AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಓಪನಿಂಗ್​ ಸಿಗದಿದ್ದರೂ ಸೂಪರ್​ ಹಿಟ್​ ಆದ ಕನ್ನಡ ಸಿನಿಮಾಗಳು: ಮೌತ್​ ಪಬ್ಲಿಸಿಟಿಗಿದೆ ದೊಡ್ಡ ಶಕ್ತಿ

ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾದರೆ ಅವರೇ ಉತ್ತಮ ಪ್ರಚಾರ ನೀಡುತ್ತಾರೆ. ಮೌತ್​ ಪಬ್ಲಿಸಿಟಿಯಿಂದ ಗೆದ್ದ ಸಿನಿಮಾಗಳು ಸಾಕಷ್ಟಿವೆ.

ಭರ್ಜರಿ ಓಪನಿಂಗ್​ ಸಿಗದಿದ್ದರೂ ಸೂಪರ್​ ಹಿಟ್​ ಆದ ಕನ್ನಡ ಸಿನಿಮಾಗಳು: ಮೌತ್​ ಪಬ್ಲಿಸಿಟಿಗಿದೆ ದೊಡ್ಡ ಶಕ್ತಿ
ಪ್ರೇಮಲೋಕ, ದಿಯಾ, ಲವ್ ಮಾಕ್ಟೇಲ್, ಮುಂಗಾರುಮಳೆ
ಮದನ್​ ಕುಮಾರ್​
|

Updated on: Mar 24, 2023 | 1:19 PM

Share

ಮೊದಲ ದಿನ ದೊಡ್ಡ ಓಪನಿಂಗ್​ ಪಡೆಯಬೇಕು ಎಂಬ ಆಸೆ ಎಲ್ಲ ಸಿನಿಮಾ ತಂಡಗಳಿಗೆ ಇರುತ್ತದೆ. ಫಸ್ಟ್​ ಡೇ ಭರ್ಜರಿ ಕಲೆಕ್ಷನ್​ (Box Office Collection) ಆಯಿತು ಎಂದರೆ ಮುಂದಿನ ಹಾದಿ ಸುಲಭ. ವೀಕೆಂಡ್​ನಲ್ಲಿ ಸಹಜವಾಗಿಯೇ ಒಳ್ಳೆಯ ಕಮಾಯಿ ಆಗುತ್ತದೆ. ಆದರೆ ಅಂಥ ಓಪನಿಂ​ಗ್​ ಸಿಗುವುದು ಕೆಲವೇ ಚಿತ್ರಗಳಿಗೆ ಮಾತ್ರ. ಹಾಗಂತ ಮೊದಲ ದಿನದ ಗಳಿಕೆಯೇ ನಿರ್ಣಾಯಕವಲ್ಲ. ಫಸ್ಟ್​ ಡೇ ಫಸ್ಟ್​ ಶೋ (First Day First Show) ತುಂಬ ನೀರಸವಾಗಿದ್ದರೂ ಕೂಡ ನಂತರದಲ್ಲಿ ದೊಡ್ಡ ಸಕ್ಸಸ್​ ಕಂಡ ಸಿನಿಮಾಗಳು ಸಾಕಷ್ಟಿವೆ. ಪ್ರತಿ ಭಾಷೆಯ ಚಿತ್ರರಂಗದಲ್ಲೂ ಇಂಥ ಬೆಳವಣಿಗೆ ಸಹಜ. ಸ್ಯಾಂಡಲ್​ವುಡ್​​ನಲ್ಲೂ ಆ ರೀತಿ ಆಗಿದ್ದುಂಟು. ಕಾಂತಾರ (Kantara), ಮುಂಗಾರು ಮಳೆ, ದಿಯಾ, ಪ್ರೇಮಲೋಕ, ಲವ್​ ಮಾಕ್ಟೇಲ್​ ಮುಂತಾದ ಸಿನಿಮಾಗಳೇ ಈ ಮಾತಿಗೆ ಉದಾಹರಣೆ. ಆ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ..

ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’:

‘ಕಾಂತಾರ’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅಬ್ಬರಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕೇವಲ ಕನ್ನಡದಲ್ಲಿ ರಿಲೀಸ್​ ಆದ ಈ ಚಿತ್ರ ಮೊದಲ ದಿನ ಕರುನಾಡಿನಲ್ಲಿ ಮಾತ್ರ ಸದ್ದು ಮಾಡಿತು. ಆದರೆ ಈ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಸಖತ್​ ಆಗಿ ಸಿಕ್ಕಿತು. ಪರಿಣಾಮವಾಗಿ ನಂತರದ ವಾರಗಳಲ್ಲಿ ಡಬ್ಬಿಂಗ್​ ವರ್ಷನ್​ ಬಿಡುಗಡೆ ಮಾಡಲಾಯಿತು. ಅಂತಿಮವಾಗಿ ಈ ಸಿನಿಮಾ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತು.

Kantara 2: ಯುಗಾದಿ ದಿನವೇ ಸಿಹಿ ಸುದ್ದಿ ನೀಡಿದ ರಿಷಬ್​ ಶೆಟ್ಟಿ; ಇಲ್ಲಿದೆ ‘ಕಾಂತಾರ 2’ ಅಪ್​ಡೇಟ್​

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಕೆ.ಎಸ್​. ಅಶೋಕ್​ ನಿರ್ದೇಶನದ ‘ದಿಯಾ’:

‘ದಿಯಾ’ ಸಿನಿಮಾದಲ್ಲಿ ರೊಮ್ಯಾಂಟಿಕ್​ ಕಥೆ ಇದೆ. ನಿರ್ದೇಶಕ ಕೆ.ಎಸ್​. ಅಶೋಕ್​ ಅವರು ತೋರಿಸಿದ ತ್ರಿಕೋನ ಪ್ರೇಮಕಥೆಗೆ ಪ್ರೇಕ್ಷಕರು ಮರುಳಾಗಿದ್ದಾರೆ. ಆದರೆ ಈ ಚಿತ್ರ ತೆರೆಕಂಡಾಗ ಮೊದಲ ದಿನ ಅಷ್ಟೇನೂ ಕಲೆಕ್ಷನ್​ ಆಗಲಿಲ್ಲ. ಆದರೆ ಬಾಯಿ ಮಾತಿನ ಪ್ರಚಾರದಿಂದಾಗಿ ಈ ಚಿತ್ರದ ಗಳಿಕೆ ಹೆಚ್ಚಾಗತೊಡಗಿತು. ಈ ಸಿನಿಮಾದಲ್ಲಿ ದೀಕ್ಷಿತ್​ ಶೆಟ್ಟಿ, ಖುಷಿ ರವಿ, ಪೃಥ್ವಿ ಅಂಬಾರ್​, ಪವಿತ್ರಾ ಲೋಕೇಶ್​ ಮುಂತಾದವರು ನಟಿಸಿದ್ದಾರೆ.

ಮತ್ತೆ ಒಂದಾಗಲಿದೆ ದಿಯಾ ಜೋಡಿ; ಹೇಗಿರಲಿದೆ ಈ ಸಿನಿಮಾ ಕಥೆ?

ಡಾರ್ಲಿಂಗ್​ ಕೃಷ್ಣ ನಿರ್ದೇಶನದ ‘ಲವ್​ ಮಾಕ್ಟೇಲ್​’:

ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್​ ಕೃಷ್ಣ ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಿದ್ದು ‘ಲವ್​ ಮಾಕ್ಟೇಲ್​’ ಸಿನಿಮಾದಿಂದ. ಆದರೆ ಈ ಚಿತ್ರಕ್ಕೆ ಉತ್ತಮ ಓಪನಿಂಗ್​ ಸಿಕ್ಕಿರಲಿಲ್ಲ. ಒಂದು ವಾರ ಕಳೆಯುವುದರೊಳಗೆ ಬಹುತೇಕ ಎಲ್ಲ ಚಿತ್ರಮಂದಿರಗಳಿಂದ ಈ ಸಿನಿಮಾವನ್ನು ತೆಗೆದು ಹಾಕಲಾಯಿತು. ಆದರೆ ಎರಡನೇ ವಾರದಲ್ಲಿ ಮ್ಯಾಜಿಕ್​ ನಡೆಯಿತು. ಮೌತ್​ ಪಬ್ಲಿಸಿಟಿಯಿಂದಾಗಿ ಈ ಸಿನಿಮಾಗೆ ಜನರು ಬರಲಾರಂಭಿಸಿದರು. ಶೋಗಳ ಸಂಖ್ಯೆ ಹೆಚ್ಚಿತು.

Love Mocktail 3: ‘ಲವ್​ ಮಾಕ್ಟೇಲ್​ 3’ ಕೆಲಸ ಆರಂಭಿಸಿದ ಡಾರ್ಲಿಂಗ್​ ಕೃಷ್ಣ; ಮುಂದುವರಿಯಲಿದೆ ಆದಿ-ನಿಧಿ ಕಥೆ

ಯೋಗರಾಜ್​ ಭಟ್​ ನಿರ್ದೇಶನದ ‘ಮುಂಗಾರು ಮಳೆ’:

ಕನ್ನಡ ಚಿತ್ರರಂಗದಲ್ಲಿ ‘ಮುಂಗಾರು ಮಳೆ’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕೆಲವೇ ಕೆಲವು ಟ್ರೆಂಡ್​ ಸೆಟ್ಟರ್​ ಸಿನಿಮಾಗಳಲ್ಲಿ ಈ ಚಿತ್ರ ಕೂಡ ಇದೆ. ಆದರೆ ಆರಂಭದಲ್ಲೇ ‘ಮುಂಗಾರು ಮಳೆ’ಗೆ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ನಿಧಾನವಾಗಿ ಬಾಯಿ ಮಾತಿನ ಪ್ರಚಾರ ಉತ್ತಮವಾಗಿ ಸಿಕ್ಕಿದ್ದರಿಂದ ಈ ಸಿನಿಮಾ ನಂತರದ ವಾರಗಳಲ್ಲಿ ಅಬ್ಬರಿಸಿತು.

‘ಮುಂಗಾರು ಮಳೆ’ ತಂಡದಲ್ಲೂ ಮನಸ್ತಾಪ ಆಗಿತ್ತು; ಸ್ನೇಹದ ಅಸಲಿ ವಿಚಾರ ತೆರೆದಿಟ್ಟ ಗಣೇಶ್​

ರವಿಚಂದ್ರನ್​ ನಿರ್ದೇಶನದ ‘ಪ್ರೇಮಲೋಕ’:

1987ರಲ್ಲಿ ತೆರೆಕಂಡ ‘ಪ್ರೇಮಲೋಕ’ ಸಿನಿಮಾವನ್ನು ಕನ್ನಡ ಚಿತ್ರಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ರವಿಚಂದ್ರನ್ ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟ ರೀತಿಯೇ ಭಿನ್ನವಾಗಿತ್ತು. ಆದರೆ ಆರಂಭದಲ್ಲಿ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿರಲಿಲ್ಲ. ನಂತರದ ವಾರಗಳಲ್ಲಿ ‘ಪ್ರೇಮಲೋಕ’ ಬಗ್ಗೆ ಜನರು ಸಖತ್​ ಆಸಕ್ತಿ ತೋರಿಸಿದರು. ಬಾಯಿ ಮಾತಿನ ಪ್ರಚಾರ ಸಿಕ್ಕಿದ್ದರಿಂದ ಈ ಚಿತ್ರ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?