Viral: ‘ಹಿಟ್ಲರನಿಗೆ ಜಯವಾಗಲಿ!’ ಎಂದು ಕೆಲಸಗೇಡಿ ಕೆಲಸ ಕಳೆದುಕೊಂಡ ಕತೆ

Adolf Hitler : ಡೆಲಾಯಿಟ್ ಸಂಸ್ಥೆಯ ಉದ್ಯೋಗಿ ನೀರಭ್ ಮೆಹೆರೋತ್ರಾ ಹಿಟ್ಲರನ ಬಗೆಗಿನ ಪುಸ್ತಕ ಓದಿ ಕಂಡುಕೊಂಡ 'ನೀತಿ' ಇದು! 'ಶುಕ್ರವಾರದ ಸ್ಫೂರ್ತಿ' ಎಂದು ತನ್ನ ಪೋಸ್ಟ್‌ನಲ್ಲಿ ಹಿಟ್ಲರ್​ನ ಸದ್ಗುಣಗಳ ಪಟ್ಟಿಯನ್ನೇ ಕೊಟ್ಟಿದ್ದಾನೆ.

Viral: 'ಹಿಟ್ಲರನಿಗೆ ಜಯವಾಗಲಿ!' ಎಂದು ಕೆಲಸಗೇಡಿ ಕೆಲಸ ಕಳೆದುಕೊಂಡ ಕತೆ
(courtesy : Flickr/Recuerdos de Pandora)
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 26, 2023 | 5:23 PM

LinkedIn: ಸಾಮಾಜಿಕ ಜಾಲತಾಣಗಳಲ್ಲಿ (Social Media) ಅಳತೆಮೀರಿದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು, ವಿವೇಕರಹಿತವಾದ ವಾದಗಳನ್ನು ಮಂಡಿಸುವವರಿಗೆ ಬರವಿಲ್ಲ. ಅವು ವಿಪರೀತ ನಿಲುವುಗಳನ್ನು ಹೊಂದಿದಂಥ ಎಲ್ಲ ಪಂಥಗಳ ನಂಬಿಕೆಗಳ ಮಂದಿಗೆ ಸುಭದ್ರ ವೇದಿಕೆಯಾಗಿಯೇ ಮಾರ್ಪಟ್ಟಿವೆ. ಟ್ವಿಟರ್, ಫೇಸ್‌ಬುಕ್‌ಗಳಿಗೆ ಮೀಸಲಾಗಿದ್ದ ಈ ನಡವಳಿಕೆಗಳು ಇತ್ತೀಚೆಗಿನ ದಿನಗಳಲ್ಲಿ ಉದ್ಯಮ ಹಾಗೂ ನೌಕರಿಗೆ ಸಂಬಂಧಪಟ್ಟ ಸಾಮಾಜಿಕ ತಾಣವಾದ ಲಿಂಕ್ಡ್​ಇನ್​ನಲ್ಲಿಯೂ ಸಾಮಾನ್ಯವಾಗಿ ಕಂಡುಬರುತ್ತಿವೆ.

ಜಗತ್ತಿನಲ್ಲೇ ಅತ್ಯಂತ ಹೇಯ ಜನಾಂಗೀಯವಾದಿ ಮತ್ತು ಹತ್ತಾರು ಲಕ್ಷ ಯಹೂದಿಗಳ ಕಗ್ಗೊಲೆಗೆ ನೇರವಾಗಿ ಕಾರಣನಾದ ಹಿಟ್ಲರನನ್ನು (Adolf Hitler) ವರ್ಚಸ್ವೀ ನಾಯಕ ಎಂದು ಕರೆದು ಕಳೆದ ವಾರ ‘ಸ್ಫೂರ್ತಿದಾಯಕ’ ಪೋಸ್ಟ್ ಬರೆದಿದ್ದ ಯುವಕನೊಬ್ಬ ನೌಕರಿ ಕಳೆದುಕೊಂಡಿದ್ದಾನೆ; ‘ಭೂಮಿಯ ಮೇಲಿನ ಪ್ರತಿಯೊಬ್ಬರಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳಿರುತ್ತವೆ. ಅವುಗಳಲ್ಲಿ ಯಾವ ಗುಣಗಳನ್ನು ಬಳಸಿಕೊಂಡು ನಮ್ಮನ್ನು ಹಾಗೂ ನಮ್ಮ ಸುತ್ತಲಿನವರನ್ನು ಪ್ರಭಾವಿಸುತ್ತೇವೆ ಎಂಬುದು ಸಂಪೂರ್ಣವಾಗಿ ನಮ್ಮ ಆಯ್ಕೆ. ನಾಝಿಗಳು ಹೇಳುತ್ತಿದ್ದಂತೆ, ‘ಹಿಟ್ಲರನಿಗೆ ಜಯವಾಗಲಿ!’

ಇದನ್ನೂ ಓದಿ : Viral Video:’ಸೆರಗನ್ನು ಮೇಲೇರಿಸಿಕೊಳ್ಳಿ!’; ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ಡೆಲಾಯಿಟ್ ಸಂಸ್ಥೆಯಲ್ಲಿ ಕೆಲಸ ಮಾಡುವ ನೀರಭ್ ಮೆಹೆರೋತ್ರಾ ಎನ್ನುವವನು ಹಿಟ್ಲರನ ಬಗೆಗಿನ ಪುಸ್ತಕವೊಂದನ್ನು ಓದಿ ಕಂಡುಕೊಂಡ ‘ನೀತಿ’ ಇದಂತೆ! ‘ಗೂಗಲ್‌ನಲ್ಲಿ ಹುಡುಕಿದರೆ ಅವನನ್ನು ಅಂಕುಶವಿಲ್ಲದ ಸರ್ವಾಧಿಕಾರಿ, ನಿರ್ದಯಿ, ಆಕ್ರಮಣಕಾರಿ ಎಂದೆಲ್ಲ ಕರೆದಿದ್ದಾರೆ ಹಾಗೂ ಮಂದಿ ಅವನನ್ನು ತಲೆಕೆಟ್ಟವನು ಎಂದೂ ನಂಬಿದ್ದಾರೆ. ಆದರೆ ಅವನಲ್ಲಿ ಅನೇಕ ಒಳ್ಳೆಯ ಗುಣಗಳಿದ್ದವು. ನಾವು ಅವನಿಂದ ಕಲಿಯುವುದು ಬಹಳಷ್ಟಿದೆ.’ ‘ಶುಕ್ರವಾರದ ಸ್ಫೂರ್ತಿ’ ಎಂಬ ಒಕ್ಕಣೆಯ ತನ್ನ ಪೋಸ್ಟ್‌ನಲ್ಲಿ ಹಿಟ್ಲರ್​ನ ಸದ್ಗುಣಗಳ ಪಟ್ಟಿಯನ್ನೇ ಕೊಟ್ಟಿದ್ದಾನೆ: ವರ್ಚಸ್ವೀ ದಾರ್ಶನಿಕ, ಸೂಜಿಗಲ್ಲಿನ ಸೆಳೆತದ ವಾಗ್ಮಿ, ಮಹಾ ಆತ್ಮವಿಶ್ವಾಸಿ, ಅಸಾಧಾರಣ ಬುದ್ಧಿಜೀವಿ, ಹಾಗೂ ಎಣೆಯಿಲ್ಲದ ಕ್ರಿಯಾಶೀಲ.

ಇದನ್ನೂ ಓದಿ : Viral: ‘ಸರಳ’ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!

ಇದನ್ನೋದಿದ ಬಹಳಷ್ಟು ಮಂದಿಗೆ ಸಹಜವಾಗಿ ಆಘಾತವಾಗಿದೆ. ಆದರೆ ಅವನು ಹೇಳಿದ್ದುದರಲ್ಲಿ ತಪ್ಪೇನೂ ಇಲ್ಲ ಎಂದವರೂ ಇದ್ದಾರೆ. ‘ಇದು ಸರಿಯೋ ತಪ್ಪೋ, ಹೋಗಿಹೋಗಿ ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಮಾಡುವುದೇ?’ ಎಂದಿದ್ದಾರೆ ಕೆಲವರು. ಈ ವ್ಯಕ್ತಿಯ ನಿಲುವಿನ ಬಗ್ಗೆ ನಿಮಗೇನೆನ್ನಿಸುತ್ತದೆ? ಅವನನ್ನು ಕೆಲಸದಿಂದ ತೆಗೆದುಹಾಕಿದ್ದು ಸರಿಯೇ? ನಿಮ್ಮ ಅಭಿಪ್ರಾಯ ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:17 pm, Fri, 26 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ