Viral: ನಿದ್ರೆ ನಿಮ್ಮ ವೈಯಕ್ತಿಕ, ಆದರೆ ಸ್ವಲ್ಪ ಮೋಜಿಗಾಗಿ ಇದನ್ನು ಓದಬಹುದಲ್ಲ…

Sleeping : ನೀವು ಹೇಗೆ ಮಲಗುತ್ತೀರಿ? ಅಂದರೆ ಯಾವ ರೀತಿಯ ಉಡುಪು ಹಾಕಿಕೊಂಡು ಮಲಗುತ್ತೀರಿ? ಎಂಬೊಂದು ಪ್ರಶ್ನೆಯುಳ್ಳ ಈ Infographic ಟ್ವಿಟರ್​ನಲ್ಲಿ ವೈರಲ್ ಆಗಿದೆ. ಇಲ್ಲಿ ಒಂದರಿಂದ ಇಪ್ಪತ್ತರ ತನಕ ಆಯ್ಕೆಗಳಿವೆ. ನಿಮ್ಮ ಆಯ್ಕೆ?

Viral: ನಿದ್ರೆ ನಿಮ್ಮ ವೈಯಕ್ತಿಕ, ಆದರೆ ಸ್ವಲ್ಪ ಮೋಜಿಗಾಗಿ ಇದನ್ನು ಓದಬಹುದಲ್ಲ...
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 26, 2023 | 4:29 PM

Viral : ಆಧುನಿಕ ಜೀವನಶೈಲಿ, ಸತತ ಕೆಲಸದ ಒತ್ತಡಗಳು, ನಟ್ಟಿರುಳಿನಲ್ಲಿ ಕಣ್ಣುಕುಕ್ಕುವ ಸ್ಮಾರ್ಟ್‌ಫೋನ್‌ಗಳು ನಮ್ಮೆಲ್ಲರ ನಿದ್ದೆಯನ್ನು ಕಂಗೆಡಿಸಿವೆ. ಇದರ ಜೊತೆಗೇ ಈ ಸೆಕೆಗಾಲದಲ್ಲಿ ಇನ್ನೇನು ಕಿತ್ತುಕೊಂಡೇ ಬೀಳುತ್ತದೇನೋ ಎಂಬಷ್ಟು ಗರಗರನೇ ಸುತ್ತುತ್ತಿರುವ ಫ್ಯಾನಿನಡಿ ಕೈಕಾಲು ಅಗಲಿಸಿ ಬಿದ್ದುಕೊಂಡರೂ ನಿದ್ದೆ ಹತ್ತದೇ ಹೊರಳಾಡುವವರಂತೂ ಸಾಕಷ್ಟಿದ್ದಾರೆ. ನಡುರಾತ್ರಿಯಲ್ಲಿ ಫಕ್ಕನೇ ಎಚ್ಚರಾದಾಗ ಮೈಯೆಲ್ಲ ಬೆವತು ಬಾಯಿ ಒಣಗಿ ಗಾಬರಿಯಾಗುತ್ತದೆ. ಮೈಮೇಲಿನ ಹೊದಿಕೆ ಅಷ್ಟೇ ಏಕೆ ಬಟ್ಟೆಗಳನ್ನೇ ಕಿತ್ತೆಸೆಯಬೇಕೆನ್ನಿಸುತ್ತದೆ. ಇದೆಲ್ಲ ಪ್ರವರ ಏಕೆಂದರೆ, ನೀವು ಹೇಗೆ ಮಲಗುತ್ತೀರಿ? ಅರ್ಥಾತ್ ಯಾವ ರೀತಿಯ ಉಡುಪು ಹಾಕಿಕೊಂಡು ಮಲಗುತ್ತೀರಿ? ಎಂಬೊಂದು ಪ್ರಶ್ನೆಯುಳ್ಳ ಈ Infographic ಟ್ವಿಟರ್​​ನಲ್ಲಿ ವೈರಲ್ ಆಗಿದೆ.

ನೀವು ಹೇಗೆ ಮಲಗುತ್ತೀರಿ? ಅರ್ಥಾತ್ ಯಾವ ರೀತಿಯ ಉಡುಪು ಹಾಕಿಕೊಂಡು ಮಲಗುತ್ತೀರಿ? ಎಂಬೊಂದು ಪ್ರಶ್ನೆಯುಳ್ಳ ಈ infographic ಟ್ವಿಟರ್​ನಲ್ಲಿ ವೈರಲ್ ಆಗಿದೆ. ಇಲ್ಲಿ ಒಂದರಿಂದ ಇಪ್ಪತ್ತರ ತನಕ ಆಯ್ಕೆಗಳಿವೆ. ಆಯ್ಕೆ ಒಂದು ಎಂದರೆ ಮೇಲೆ ಅಂಗಿ ಕೆಳಗೆ ಫುಲ್ ಪ್ಯಾಂಟ್, ಆಯ್ಕೆ ಇಪ್ಪತ್ತು ಎಂದರೆ ಪೂರ್ತಿ ಬೆತ್ತಲೆ. ಇವೆರಡರ ನಡುವೆ ತರಹೇವಾರಿ ಆಯ್ಕೆಗಳಿವೆ.

ಇದನ್ನೂ ಓದಿ : Viral:’ಸರಳ’; ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!

ಹಲವರು, ‘ಆಯ್ಕೆ 20’, ಎಂದಿದ್ದಾರೆ. ಒಬ್ಬರು ‘ಆಯ್ಕೆ 20, ಆದರೆ ಕೂಡಲೇ ಧರಿಸಿಕೊಳ್ಳಲು ಹತ್ತಿರವೇ ಬಟ್ಟೆ ಇಟ್ಟುಕೊಂಡಿರುತ್ತೇನೆ,’ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ‘5 ಅಥವಾ 15 (ಮೇಲೆ ಬಟ್ಟೆ, ಕೆಳಗೆ ಖಾಲಿ) ಆಯ್ದುಕೊಳ್ಳುವವರು ಆಸಕ್ತಿಕರ ವ್ಯಕ್ತಿಗಳು.’ ಎಂದು ಒಬ್ಬರು ಕುತೂಹಲ ತೋರಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಿದ್ದೆಯ ಹಲವು ಭಂಗಿಗಳ ಮೋಜಿನ ಮೀಮ್‌ಗಳನ್ನು ನೆಟ್ಟಿಗರು ಕಳಿಸಿದ್ದಾರೆ.

ಇದನ್ನೂ ಓದಿ : Viral Video:’ಸೆರಗನ್ನು ಮೇಲೇರಿಸಿಕೊಳ್ಳಿ!’; ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ನಿದ್ದೆ ವೈಯಕ್ತಿಕ. ನಿದ್ದೆಯ ಶೈಲಿಯೂ ನಿಮ್ಮದೇ. ನಿಮ್ಮ ನಿದ್ದೆಯ ಸಮಸ್ಯೆಗಳೇನಾದರೂ ಇದ್ದರೆ ಅವೂ ನಿಮ್ಮವೇ. ಆದರೆ ಅದನ್ನು ಮೇಲೆ ಮೋಜಿನಿಂದ ನೋಡುವ ಒಂದು ಪ್ರಯತ್ನವಿದೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:27 pm, Fri, 26 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ