ಹಣದ ಆಸೆಗೆ ಮಲ್ಟಿಫ್ಲೆಕ್ಸ್​ಗಳು ಕನ್ನಡ ಸಿನಿಮಾಗಳಿಗೆ ಅನ್ಯಾಯ ಮಾಡುತ್ತಿವೆ: ಆರ್.ಚಂದ್ರು

ಮಲ್ಟಿಫ್ಲೆಕ್ಸ್ ಗಳು ತಾವು ಹಣ ಉಳಿಸಲು ಸಿನಿಮಾಗಳಿಗೆ ಅನ್ಯಾಯ ಮಾಡುತ್ತಿವೆ, ಈ ಬಗ್ಗೆ ಚಿತ್ರರಂಗದಲ್ಲಿ ಚರ್ಚೆಯಾಗಿ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ನಿರ್ದೇಶಕ ಆರ್.ಚಂದ್ರು ಹೇಳಿದ್ದಾರೆ.

ಹಣದ ಆಸೆಗೆ ಮಲ್ಟಿಫ್ಲೆಕ್ಸ್​ಗಳು ಕನ್ನಡ ಸಿನಿಮಾಗಳಿಗೆ ಅನ್ಯಾಯ ಮಾಡುತ್ತಿವೆ: ಆರ್.ಚಂದ್ರು
ಆರ್.ಚಂದ್ರು
Follow us
ಮಂಜುನಾಥ ಸಿ.
|

Updated on:Mar 24, 2023 | 5:24 PM

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು (Single Screen Teater) ಒಂದೊಂದಾಗಿ ಕಾಣೆಯಾಗುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕವೊಂದರಲ್ಲೇ ಸುಮಾರು 200 ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಹಾಕಿವೆ. ಅದರ ಬೆನ್ನಲ್ಲೆ ಮಲ್ಟಿಫ್ಲೆಕ್ಸ್​ಗಳು (Multiplex) ಒಂದರ ಹಿಂದೊಂದು ತಲೆ ಎತ್ತುತ್ತಿವೆ. ಸಿನಿಮಾ ಬಿಡುಗಡೆ, ಟಿಕೆಟ್ ಬೆಲೆ, ಶೋ ಲೆಕ್ಕಾಚಾರ, ಲಾಭ ಹಂಚಿಕೆ ಇನ್ನಿತರೆ ವಿಷಯಗಳಲ್ಲಿ ಮಲ್ಟಿಫ್ಲೆಕ್ಸ್​ಗಳು ಈಗಾಗಲೇ ಚಿತ್ರರಂಗ, ನಿರ್ಮಾಣ ಸಂಸ್ಥೆಗಳ ಮೇಲೆ ಪ್ರಭಾವ ಬೀರುತ್ತಿದ್ದು, ಇಡೀಯ ಚಿತ್ರರಂಗವನ್ನೇ ತನ್ನ ಕೈಗೊಂಬೆಯನ್ನಾಗಿ ಪರಿವರ್ತಿಸಿಕೊಳ್ಳುವ ಕಾಲ ದೂರವಿಲ್ಲ. ಇತ್ತೀಚೆಗಷ್ಟೆ ಕಬ್ಜ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಿರುವ ಆರ್.ಚಂದ್ರು ಇತ್ತೀಚೆಗಿನ ಸಂದರ್ಶನದಲ್ಲಿ ಮಲ್ಟಿಫ್ಲೆಕ್ಸ್​ಗಳು ಸಿನಿಮಾಗಳಿಗೆ, ಪ್ರೇಕ್ಷಕರಿಗೆ ಮಾಡುತ್ತಿರುವ ಮೋಸದ ಬಗ್ಗೆ ಮಾತನಾಡಿದ್ದು, ಈ ಬಗ್ಗೆ ಹೋರಾಟದ ಅವಶ್ಯಕತೆ ಇದೆ ಎಂದಿದ್ದಾರೆ.

ಕಬ್ಜ ಸಿನಿಮಾವನ್ನು ಆರ್.ಚಂದ್ರು ದೊಡ್ಡ ಬಜೆಟ್​ನಲ್ಲಿ ಅದರಲ್ಲಿಯೂ ತಾಂತ್ರಿಕ ಅಂಶಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ ನಿರ್ದೇಶಿಸಿ ನಿರ್ಮಿಸಿದ್ದಾರೆ. ದೃಶ್ಯಗಳು, ಎಡಿಟಿಂಗ್ ಅದಕ್ಕೆ ತಕ್ಕಂತೆ ಸೌಂಡ್ ಎಲ್ಲದರ ಮೇಲೂ ವಿಶೇಷ ಕಾಳಜಿಯನ್ನು ಆರ್.ಚಂದ್ರು ವಹಿಸಿದ್ದಾರೆ. ಆದರೆ ಕೆಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಕಬ್ಜ ಸಿನಿಮಾಕ್ಕೆ ಸರಿಯಾಗಿ ಸೌಂಡ್ ನೀಡದ ಕಾರಣ ಪ್ರೇಕ್ಷಕರಿಗೆ ಸಿನಿಮಾದ ಅನುಭೂತಿ ಸರಿಯಾಗಿ ಆಗುತ್ತಿಲ್ಲವಂತೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಆರ್.ಚಂದ್ರು, ”ಮಲ್ಟಿಫ್ಲೆಕ್ಸ್​ಗಳಲ್ಲಿ ಸರಿಯಾಗಿ ಸೌಂಡ್ ಕೊಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಮಲ್ಟಿಫ್ಲೆಕ್ಸ್​ನವರು ಹಣ ಉಳಿಸಲು ಸೌಂಡ್ ಫ್ರಿಕ್ವೆನ್ಸಿ ಕಡಿಮೆ ಮಾಡುತ್ತಾರೆ. 5 ಕೊಡಬೇಕಾಗಿರುವ ಕಡೆ 3.5 ಕೊಡುತ್ತಾರೆ. ಒಮ್ಮೊಮ್ಮೆ ಹಣ ಉಳಿಸಲು ಒಂದೆರಡು ಸ್ಪೀಕರ್​ಗಳನ್ನು ಆಫ್ ಮಾಡಿಬಿಡುತ್ತಾರೆ. ಇದರಿಂದ ಒಂದು ಶೋಗೆ ಅವರಿಗೆ ಐದಾರು ಸಾವಿರ ಉಳಿತಾಯವಾಗುತ್ತದೆ ಇದರಿಂದ ಪ್ರೇಕ್ಷಕರಿಗೆ ಸಿನಿಮಾದ ಫೀಲ್ ಸಂಪೂರ್ಣವಾಗಿ ಸಿಗುವುದಿಲ್ಲ. ಈ ಬಗ್ಗೆ ಮೊದಲಿನಿಂದಲೂ ಆಕ್ಷೇಪ ಇದೆ. ನಾನು ಈ ವಿಷಯವನ್ನು ನಿರ್ಮಾಪಕ ಶ್ರೀಕಾಂತ್ ಹಾಗೂ ಇತರೆ ಕೆಲವರೊಟ್ಟಿಗೆ ಚರ್ಚಿಸಿ ಇದಕ್ಕೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಮಾಡುತ್ತೇವೆ” ಎಂದಿದ್ದಾರೆ ಚಂದ್ರು.

ಮಲ್ಟಿಫ್ಲೆಕ್ಸ್​ನಲ್ಲಿ ಸರಿಯಾಗಿ ಸೌಂಡ್ ಕೊಡುವುದಿಲ್ಲ ಎಂಬುದು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿರುವ ದೂರು. ಈ ಹಿಂದೆಯೂ ಕೆಲವು ಮಲ್ಟಿಫ್ಲೆಕ್ಸ್​ಗಳಲ್ಲಿ ಅಭಿಮಾನಿಗಳು ಇದೇ ಕಾರಣಕ್ಕೆ ಜಗಳ ಸಹ ಮಾಡಿದ್ದಿದೆ. ಸೌಂಡ್ ಕಡಿಮೆ ಕೊಡುವುದರಿಂದ ವಿದ್ಯುತ್ ಕಡಿಮೆ ಬಳಕೆ ಆಗಿ ಹಣ ಉಳಿಯುತ್ತದೆ. ಹಲವು ಸ್ಕ್ರೀನ್​ಗಳನ್ನು ಹೊಂದಿರುವ ಮಲ್ಟಿಫ್ಲೆಕ್ಸ್​ಗಳಲ್ಲಿ ದಿನಕ್ಕೆ ಸುಮಾರು 30 ಕ್ಕಿಂತಲೂ ಹೆಚ್ಚು ಶೋಗಳನ್ನು ಪ್ರದರ್ಶಿನಗೊಳ್ಳುತ್ತವೆ. ಸೌಂಡ್ ಕಡಿಮೆ ಮಾಡುವುದರಿಂದ ಅಥವಾ ಒಂದೆರಡು ಸ್ಪೀಕರ್ ಆಫ್ ಮಾಡುವುದರಿಂದ ದಿನವೊಂದಕ್ಕೆ ಸಾವಿರಾರು ರುಪಾಯಿ ಹಣವನ್ನು ಮಲ್ಟಿಫ್ಲೆಕ್ಸ್​ಗಳು ಉಳಿಸುತ್ತವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Fri, 24 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ