AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬ್ಯಾಲೆನ್ಸಡ್​ ಡಯೆಟ್ ಎಂದರೆ ಇದೇ ನೋಡಿ! ಇನ್ನು ನಿಶ್ಚಿಂತೆಯಿಂದಿದ್ದುಬಿಡಿ

Balanced Diet : ಆ ಡಯೆಟ್​ ಈ ಡಯೆಟ್ ಅಂತ ತಲೆಕೆಡಿಸಿಕೊಂಡು ಸೋತುಸುಣ್ಣವಾಗಿದ್ದೀರೆ? ಬದುಕಿನಲ್ಲಿ ಭರವಸೆ ಇರಲಿ, ಒಂದಿಲ್ಲಾ ಒಂದು ದಿನ ಇಂಥ ಪುಣ್ಯಾತ್ಮರಿಂದ ಡಯೆಟ್​ ದೀಕ್ಷೆ ಪಡೆಯುವ ಭಾಗ್ಯ ಖಂಡಿತ ಒದಗುತ್ತದೆ! ವಿಡಿಯೋ ನೋಡಿ.

Viral Video: ಬ್ಯಾಲೆನ್ಸಡ್​ ಡಯೆಟ್ ಎಂದರೆ ಇದೇ ನೋಡಿ! ಇನ್ನು ನಿಶ್ಚಿಂತೆಯಿಂದಿದ್ದುಬಿಡಿ
ಹೇಗಿದೆ ಈ ಬ್ಯಾಲೆನ್ಸ್​ಡ್​ ಡಯೆಟ್?
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 27, 2023 | 10:41 AM

Food and Drink: ಬದುಕಿನಲ್ಲಿ ಎಲ್ಲವನ್ನೂ ಸಮತೋಲನದಿಂದ ನಿಭಾಯಿಸುವ ಛಾತಿ ಹೊಂದಿದವ ಉತ್ತಮ ನಾಗರಿಕನಾಗಬಲ್ಲ. ಅದಕ್ಕಾಗಿ ಒಂದಿಷ್ಟು ಆದರ್ಶಗಳನ್ನು ರೂಢಿಸಿಕೊಂಡಿರಬೇಕು. ಮನೆಯ ಒಳಗೂ ಹೊರಗೂ ಸಮದೂಗಿಸಿಕೊಂಡು ಹೋಗುವ ಶಕ್ತಿ ಪಡೆದುಕೊಂಡಿರಬೇಕು. ನಾಲ್ಕು ಜನರ ಮಧ್ಯೆ ಎದ್ದು ಕಾಣುವಂತಿರಬೇಕು. ಏನೇ ಬಂದರೂ ಸಾವರಿಸಿಕೊಂಡು ಹೋಗುವ ಆತ್ಮಬಲ ಇರಬೇಕು. ಅಂದಾಗಲೇ ಪರಿಪೂರ್ಣ ವ್ಯಕ್ತಿ ಎನ್ನಿಸಿಕೊಳ್ಳುವುದು. ಅದಕ್ಕಾಗಿ ಅನ್ನಾಹಾರನಿದ್ರಾದಿಗಳ ವಿಷಯವಾಗಿ ಕಟ್ಟುನಿಟ್ಟಾಗಿರಬೇಕು. ಏಕೆಂದರೆ ಕಾಯವೇ ಕಾಯವನ್ನು ಕಾಯುವುದು. ಹಾಗಾಗಿ ಬ್ಯಾಲೆನ್ಸ್ ಡಯೆಟ್ ಅನ್ನೋದು ಬಹಳ ಮುಖ್ಯ. ಬಗೆಬಗೆಯ ಡಯೆಟ್​ಗಳ ಪೈಕಿ ಇದೂ ಒಂದು ಟ್ರೆಂಡಿಂಗ್​ನಲ್ಲಿದೆ, ನೋಡಿ ವಿಡಿಯೋ.

ವೀಕೆಂಡ್ ಮೂಡ್​ನಲ್ಲಿರುವ ನಿಮಗೆ ಈ ವಿಡಿಯೋ ಅತ್ಯಂತ ಸೂಕ್ತ ಎಂಬ ನಮ್ಮ ಅನಿಸಿಕೆ. ಈ ವ್ಯಕ್ತಿ ಹೀಗೆ ಹ್ಯಾಂಡ್​ಮೇಡ್​ ತಕ್ಕಡಿಯೊಂದನ್ನು ತಯಾರಿಸಿಕೊಂಡು ಒಂದು ಬದಿ ಆಹಾರ ಇನ್ನೊಂದು ಬದಿ ಪಾನೀಯವನ್ನಿಟ್ಟುಕೊಂಡು ಕುಳಿತಿದ್ದಾನೆ. ಇಷ್ಟೆಲ್ಲ ಬಗೆಯ ಡಯೆಟ್​​ಗಳ ಮಧ್ಯೆ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲಕ್ಕೆ ಬಿದ್ದು ತನ್ನ ಡಯೆಟ್​ ಅನ್ನು ತಾನೇ ಸಂಶೋಧಿಸಿಕೊಂಡಿದ್ದಾನೋ ಏನೋ. ನೆಟ್ಟಿಗರಂತೂ ಉರುಳಾಡಿ ನಗುತ್ತಿದ್ದಾರೆ.

ಇದನ್ನೂ ಓದಿ : Viral Video: ಜಗಳವಾಡೋದನ್ನು ಮಾತ್ರ ಇಲ್ಲಿ ಉಚಿತವಾಗಿ ಕಲಿಸಿಕೊಡಲಾಗುವುದು

ಅಯ್ಯೋ ಈ ಮನುಷ್ಯ 2035ನ್ನುಈಗಲೇ ಬದುಕುತ್ತಿದ್ದಾನೆ. ಚಿಂತೆ ಮಾಡಬೇಡ ನಿನ್ನ ಲಿವರ್​ನ ಕಾಳಜಿಯನ್ನು ನಾನು ತೆಗೆದುಕೊಳ್ಳುತ್ತೇನೆ, ಮಜಾಮಾಡು. ಈ ಐಡಿಯಾ ಕೊಟ್ಟಿದ್ದಕ್ಕೆ ಧನ್ಯವಾದ, ನಾನಿನ್ನು ಡಯೆಟೀಷಿಯನ್​ ಅಪಾಯಿಂಟ್​ಮೆಂಟ್​ ತೆಗೆದುಕೊಳ್ಳುವುದೇ ಇಲ್ಲ. ಹೀಗೆ ನೆಟ್ಟಿಗರನೇಕರು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ : Viral:ಹಿಟ್ಲರನಿಗೆ ಜಯವಾಗಲಿ!; ಎಂದು ಕೆಲಸಗೇಡಿ ಕೆಲಸ ಕಳೆದುಕೊಂಡ ಕತೆ

ಈ ಬಾಟಲ್​ ಹೀಗೆ ಅಡ್ಡಡ್ಡ ನಿಲ್ಲಲು ಹೇಗೆ ಸಾಧ್ಯ? ಪಕ್ಕದಲ್ಲಿ ಯಾರೋ ಇದನ್ನ ಹಿಡಿದುಕೊಂಡಿರಬೇಕು. ಇದು ಅತ್ಯಂತ ಬುದ್ಧಿವಂತಿಕೆಯಿಂದ ಕೂಡಿದ ಐಡಿಯಾ, ನಿಮಗೆಂದಾದರೂ ಹೊಳೆದಿತ್ತಾ? ಹೀಗೆ ಇನ್ನೂ ಕೆಲವರು ಹೇಳುತ್ತಿದ್ದಾರೆ. ಈಗ ಹೇಳಿ ಈ ತೂಕದ ಡಯೆಟ್​ ಬಗ್ಗೆ ನೀವೇನು ಹೇಳುತ್ತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:39 am, Sat, 27 May 23

ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್