Love Mocktail 3: ‘ಲವ್​ ಮಾಕ್ಟೇಲ್​ 3’ ಕೆಲಸ ಆರಂಭಿಸಿದ ಡಾರ್ಲಿಂಗ್​ ಕೃಷ್ಣ; ಮುಂದುವರಿಯಲಿದೆ ಆದಿ-ನಿಧಿ ಕಥೆ

Darling Krishna | Milana Nagaraj: ‘ಲವ್​ ಮಾಕ್ಟೇಲ್​ 3’ ಬರುತ್ತೋ ಇಲ್ಲವೋ ಎಂಬ ಬಗ್ಗೆ ಇಷ್ಟು ದಿನ ಸ್ಪಷ್ಟತೆ ಇರಲಿಲ್ಲ. ಆದರೆ ಈಗ ಡಾರ್ಲಿಂಗ್​ ಕೃಷ್ಣ ಅವರು ಅಧಿಕೃತವಾಗಿ ಅನೌನ್ಸ್​ ಮಾಡಿದ್ದಾರೆ.

Love Mocktail 3: ‘ಲವ್​ ಮಾಕ್ಟೇಲ್​ 3’ ಕೆಲಸ ಆರಂಭಿಸಿದ ಡಾರ್ಲಿಂಗ್​ ಕೃಷ್ಣ; ಮುಂದುವರಿಯಲಿದೆ ಆದಿ-ನಿಧಿ ಕಥೆ
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್
Follow us
TV9 Web
| Updated By: ಮದನ್​ ಕುಮಾರ್​

Updated on:Mar 22, 2023 | 6:34 PM

ಎಲ್ಲೆಡೆ ತುಂಬ ಸಡಗರದಿಂದ ಯುಗಾದಿ ಹಬ್ಬ ಆಚರಿಸಲಾಗುತ್ತಿದೆ. ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಮನೆಯಲ್ಲಿ ಇಂದು (ಮಾರ್ಚ್​ 22) ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಶುಭ ದಿನದಂದು ಕೆಲವು ಹೊಸ ಹೊಸ ಸಿನಿಮಾಗಳನ್ನು ಘೋಷಿಸಲಾಗುತ್ತಿದೆ. ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರು ತಮ್ಮ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್​ ನೀಡಿದ್ದಾರೆ. ಅವರು ‘ಲವ್​ ಮಾಕ್ಟೇಲ್​ 3’ (Love Mocktail 3) ಸಿನಿಮಾ ಮಾಡೋದು ಖಚಿತವಾಗಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ ನೋಡಿದ ಅಭಿಮಾನಿಗಳಿಗೆ ಖುಷಿ ಆಗಿದೆ. ‘ಲವ್​ ಮಾಕ್ಟೇಲ್​ 3.. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಡಾರ್ಲಿಂಗ್​ ಕೃಷ್ಣ ವಿಶ್​ ಮಾಡಿದ್ದಾರೆ. ನಟಿ ಮಿಲನಾ ನಾಗರಾಜ್​ (Milana Nagaraj) ಕೂಡ ಈ ಪೋಸ್ಟ್​ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರಿಗೆ ಮೊದಲ ಬಾರಿ ದೊಡ್ಡ ಯಶಸ್ಸು ಸಿಕ್ಕಿದ್ದು ‘ಲವ್​ ಮಾಕ್ಟೇಲ್​’ ಸಿನಿಮಾದಿಂದ. ಆ ಚಿತ್ರ 2020ರ ಜನವರಿ 31ರಂದು ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿತು. ಅವರಿಬ್ಬರು ಮಾಡಿದ ಆದಿ ಮತ್ತು ನಿಧಿ ಎಂಬ ಪಾತ್ರ ಟ್ರೆಂಡ್​ ಸೃಷ್ಟಿ ಮಾಡಿತು. ನಂತರ ಆ ಸಿನಿಮಾಗೆ ಸೀಕ್ವೆಲ್​ ಮಾಡಲಾಯಿತು. 2022ರ ಫೆಬ್ರವರಿ 11ರಂದು ‘ಲವ್​ ಮಾಕ್ಟೇಲ್​ 2’ ರಿಲೀಸ್​ ಆಯಿತು. ಈಗ ‘ಲವ್​ ಮಾಕ್ಟೇಲ್​ 3’ ಬರಲಿದೆ.

ಇದನ್ನೂ ಓದಿ
Image
Milana Nagaraj: ‘ಡಿಯರ್​​ ವಿಕ್ರಮ್​’ ಹೇಗಿದೆ? ಸತೀಶ್​ ನೀನಾಸಂ, ಶ್ರದ್ಧಾ ಶ್ರೀನಾಥ್​ ನಟನೆಯ ಚಿತ್ರಕ್ಕೆ ಮಿಲನಾ ವಿಮರ್ಶೆ
Image
Darling Krishna Birthday: ಬರ್ತ್​ಡೇ ಪ್ರಯುಕ್ತ ಮಾಲ್ಡೀವ್ಸ್​ಗೆ ತೆರಳಿದ ಡಾರ್ಲಿಂಗ್​ ಕೃಷ್ಣ-ಮಿಲನಾ; ಇಲ್ಲಿವೆ ಕ್ಯೂಟ್​ ಜೋಡಿಯ ಫೋಟೋ
Image
‘ಅವತಾರ ಪುರುಷ’ ಸಿನಿಮಾ ನೋಡಿ ಕಣ್ಣಲ್ಲಿ ನೀರು ಬರುವಷ್ಟು ನಕ್ಕುಬಿಟ್ಟೆ ಎಂದ ಮಿಲನಾ ನಾಗರಾಜ್
Image
ಸಿಂಗಾಪುರದಲ್ಲಿ ಮಿಲನಾ ನಾಗರಾಜ್​-ಡಾರ್ಲಿಂಗ್ ಕೃಷ್ಣ; ವೈರಲ್ ಆಯ್ತು ಫೋಟೋ

‘ಲವ್​ ಮಾಕ್ಟೇಲ್​ 2’ ಸಿನಿಮಾ ಸೂಪರ್​ ಹಿಟ್​ ಆದ ನಂತರ ‘ಲವ್​ ಮಾಕ್ಟೇಲ್​ 3’ ಬರುತ್ತಾ ಎಂಬ ಪ್ರಶ್ನೆ ಪ್ರೇಕ್ಷಕರಿಂದ ಕೇಳಿಬರಲು ಆರಂಭಿಸಿತ್ತು. ಆದರೆ ಅದಕ್ಕೆ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಅವರು ಸ್ಪಷ್ಟ ಉತ್ತರ ನೀಡಿರಲಿಲ್ಲ. ‘ಪಾರ್ಟ್​ 3’ ಮಾಡುವ ಉದ್ದೇಶ ಅವರಿಗೆ ಇತ್ತು. ಆದರೆ ‘ಒಳ್ಳೆಯ ಕಥೆ ಸಿಕ್ಕರೆ ಮಾತ್ರ ಮಾಡುತ್ತೇವೆ’ ಎಂದು ಅವರು ಹೇಳಿದ್ದರು. ಈಗ ಸೂಕ್ತವಾದ ಕಥೆ ಸಿಕ್ಕಿದೆ. ಹಾಗಾಗಿ ಅಧಿಕೃತವಾಗಿ ‘ಲವ್​ ಮಾಕ್ಟೇಲ್​ 3’ ಬಗ್ಗೆ ಅನೌನ್ಸ್​ ಮಾಡಲಾಗಿದೆ.

ಇದನ್ನೂ ಓದಿ: KrissMi Nest: ಮಿಲನಾ ನಾಗರಾಜ್​-ಡಾರ್ಲಿಂಗ್​ ಕೃಷ್ಣ ಹೊಸ ಮನೆ; ಇಲ್ಲಿದೆ ಗೃಹ ಪ್ರವೇಶದ ಸುಂದರ ಫೋಟೋ ಗ್ಯಾಲರಿ

‘ಲವ್​ ಮಾಕ್ಟೇಲ್​’ ಮತ್ತು ‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲಿ ಕಾಣಿಸಿಕೊಂಡ ಎಲ್ಲ ಪಾತ್ರಗಳನ್ನು ಕೂಡ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​ ಮಾತ್ರವಲ್ಲದೇ ರಚನಾ ಇಂದರ್​, ಅಮೃತಾ ಅಯ್ಯಂಗಾರ್​, ರೇಚಲ್​ ಡೇವಿಡ್​ ಮುಂತಾದವರು ಕೂಡ ಗಮನ ಸೆಳೆದರು. ‘ಲವ್​ ಮಾಕ್ಟೇಲ್​ 3’ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಅಪ್​ಡೇಟ್​ ಸಿಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:34 pm, Wed, 22 March 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ