Updated on: Mar 31, 2023 | 12:58 PM
ನಟಿ ರಂಜನಿ ರಾಘವನ್ ನಟನೆಯ ‘ಕನ್ನಡತಿ’ ಧಾರಾವಾಹಿ ಕೆಲ ತಿಂಗಳ ಹಿಂದೆ ಪೂರ್ಣಗೊಂಡಿತು. ಅವರು ಕಿರುತೆರೆಯಿಂದ ಬ್ರೇಕ್ ಪಡೆದು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗುವುದಾಗಿ ಟಿವಿ9 ಕನ್ನಡ ಡಿಜಿಟಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ನಟನೆಯಿಂದ ಬ್ರೇಕ್ ಪಡೆದಿರುವ ಅವರು ಪೋರ್ಚುಗಲ್ಗೆ ತೆರಳಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿರೋ ರಂಜನಿ ಅವರು, ‘ಪೋರ್ಚುಗೀಸರ ನಾಡಿಗೆ ನಾವು ಲಗ್ಗೆ ಇಟ್ಟಿದ್ದೇವೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಈ ಫೋಟೋಗೆ ಅನೇಕರು ಫನ್ನಿ ಆಗಿ ಕಮೆಂಟ್ ಮಾಡಿದ್ದಾರೆ. ‘ಪೋರ್ಚುಗೀಸ್ ಕಡೆಯವರನ್ನು ಬಗ್ಗು ಬಡಿಯಲು ನಮ್ಮ ಸಹಕಾರ ನಿಮಗೆ ಇದ್ದೆ ಇರುತ್ತದೆ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.
ಮಾರ್ಚ್ 29ರಂದು ರಂಜನಿ ರಾಘವನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್ಡೇ ಆಚರಣೆಗೆ ಅವರು ಪೋರ್ಚುಗಲ್ಗೆ ತೆರಳಿದ್ದಾರೆ.