೆ ಕರೆ ನೀಡಿದ್ದಾರೆ.

ಆಗಿದ್ದಿಷ್ಟು ನಟ ಚಿರಂಜೀವಿಯವರ ಕೆಲವು ಹಿರಿಯ ಅಭಿಮಾನಿಗಳು ಸೇರಿಕೊಂಡು 2016 ರಲ್ಲಿ ಪ್ರತ್ಯೇಕವಾಗಿ ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಎಂಬ ಸಂಘ ಕಟ್ಟಿದರು. ಆ ಸಂಘಕ್ಕೆ ಹಲವು ಹಿರಿಯ ಚಿರಂಜೀವಿ ಅಭಿಮಾನಿಗಳನ್ನು ಸೇರಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಒಂದು ಪ್ರಕಟಣೆ ಹೊಡೆಸಿದ ರಾಷ್ಟ್ರೀಯ ಚಿರಂಜೀವಿ ಯುವ ಅಭಿಮಾನಿ ಸಂಘ, ಹಾಗೂ ರಾಜ್ಯ ಚಿರಂಜೀವಿ ಯುವ ಅಭಿಮಾನಿ ಸಂಘವು ನಮಗೆ ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಜೊತೆಗೆ ಯಾವುದೇ ಸಂಬಂಧವಿಲ್ಲ ಎಂದಿತ್ತು. ಅವರೊಟ್ಟಿಗೆ ನಾವು ಗುರುತಿಸಿಕೊಳ್ಳುವುದಿಲ್ಲ ಎಂದು ಹೇಳಿತ್ತು. ಇದು ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಕೆಂಗಣ್ಣಿಗೆ ಕಾರಣವಾಗಿತ್ತು. ಅದಷ್ಟೆ ಅಲ್ಲದೆ, ಇತ್ತೀಚೆಗೆ ಅಭಿಮಾನಿಗಳೊಟ್ಟಿಗೆ ರಾಮ್ ಚರಣ್​ರ ಫೋಟೊಶೂಟ್​ ಬಗ್ಗೆ ಸಹ ತಮ್ಮ ಫೆಡರೇಷನ್​ಗೆ ಮಾಹಿತಿ ನೀಡಲಾಗಿಲ್ಲ. ಹಾಗೂ ಫೆಡರೇಶನ್​ನವರು ಚಿರಂಜೀವಿ ಹಾಗೂ ರಾಮ್ ಚರಣ್ ಅವರನ್ನು ಭೇಟಿಯಾಗದಂತೆ ಕೆಲವು ಅಭಿಮಾನಿ ಸಂಘದವರು ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಫೆಡರೇಶನ್​ ಸದಸ್ಯರು.

ಇತ್ತೀಚೆಗಷ್ಟೆ ಒಂಗೊಲ್​ನಲ್ಲಿ ಸಮಾವೇಶ ಮಾಡಿದ ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಸದಸ್ಯರು, ಯುವ ಅಭಿಮಾನಿಗಳು ಮಾಡಿರುವ ಕಾರ್ಯ, ಮಾಡುತ್ತಿರುವ ಕಾರ್ಯ ಮೆಗಾ ಸಹೋದರರು ತಲೆತಗ್ಗಿಸುವಂಥಹದ್ದಾಗಿದೆ. ಅಲ್ಲದೆ ಇಂಟರ್​ನ್ಯಾಷನಲ್ ಚಿರಂಜೀವಿ ಫೆಡರೇಷನ್ ಅಭಿಮಾನಿ ಸಂಘದವರಿಗೆ, ಹಿರಿಯ ಚಿರಂಜೀವಿ ಅಭಿಮಾನಿಗಳಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಲ್ಲದೆ, ಸೇವ್ ರಿಯಲ್ ಫ್ಯಾನ್ಸ್, ರೆಸ್ಪೆಕ್ಟ್ ಸೀನಿಯರ್ ಫ್ಯಾನ್ಸ್ (ನಿಜವಾದ ಅಭಿಮಾನಿಗಳನ್ನು ರಕ್ಷಿಸಿ, ಹಿರಿಯ ಅಭಿಮಾನಿಗಳನ್ನು ಗೌರವಿಸಿ) ಎಂಬ ಘೋಷಣೆಗಳನ್ನು ಕೂಗಿದರು. ಇದೇ ಘೋಷ ವಾಕ್ಯದಡಿ ಹೈದರಾಬಾದ್ ಚಲೋ ಯಾತ್ರೆಗೆ ಕರೆ ನೀಡಿದ್ದು, ಒಂಗೂಲ್​ನಿಂದ ಹೈದರಾಬಾದ್​ಗೆ ಪಾದಯಾತ್ರೆ ಮಾಡಿ ಚಿರಂಜೀವಿ-ರಾಮ್ ಚರಣ್ ಅವರನ್ನು ಭೇಟಿಯಾಗಿ ತಮ್ಮ ನೋವು ಹೇಳಿಕೊಳ್ಳುವುದಾಗಿ ಘೋಷಿಸಿದ್ದಾರೆ.

ನಟ ಚಿರಂಜೀವಿ ತಮ್ಮ ಅಭಿಮಾನಿಗಳ ಬಗ್ಗೆ ವಿಶೇಷ ಕಾಳಜಿಯುವಳ್ಳ ನಟರಾಗಿದ್ದಾರೆ. ಸಂಕಷ್ಟದಲ್ಲಿರುವ ತಮ್ಮ ಹಲವು ಅಭಿಮಾನಿಗಳಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈಗ ತಮ್ಮದೇ ಅಭಿಮಾನಿ ಸಂಘದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು ಇದನ್ನು ಚಿರಂಜೀವಿ ಹೇಗೆ ನಿಭಾಯಿಸುತ್ತಾರೆ ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Fri, 24 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ