Amul Lassi: ಅಮುಲ್ ಲಸ್ಸಿ ಪ್ಯಾಕೆಟ್‌ಗಳಲ್ಲಿ ಫಂಗಸ್..!? ವೈರಲ್ ವಿಡಿಯೋಗೆ ಅಮುಲ್ ಕಂಪನಿ ಪ್ರತಿಕ್ರಿಯೆ ಏನು?
ಅಮುಲ್ ಲಸ್ಸಿಗೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಂಡ ಗ್ರಾಹಕರು, ಅಮುಲ್ ಲಸ್ಸಿ ಪ್ಯಾಕೆಟ್‌ಗಳು ಮುಕ್ತಾಯ ದಿನಾಂಕಕ್ಕಿಂತ ಮೊದಲು ಶಿಲೀಂಧ್ರದಿಂದ ಸೋಂಕಿಗೆ ಒಳಗಾಗಿದ್ದವು ಮತ್ತು ಗುಣಮಟ್ಟದ ಕೊರತೆಯಿದೆ ಎಂದು ಹೇಳಿಕೊಂಡಿದ್ದರು.
ಜನಪ್ರಿಯ ಡೈರಿ ಕಂಪನಿ ಅಮುಲ್ (Amul Company) ಕರ್ನಾಟಕಕ್ಕೆ ಎಂಟ್ರಿ ಕೊಡುತ್ತೆ ಎಂಬ ಸುದ್ದಿ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಆದರೆ ಆ ಯೋಜನೆ ಸದ್ಯಕ್ಕೆಮ ಕೋಲ್ಡ್ ಸ್ಟಫರೇಜ್ ಸೇರಿದೆ. ಈ ಮಧ್ಯೆ, ಅಮುಲ್ ಕಂಪನಿ ಮತ್ತೆ ಸುದ್ದಿಗೆ ಬಂದಿದೆ. ಅಮುಲ್ ಲಸ್ಸಿ ಪ್ಯಾಕ್‌ನಲ್ಲಿ ಬೂಜು ಕಟ್ಟಿದೆ, ಶಿಲೀಂಧ್ರವಿದೆ (fungus) ಎಂದು ಆರೋಪಿಸಿ ವೀಡಿಯೊವೊಂದು ವೈರಲ್ ಆಗಿದೆ. ಆದರೆ ಅದಕ್ಕೆ ಉತ್ತರವಾಗಿ ಅಮುಲ್ ಕಂಪನಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ವಿವರಣೆ ನೀಡಿದೆ. ಅಮುಲ್ ಕಂಪನಿಯು ತನ್ನ ಟ್ವೀಟ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊ ನಕಲಿಯಾಗಿದೆ ಮತ್ತು ಇದು ಗ್ರಾಹಕರಲ್ಲಿ ತಪ್ಪು ಮಾಹಿತಿಯನ್ನು ಹರಡುವ ಕೃತ್ಯವಾಗಿದೆ ಎಂದು ಹೇಳಿದೆ. ವೀಡಿಯೋದಲ್ಲಿರುವ ಲಸ್ಸಿ ಪ್ಯಾಕ್‌ಗಳು ಒಣಹುಲ್ಲಿನ ಹೊದಿಕೆಯನ್ನು ಹೊಂದಿದ್ದು, ಅದು ಹಾನಿಗೊಳಗಾಗಿದೆ (contamination) ಎಂದು ಹೇಳಿದೆ. ಇದರಿಂದಾಗಿ ಶಿಲೀಂಧ್ರವು ಒಳಗೆ ರೂಪುಗೊಂಡಿದೆ. ಮತ್ತು ವೀಡಿಯೊವನ್ನು ರಚಿಸಿದ ಜನರಿಗೆ ಇದು ಚೆನ್ನಾಗಿ ತಿಳಿದಿದೆ. ಅದಕ್ಕೆ ಈ ವಿಡಿಯೋವೇ ನೇರ ಸಾಕ್ಷಿಯಾಗಿದೆ ಎಂದೂ ಕಂಪನಿ ಹೇಳಿದೆ.
ಇನ್ನು ವೈರಲ್ ಆಗುತ್ತಿರುವ ವಿಡಿಯೋವನ್ನು ಫಾರ್ವರ್ಡ್ ಮಾಡಿ.. ‘ಅಮುಲ್ ಲಸ್ಸಿ ಗುಣಮಟ್ಟ ಕಡಿಮೆಯಾಗಿದೆ’ ಎಂಬ ನಕಲಿ ಸಂದೇಶ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯು ಕಂಪನಿಯ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿಲ್ಲ, ಎಲ್ಲಿ ನಡೆದಿದೆ ಎಂಬುದನ್ನು ಸೂಚಿಸಲು ಸ್ಥಳವನ್ನು ಬಹಿರಂಗಪಡಿಸಿಲ್ಲ.’ ಇದರ ಸಂಬಂಧ ಯಾವುದೇ ಸ್ಪಷ್ಟೀಕರಣ ಅಥವಾ ಪ್ರಶ್ನೆಗಳಿಗಾಗಿ ಗ್ರಾಹಕರು ತಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಕೇಳಲಾಗಿದೆ. ಇಂತಹ ನಕಲಿ ವೀಡಿಯೋಗಳು ಚಾಲ್ತಿಯಲ್ಲಿದ್ದು, ಅದನ್ನು ನಂಬಬೇಡಿ ಎಂದು ಮನವಿ ಮಾಡಿದೆ.
Issued in Public Interest by #Amul #AmulLassi pic.twitter.com/SyZKvrBYDr
— Amul.coop (@Amul_Coop) May 25, 2023
ಏತನ್ಮಧ್ಯೆ, ಅಮುಲ್ ಲಸ್ಸಿಗೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಂಡ ಗ್ರಾಹಕರು, ಅಮುಲ್ ಲಸ್ಸಿ ಪ್ಯಾಕೆಟ್‌ಗಳು ಮುಕ್ತಾಯ ದಿನಾಂಕಕ್ಕಿಂತ ಮೊದಲು ಶಿಲೀಂಧ್ರದಿಂದ ಸೋಂಕಿಗೆ ಒಳಗಾಗಿದ್ದವು ಮತ್ತು ಗುಣಮಟ್ಟದ ಕೊರತೆಯಿದೆ ಎಂದು ಹೇಳಿಕೊಂಡಿದ್ದರು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ