AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮನೆ ಕೆಲಸದಾಕೆಯ ಜೊತೆಗೆ ಬಸ್ ಏರಿ ಕುಳಿತ ಶ್ವಾನ

ಮನೆ ಕೆಲಸದಾಕೆ, ತಾನು ಊರಿಗೆ ಹೋಗುವ ಸಲುವಾಗಿ ಬಸ್ಸಿನಲ್ಲಿ ಕುಳಿತಿರುತ್ತಾರೆ. ತನ್ನನ್ನು ಆರೈಕೆ ಮಾಡುವ ಜೀವ ನನ್ನನ್ನು ಬಿಟ್ಟು ಹೋಗುತ್ತಿದೆ ಎಂದು ತಿಳಿದು, ನಾಯಿ ಕೂಡಾ ಅವರ ಜೊತೆಗೆ ಬಸ್ಸಿನಲ್ಲಿ ಪ್ರಯಾಣಿಸಲು ಸಿದ್ಧವಾಗುತ್ತದೆ. ಈ ಸ್ವಾರ್ಥವಿಲ್ಲದ ನಿಷ್ಕಲ್ಮಶ ಶ್ವಾನ ಪ್ರೇಮದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ಮನೆ ಕೆಲಸದಾಕೆಯ ಜೊತೆಗೆ ಬಸ್ ಏರಿ ಕುಳಿತ ಶ್ವಾನ
ವೈರಲ್​​​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:May 27, 2023 | 3:42 PM

ನೀಯತ್ತಿಗೆ ಇನ್ನೊಂದು ಹೆಸರೇ ನಾಯಿ. ಅವುಗಳು ತನಗೆ ಹಸಿವಿನ ಸಮಯದಲ್ಲಿ ಒಂದು ತುತ್ತು ಅನ್ನ ನೀಡಿದವರನ್ನು ಜೀವನಪರ್ಯಂತ ನೆನಪಿಟ್ಟುಕೊಳ್ಳುತ್ತವೆ. ತನ್ನನು ಸಾಕುವವರಿಗೆ ತನ್ನ ಪ್ರೀತಿಯನ್ನು ಧಾರೆಯೆರೆಯುತ್ತವೆ ಶ್ವಾನಗಳು ಮನುಷ್ಯನಿಗೆ ಅತಿಯಾದ ಪ್ರೀತಿಯನ್ನು ತೋರಿಸುತ್ತದೆ. ಕೆಲವೊಂದು ಬಾರಿ ಸಾಕುನಾಯಿಗಳು ಮಕ್ಕಳಂತೆ ಹಠ ಕೂಡಾ ಮಾಡುವುದುಂಟು. ಈ ಮುದ್ದಾದ ಹಠ ಮತ್ತು ನಿಷ್ಕಲ್ಮಶ ಶ್ವಾನ ಪ್ರೀತಿಯನ್ನು ನಾವೆಲ್ಲರೂ ಚಾರ್ಲಿ 777 ಚಿತ್ರದಲ್ಲಿ ನೋಡಿರುತ್ತೇವೆ. ಇದೇ ರೀತಿಯ ಶ್ವಾನ ಪ್ರೇಮದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಅಮ್ಮುಂಜೆ ಎಂಬ ಊರಿನಲ್ಲಿ ಚಾರ್ಲಿ ಸಿನಿಮಾದಂತೆ ಶ್ವಾನ ಪ್ರೇಮದ ಘಟನೆ ನಡೆದಿದ್ದು, ಲ್ಯಾಬ್ರಿಡಾರ್ ತಳಿಯ ನಾಯಿಯನ್ನು ಆರೈಕೆ ಮಾಡುತ್ತಿದ್ದ ಮನೆಕೆಲಸದಾಕೆ ತನ್ನ ಊರಿಗೆ ಹೋಗುವ ಸಲುವಾಗಿ ಸರ್ಕಾರಿ ಬಸ್ ಹತ್ತಿ ಕುಳಿತಿರುತ್ತಾರೆ. ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾಕೆ ನನ್ನನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ತಿಳಿದ ನಾಯಿ ಕೂಡಾ ಆಕೆಯ ಜೊತೆಗೆ ಬಸ್ ಹತ್ತಿ ಕುಳಿತುಕೊಳ್ಳುತ್ತದೆ. ಆ ಶ್ವಾನದ ಪ್ರೀತಿ ಎಷ್ಟು ಪರಿಶುದ್ಧವಾದದ್ದು ಎಂದರೆ, ಕಂಡಕ್ಟರ್, ಸೇರಿದಂತೆ ಅಲ್ಲಿದ್ದವರು ನಾಯಿಯನ್ನು ಬಸ್ಸಿನಿಂದ ಇಳಿಸಲು ಎಷ್ಟು ಪ್ರಯತ್ನಪಟ್ಟರೂ ಅದು ಸಾಧ್ಯವಾಗುವುದಿಲ್ಲ, ಕೊನೆಗೆ ಒಬ್ಬ ವ್ಯಕ್ತಿ ಬಂದು ಕೆಳಗೆ ಇಳಿಯುವಂತೆ ನಾಯಿಗೆ ಗದರುತ್ತಾರೆ. ನನ್ನನ್ನೇ ಇಳಿಯಲು ಹೇಳುತ್ತಿರಾ ಎಂದು ಕೋಪಗೊಂಡ ನಾಯಿ, ಆ ವ್ಯಕ್ತಿಗೆ ಬೊಗಳುತ್ತದೆ. ಯಾರು ಏನೇ ಮಾಡಿದರು, ನಾಯಿ ಮಾತ್ರ ತನ್ನನ್ನು ಮುದ್ದು ಮಾಡುವ, ತನಗೆ ಪ್ರೀತಿ ನೀಡುವ ಕೆಲಸದಾಕೆಯನ್ನು ಬಿಟ್ಟು ಬಸ್ಸಿನಿಂದ ಇಳಿಯಲು ಒಪ್ಪಲೇ ಇಲ್ಲ. ಕೊನೆಗೂ ಈ ಮುದ್ದಾದ ನಾಯಿಯ ಹಠಕ್ಕೆ ಮಣಿದು, ಆ ಮಹಿಳೆ ಬಸ್ಸಿನಿಂದ ಇಳಿಯಬೇಕಾಯಿತು. ಅವರು ಇಳಿಯುತ್ತಿದ್ದಂತೆ ನಾಯಿ ಕೂಡಾ ತಕ್ಷಣವೇ ಅವರ ಹಿಂದೆ ಬಸ್ಸಿನಿಂದ ಇಳಿದು, ಆಕೆಯನ್ನು ಖುಷಿಯಿಂದ ಮನೆಗೆ ಕರೆದುಕೊಂಡು ಹೋಗುತ್ತದೆ. ನೋಡಿ, ಮನುಷ್ಯ ಕೇವಲ ಸಾವಿವೆಯಷ್ಟು ಪ್ರೀತಿಯನ್ನು ಕೊಟ್ಟರೆ ಸಾಕು, ಆ ಸಾಕು ಪ್ರಾಣಿಗಳು ತನ್ನ ಮಾಲೀಕರಿಗೆ ಪ್ರೀತಿಯ ಧಾರೆಯೆರೆಯುತ್ತವೆ. ಯಾವುದೇ ಸಂದರ್ಭದಲ್ಲೂ ತನ್ನನ್ನು ಆರೈಕೆ ಮಾಡಿದವರನ್ನು ಬಿಟ್ಟುಕೊಡುವುದಿಲ್ಲ. ಅದಕ್ಕೆ ಜೀವಂತ ಉದಾಹರಣೆಯೇ ಈ ವೀಡಿಯೋ.

View this post on Instagram

A post shared by ????? ????? (@trollbogra)

ಇದನ್ನೂ ಓದಿ; Viral: ನಿದ್ರೆ ನಿಮ್ಮ ವೈಯಕ್ತಿಕ, ಆದರೆ ಸ್ವಲ್ಪ ಮೋಜಿಗಾಗಿ ಇದನ್ನು ಓದಬಹುದಲ್ಲ…

ಇನ್ಸ್ಟಾಗ್ರಾಮ್ ನಲ್ಲಿ ಟ್ರೋಲ್ ಬೊಗ್ರ ಎಂಬ ಟ್ರೋಲ್ ಪೇಜ್ ಒಂದರಲ್ಲಿ ಹರಿಬಿಡಲಾದ ಈ ವೀಡಿಯೋ ನೆಟ್ಟಿಗರ ಮೆಚ್ಚುಗೆಯನ್ನು ಗಳಿಸಿದೆ. ಇಂದು ಬೆಳಗ್ಗೆ ಪೋಸ್ಟ್ ಮಾಡಲಾದ ವೀಡಿಯೋ 16.9 ಸಾವಿರ ವೀಕ್ಷಣೆಗಳನ್ನು ಮತ್ತು 2.8 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ ಗಳೂ ಈ ವೀಡಿಯೋಗೆ ಹರಿದುಬಂದಿವೆ. ಒಬ್ಬ ಬಳಕೆದಾರರು ‘ಮಾತು ಆಡುವ ಮಾನುಷ್ಯ ನಾಯಿಗೆ ಒದಿಯುತ್ತಾನೆ, ಮಾತು ಬಾರದ ಪ್ರಾಣಿ ಆ ಮಾನವನ ಮೇಲೆ ಪ್ರೀತಿ ತೋರುತ್ತದೆ. ಎಷ್ಟು ವ್ಯತ್ಯಾಸ ಅಲ್ವಾ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ವೀಡಿಯೋದಲ್ಲಿ ಕಂಡಕ್ಟರ್ ನಾಯಿಯನ್ನು ಕಾಲಿನಿಂದ ಒದಿಯುವುದನ್ನು ಗಮನಿಸಿದ ಅನೇಕರು ಕಂಡಕ್ಟರ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 9:33 am, Sat, 27 May 23

VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ