AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch Video: 194 ಪ್ರಯಾಣಿಕರಿದ್ದ ವಿಮಾನ ಆಗಸದಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಬಾಗಿಲು ತೆರೆದುಕೊಂಡಿತು! ಮುಂದೇನಾಯಿತು?

ವಿಮಾನದಲ್ಲಿದ್ದ ಪ್ರಯಾಣಿಕರು ಬಾಗಿಲು ತೆರೆಯದಂತೆ ತಡೆಯಲು ಯತ್ನಿಸಿದರು. ಆದಾಗ್ಯೂ, ಆ ಪ್ರಯಾಣಿಕನೊಬ್ಬ ಬಾಗಿಲು ತೆರೆದುಬಿಟ್ಟರು.

Watch Video: 194 ಪ್ರಯಾಣಿಕರಿದ್ದ ವಿಮಾನ ಆಗಸದಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಬಾಗಿಲು ತೆರೆದುಕೊಂಡಿತು! ಮುಂದೇನಾಯಿತು?
ವಿಮಾನ ಆಗಸದಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಬಾಗಿಲು ತೆರೆದುಕೊಂಡಿತು!
ಸಾಧು ಶ್ರೀನಾಥ್​
|

Updated on: May 26, 2023 | 3:50 PM

Share

ಪ್ರಯಾಣಿಕರ ವಿಮಾನಗಳಲ್ಲಿ ಇತ್ತೀಚೆಗೆ ಒಂದಲ್ಲ ಒಂದು ಅಚಾತುರ್ಯಗಳು, ಅವಾಂತರಗಳು, ಅವಘಡಗಳು ನಡೆಯುತ್ತಲೇ ಇರುತ್ತವೆ. ದಕ್ಷಿಣ ಕೊರಿಯಾದಲ್ಲಿ ಪ್ರಯಾಣಿಕರ ವಿಮಾನವೊಂದು ಆಗದಲ್ಲಿ ಹಾರುತ್ತಿರುವಾಗ ಬಾಗಿಲು ತೆರೆದು ಸಂಚಲನ ಮೂಡಿಸಿದೆ! ಇದ ಕಂಡು ಪ್ರಯಾಣಿಕರು ಗಾಬರಿಗೆ ಬಿದ್ದರು. ವಿವರಗಳಿಗೆ ಹೋಗುವುದಾದರೆ ಏಷ್ಯಾನಾ ಏರ್‌ಲೈನ್ಸ್ ಏರ್‌ಬಸ್ A321 ವಿಮಾನವು (Asiana Airlines Airbus A321 aircraft) ದಕ್ಷಿಣ ಕೊರಿಯಾದ (South Korea) ಡೇಗುವಿನಿಂದ ಜೆಜು ದ್ವೀಪಕ್ಕೆ (Daegu International Airport in Daegu) ಹೋಗಬೇಕಿತ್ತು. ಆ ವಿಮಾನದಲ್ಲಿ ಸುಮಾರು 194 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ ವಿಮಾನವು ಡೇಗುವಿನಿಂದ ಜೆಜು ತಲುಪಲು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಈ ಮಧ್ಯೆ ಅದು ಆಗಸದಲ್ಲಿ ಸಾಗುತ್ತಿದ್ದಾಗ ವ್ಯಕ್ತಿಯೊಬ್ಬರು ಏಕಾಏಕಿ ತುರ್ತು ನಿರ್ಗಮನದ ಬಾಗಿಲನ್ನು ತೆರೆದು ಇಟ್ಟಿದ್ದಾರೆ. ಅದು ಈಗ ಖುಲ್ಲಂಖುಲ್ಲಾ ಚರ್ಚೆಗೆ ಗ್ರಾಸವಾಗಿದೆ.

ವಿಮಾನದಲ್ಲಿದ್ದ ಪ್ರಯಾಣಿಕರು ಬಾಗಿಲು ತೆರೆಯದಂತೆ ತಡೆಯಲು ಯತ್ನಿಸಿದರು. ಆದಾಗ್ಯೂ, ಆ ಪ್ರಯಾಣಿಕನೊಬ್ಬ ಬಾಗಿಲು ತೆರೆದುಬಿಟ್ಟರು. ಇದರಿಂದ ವಿಮಾನದೊಳಕ್ಕೆ ಬಲವಾದ ಗಾಳಿ ಬೀಸಿದ್ದು, ಪ್ರಯಾಣಿಕರು ಭಯಭೀತರಾಗಿದ್ದಾರೆ. ಆದರೆ ಯಾರಿಗೂ ಗಾಯವಾಗಿಲ್ಲ. ಏನೂ ಅನಾಹುತವಾಗಿಲ್ಲ.

ಕೊನೆಗೆ ವಿಮಾನ ಸೇಫ್​ ಆಗಿ ಲ್ಯಾಂಡ್ ಆದ ಬಳಿಕ ಬಾಗಿಲು ತೆರೆದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಅದನ್ನು ಏಕೆ ತೆರೆದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ