‘ಬಾಡಿಗಿಂತ, ಮಾನಸಿಕ ಟ್ರಾನ್ಸ್​ಫಾರ್ಮೇಷನ್ ಮುಖ್ಯ’; ರಗಡ್ ‘ರಾನಿ’ ಲುಕ್ ಬಗ್ಗೆ ಕಿರಣ್ ರಾಜ್ ಮಾತು

Kiran Raj: ಕಿರಣ್ ರಾಜ್ ಅವರು ‘ರಾನಿ’ ಚಿತ್ರಕ್ಕಾಗಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮೈಮೇಲೆ ಶಾಲ್​​ ಹೊದ್ದುಕೊಂಡಿದ್ದಾರೆ. ಅದರ ಮೇಲೆ ರಕ್ತದ ಕಲೆ ಇದೆ.

‘ಬಾಡಿಗಿಂತ, ಮಾನಸಿಕ ಟ್ರಾನ್ಸ್​ಫಾರ್ಮೇಷನ್ ಮುಖ್ಯ’; ರಗಡ್ ‘ರಾನಿ’ ಲುಕ್ ಬಗ್ಗೆ ಕಿರಣ್ ರಾಜ್ ಮಾತು
ಕಿರಣ್ ರಾಜ್
Follow us
|

Updated on:Mar 22, 2023 | 12:32 PM

ಕಿರಣ್ ರಾಜ್ ಅವರು ‘ಕನ್ನಡತಿ’ ಧಾರಾವಾಹಿ (Kannadathi Serial) ಮೂಲಕ ಕನ್ನಡಿಗರಿಗೆ ಪರಿಚಯಗೊಂಡರು. ಈ ಧಾರಾವಾಹಿಯಲ್ಲಿ ಅವರು ಮಾಡಿದ ಹರ್ಷನ ಪಾತ್ರ ಗಮನ ಸೆಳೆದಿತ್ತು. ಕಿರಣ್ ರಾಜ್ ಅವರನ್ನು ನೋಡಿದ ತಕ್ಷಣ ಹರ್ಷನ ಪಾತ್ರ ನೆನಪಿಗೆ ಬರುತ್ತಿತ್ತು. ಈಗ ‘ರಾನಿ’ ಚಿತ್ರದ ಮೂಲಕ ಹಳೆಯ ಪಾತ್ರಗಳನ್ನು ಮರೆಸಲು ಕಿರಣ್ ರಾಜ್ ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಸಖತ್ ಮಾಸ್ ಅವತಾರ ತಾಳಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ‘ರಾನಿ’ ಚಿತ್ರದ (Ronny Movie) ಹೊಸ ಪೋಸ್ಟರ್ ರಿವೀಲ್ ಆಗಿದೆ. ಕಿರಣ್ ರಾಜ್ (Kiran Raj) ಅವರ ಲುಕ್ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ. ಚಿತ್ರದ ಬಗ್ಗೆ, ಪಾತ್ರಕ್ಕಾಗಿ ನಡೆಸಿದ ತಯಾರಿ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜೊತೆ ಕಿರಣ್ ರಾಜ್ ಮಾತನಾಡಿದ್ದಾರೆ.

ಕಿರಣ್ ರಾಜ್ ಅವರು ‘ರಾನಿ’ ಚಿತ್ರಕ್ಕಾಗಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮೈಮೇಲೆ ಶಾಲ್​​ ಹೊದ್ದುಕೊಂಡಿದ್ದಾರೆ. ಅದರ ಮೇಲೆ ರಕ್ತದ ಕಲೆ ಇದೆ. ಕೈಯಲ್ಲಿ ಸಿಗರೇಟ್ ಇದೆ. ಬಾಡಿಯಲ್ಲಿ ಅವರ ಟ್ರಾನ್ಸ್​ಫಾರ್ಮೇಷನ್ ಕಾಣಿಸುತ್ತಿದೆ. ಇವಿಷ್ಟು ವಿಚಾರ ಇಂದು ರಿಲೀಸ್ ಆದ ಪೋಸ್ಟರ್​ನಲ್ಲಿ ಹೈಲೈಟ್ ಆಗಿದೆ.

‘ಈ ಮೊದಲು ನಟಿಸಿದ ಸಿನಿಮಾಗಳಲ್ಲಿ ಆ್ಯಕ್ಷನ್ ಇತ್ತು. ಆದರೆ, ಸಂಪೂರ್ಣ​ ಆ್ಯಕ್ಷನ್ ಸಿನಿಮಾ ಮಾಡೋಕೆ ಸಾಧ್ಯವಾಗಿರಲಿಲ್ಲ. ಆಗ ಸಿಕ್ಕಿದ್ದು ‘ರಾನಿ’ ಸಿನಿಮಾ. ಬಾಡಿ ಟ್ರಾನ್ಸ್​ಫಾರ್ಮೇಷನ್ ಇಲ್ಲದೆ ಕೇವಲ ಆ್ಯಕ್ಷನ್ ಮಾಡಿದ್ರೆ ಹರ್ಷನ ಪಾತ್ರವೇ ಫೈಟ್ ಮಾಡಿದ ಹಾಗೆ ಪ್ರೇಕ್ಷಕರಿಗೆ ಅನಿಸಬಹುದು. ಈ ಕಾರಣಕ್ಕೆ ಟ್ರಾನ್ಸ್​​ಫಾರ್ಮೇಷನ್ ಬೇಕಿತ್ತು. ‘ರಾನಿ’ಗಾಗಿ ಆ ರೀತಿ ಬದಲಾಗಿದ್ದೇನೆ’ ಎನ್ನುತ್ತಾರೆ ಕಿರಣ್ ರಾಜ್.

‘ರಾನಿ ಪಾತ್ರಕ್ಕೆ ರಫ್ ಲುಕ್ ಇದೆ. ಇದೊಂದು ಪಕ್ಕಾ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾ. ಚಿತ್ರದ ಕಥೆ ಕೂಡ ಸ್ಟ್ರಾಂಗ್ ಆಗಿದೆ. ಸಾಮಾನ್ಯ ವ್ಯಕ್ತಿಯ ವೈಲೆಂಟ್ ಆಗೋದರ ಜರ್ನಿ ಈ ಸಿನಿಮಾದಲ್ಲಿದೆ. ಚಿತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದೀನಿ’ ಎನ್ನುತ್ತಾರೆ ಕಿರಣ್ ರಾಜ್​.

ಪ್ರತಿ ಪಾತ್ರಕ್ಕಾಗಿ ಮಾನಸಿಕವಾಗಿಯೂ ಸಿದ್ಧಗೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಶೇ.100 ಶ್ರಮ ಹಾಕೋಕೆ ಸಾಧ್ಯವಿಲ್ಲ. ಕಿರಣ್ ರಾಜ್ ಹೇಳುವುದೂ ಇದನ್ನೇ. ‘ಪಾತ್ರಕ್ಕಾಗಿ ಮಾನಸಿಕವಾಗಿ ಬದಲಾಗೋದು ತುಂಬಾನೇ ಮುಖ್ಯವಾಗುತ್ತದೆ. ಒಂದು ಪಾತ್ರವನ್ನು ಆವರಿಸಿಕೊಂಡರೆ ಉಳಿದವರೆಲ್ಲ ಸ್ಟ್ರೇಂಜ್ ಆಗಿ ಕಾಣಿಸುತ್ತಾರೆ. ಸಾಮಾನ್ಯವಾಗಿ ಪ್ಯಾಕಪ್​ ಎಂದಾಗ ನಾನು ನಾರ್ಮಲ್ ವ್ಯಕ್ತಿ ಆಗ್ತೀನಿ. ಆದರೆ, ಪಾತ್ರ ನಮ್ಮಮೇಲೆ ಒಂದಷ್ಟು ಪ್ರಭಾವ ಬೀರಿರುತ್ತದೆ. ಮುಂಜಾನೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ನನ್ನ ಭೇಟಿ ಮಾಡಿದ್ರೆ ಆಗ ನಾನು ರಾನಿ ಆಗಿರ್ತೀನಿ, ಅಲ್ಲಿ ಹುಡುಕಿದ್ರೂ ಕಿರಣ್ ರಾಜ್ ಸಿಗಲ್ಲ. ಕಿರಣ್ ರಾಜ್​ನ ಭೇಟಿ ಆಗಬೇಕು ಎಂದರೆ ಸಂಜೆ ಆರು ಗಂಟೆ ನಂತ್ರ ಬರಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: Kiran Raj: ‘ಕನ್ನಡತಿ’ ಧಾರಾವಾಹಿ ಬಳಿಕ ಮುಂದೇನು? ತಮ್ಮ ನಿರ್ಧಾರ ತಿಳಿಸಿದ ಕಿರಣ್ ರಾಜ್​

ಈ ಮೊದಲು ‘ಬಡ್ಡೀಸ್’ ಚಿತ್ರದಲ್ಲಿ ಕಿರಣ್ ರಾಜ್ ನಟಿಸಿದ್ದರು. ಈ ಸಿನಿಮಾ ನಿರ್ದೇಶನ ಮಾಡಿದ್ದು ಗುರುತೇಜ್ ಶೆಟ್ಟಿ. ಈಗ ‘ರಾನಿ’ ಚಿತ್ರಕ್ಕಾಗಿ ಕಿರಣ್ ರಾಜ್ ಹಾಗೂ ಗುರುತೇಜ್ ಮತ್ತೆ ಒಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:32 pm, Wed, 22 March 23

ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ