Kiran Raj: ‘ಕನ್ನಡತಿ’ ಧಾರಾವಾಹಿ ಬಳಿಕ ಮುಂದೇನು? ತಮ್ಮ ನಿರ್ಧಾರ ತಿಳಿಸಿದ ಕಿರಣ್ ರಾಜ್​

ಧಾರಾವಾಹಿಯಲ್ಲಿ ಯಶಸ್ಸು ಪಡೆದ ನಂತರ ಅಲ್ಲಿಯೇ ಮುಂದುವರಿಯಬೇಕು ಎಂಬ ನಿಯಮವೇನು ಇಲ್ಲ. ಚಿತ್ರರಂಗದಲ್ಲಿ ಹಲವು ಭಿನ್ನ ಪಾತ್ರಗಳನ್ನು ಜೀವಿಸಲು ಅವಕಾಶ ಸಿಗುತ್ತದೆ. ಕಿರಣ್ ರಾಜ್​ ಕೂಡ ಈಗ ಇದನ್ನೇ ಮಾಡಲು ಹೊರಟಿದ್ದಾರೆ.

Kiran Raj: ‘ಕನ್ನಡತಿ’ ಧಾರಾವಾಹಿ ಬಳಿಕ ಮುಂದೇನು? ತಮ್ಮ ನಿರ್ಧಾರ ತಿಳಿಸಿದ ಕಿರಣ್ ರಾಜ್​
ಕಿರಣ್ ರಾಜ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 05, 2023 | 1:19 PM

ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ಕಿರಣ್ ರಾಜ್ ‘ಕನ್ನಡತಿ’ ಸೀರಿಯಲ್ ಮೂಲಕ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದರು. ಅವರು ಚಿತ್ರರಂಗದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ‘ಬಡ್ಡೀಸ್​’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಕನ್ನಡತಿ’ (Kannadathi Serial) ಧಾರಾವಾಹಿಯಲ್ಲಿ ಹರ್ಷ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ‘ಕನ್ನಡತಿ’ ಮುಗಿದ ಬಳಿಕ ಕಿರಣ್ ರಾಜ್​ (Kiran Raj) ಮುಂದಿನ ಪ್ಲ್ಯಾನ್ ಏನು ಎಂಬ ಪ್ರಶ್ನೆ ಅನೇಕರನ್ನು ಕಾಡಿತ್ತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಅವರು ಇನ್ಮುಂದೆ ಸಂಪೂರ್ಣವಾಗಿ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಲಿದ್ದಾರೆ.

ಧಾರಾವಾಹಿಯಲ್ಲಿ ಯಶಸ್ಸು ಪಡೆದ ನಂತರ ಅಲ್ಲಿಯೇ ಮುಂದುವರಿಯಬೇಕು ಎಂಬ ನಿಯಮವೇನು ಇಲ್ಲ. ಚಿತ್ರರಂಗದಲ್ಲಿ ಹಲವು ಭಿನ್ನ ಪಾತ್ರಗಳನ್ನು ಜೀವಿಸಲು ಅವಕಾಶ ಸಿಗುತ್ತದೆ. ಕಿರಣ್ ರಾಜ್​ ಕೂಡ ಈಗ ಇದನ್ನೇ ಮಾಡಲು ಹೊರಟಿದ್ದಾರೆ. ಆ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಧಾರಾವಾಹಿಗಳಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಕಥೆಗಳು ಮಾತ್ರ ಇರುತ್ತವೆ. ನಟನಾಗಿ ನಾನು ಬೇರೆಬೇರೆ ಪಾತ್ರಗಳನ್ನು ಮಾಡಬೇಕು. ಹೀಗಾಗಿ, ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಲು ನಿರ್ಧರಿಸಿದ್ದೇನೆ. ಅಭಿಮಾನಿಗಳ ಜತೆ ಒಂದು ಬಾಂಡಿಂಗ್ ಬೆಳೆದಿದೆ. ಅವರು ನನ್ನ ಮೇಲೆ ಸಾಕಷ್ಟು ಅಭಿಮಾನ ಇಟ್ಟಿದ್ದಾರೆ. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂಬುದು ನನ್ನ ಉದ್ದೇಶ’ ಎಂದಿದ್ದಾರೆ ಕಿರಣ್ ರಾಜ್. ಈ ಮೂಲಕ ಚಿತ್ರರಂಗದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ನಿರ್ಧಾರಕ್ಕೆ ಅವರು ಬಂದಿದ್ದಾರೆ.

ಇದನ್ನೂ ಓದಿ
Image
ಸರ್ಕಾರಿ ಶಾಲೆಗೆ ‘ಕನ್ನಡತಿ’ ಸೀರಿಯಲ್​ ನಟ ಕಿರಣ್​ ರಾಜ್​ ನೆರವಿನ ಹಸ್ತದಿಂದ ಬಂತು ಹೊಸ ಮೆರುಗು
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
Image
‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

ಇದನ್ನೂ ಓದಿ: Kiran Raj: ‘ಕನ್ನಡತಿ’ ಸೀರಿಯಲ್​ ನಟ ಕಿರಣ್​ ರಾಜ್​ ಈಗ ‘ಶೇರ್​’; ಸೆಟ್ಟೇರಿತು ಹೊಸ ಸಿನಿಮಾ

ಕಿರುತೆರೆಯಲ್ಲಿ ಖ್ಯಾತಿ ಪಡೆದು ಚಿತ್ರರಂಗಕ್ಕೆ ಕಾಲಿಡುತ್ತೇನೆ ಎಂದಾಗ ಒಂದಷ್ಟು ಆಫರ್​ಗಳು ಬರುತ್ತವೆ. ಕಿರಣ್ ರಾಜ್​ಗೂ ಹಾಗೆಯೇ ಆಗಿತ್ತು. ಹಲವು ಆಫರ್​ಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಈ ಪೈಕಿ ಅನೇಕ ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಆದರೆ, ಈಗ ತಮಗೆ ಹೊಂದುವಂತಹ, ಉತ್ತಮ ಕಥೆಯ ಸಿನಿಮಾಗಳಲ್ಲಿ ಮಾತ್ರ ನಟಿಸಲು ಅವರು ನಿರ್ಧರಿಸಿದ್ದಾರೆ. ‘ಲಾಕ್​ಡೌನ್ ಟೈಮ್​ನಲ್ಲಿ ಹಲವು ಸಿನಿಮಾಗಳು ಬಂದಿದ್ದವು. ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದೆ. ನನಗೆ ಹೊಂದದೇ ಇರುವ ಸಿನಿಮಾಗಳ ಅಡ್ವಾನ್ಸ್​ನ ಹಿಂದಿರುಗಿಸಿದ್ದೇನೆ. ಸಿನಿಮಾದ ಭಾಗವಾಗಿದ್ರೆ ಸಾಕು ಎಂದು ಈ ಮೊದಲು ಅಂದುಕೊಳ್ಳುತ್ತಿದ್ದೆ. ಆದರೆ, ಈಗ ಒಳ್ಳೆಯ ಸಿನಿಮಾಗಳನ್ನು ಮಾತ್ರ ಮಾಡಬೇಕು ಎಂದುಕೊಂಡಿದ್ದೇನೆ. ಹೀಗಾಗಿ, ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗುತ್ತಿದ್ದೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಭಿನ್ನ ರೀತಿಯಲ್ಲಿ ಕಿರಣ್ ರಾಜ್ ಸಹಾಯ; ನಟನಿಗೆ ಹರಿದುಬಂತು ಧನ್ಯವಾದಗಳ ಮಹಾಪೂರ

‘ಕನ್ನಡತಿ’ ಧಾರಾವಾಹಿ ಪೂರ್ಣಗೊಳ್ಳುತ್ತಿದೆ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಕಿರಣ್ ರಾಜ್​ ಅವರಿಗೂ ಈ ವಿಚಾರದಲ್ಲಿ ಬೇಸರ ಇದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಒಂದು ಧಾರಾವಾಹಿ ಮುಗಿಯುತ್ತಿದೆ ಎಂದರೆ ಕಲಾವಿದರು ಹಾಗೂ ವೀಕ್ಷಕರು ಇಬ್ಬರಿಗೂ ಬೇಸರ ಆಗುತ್ತದೆ. ನಾನು ಹರ್ಷನಾಗಿ ಕಾಣಿಸಿಕೊಂಡಿದ್ದೇನೆ. ಇನ್ನು ನನ್ನ ಜೀವನದಲ್ಲಿ ಹರ್ಷ ಆಗಿ ಜೀವಿಸಲು ಎಂದಿಗೂ ಸಾಧ್ಯವಿಲ್ಲ’ ಎಂಬುದು ಕಿರಣ್ ರಾಜ್ ಮಾತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ