Viral Video: ಕ್ಯಾನ್ಸರ್​ನಿಂದ ಬಳಲುತ್ತಿರುವ ಸ್ನೇಹಿತೆಗೆ ತಲೆ ಬೋಳಿಸಿಕೊಂಡು ಸಾಥ್ ನೀಡಿದ ಸ್ನೇಹಿತರು

Cancer : ಇದ್ದಕ್ಕಿದ್ದಂತೆ ಸ್ನೇಹಿತರು ಅವಳ ಮನೆಯ ಮುಂದೆ ಪ್ರತ್ಯಕ್ಷರಾಗುತ್ತಾರೆ. ಅವರೆಲ್ಲ ತಲೆ ಬೋಳಿಸಿಕೊಂಡಿದ್ದನ್ನು ಕಂಡು ಹನಿಗಣ್ಣಾಗುತ್ತಾಳೆ. ಅವರೆಲ್ಲರ ನೆತ್ತಿಯನ್ನು ಸವರಿ ಆಪ್ತತೆಯನ್ನು ವ್ಯಕ್ತಪಡಿಸುತ್ತಾಳೆ. ನೋಡಿ ಈ ವಿಡಿಯೋ.  

Viral Video: ಕ್ಯಾನ್ಸರ್​ನಿಂದ ಬಳಲುತ್ತಿರುವ ಸ್ನೇಹಿತೆಗೆ ತಲೆ ಬೋಳಿಸಿಕೊಂಡು ಸಾಥ್ ನೀಡಿದ ಸ್ನೇಹಿತರು
ತಲೆ ಬೋಳಿಸಿಕೊಂಡ ತನ್ನ ಸ್ನೇಹಿತರು ಬಾಗಿಲಲ್ಲಿ ಬಂದು ನಿಂತಾಗ
Follow us
| Updated By: ಶ್ರೀದೇವಿ ಕಳಸದ

Updated on:May 27, 2023 | 2:15 PM

Support : ಮಾರಣಾಂತಿಕ ರೋಗಗಳಿಗೆ ಈಡಾದಾಗ ಔಷಧಿ ಚಿಕಿತ್ಸೆಯೊಂದಿಗೆ ಆತ್ಮಬಲವೂ ಬೇಕಾಗುತ್ತದೆ. ಇದು ತನ್ನಷ್ಟಕ್ಕೆ ತಾನೇ ಗಟ್ಟಿಗೊಳ್ಳುವಂಥದ್ದಲ್ಲ. ವ್ಯಕ್ತಿಯನ್ನು ಸುತ್ತುವರಿದ ಸ್ನೇಹಿತರು, ಸಂಬಂಧಿಕರು ನೀಡುವ ಭಾವನಾತ್ಮಕ ಆಸರೆಯಿಂದಾಗಿ ಇದು ರೂಪುಗೊಳ್ಳುವಂಥದ್ದು. ಇತ್ತೀಚೆಗಷ್ಟೇ ಕ್ಷೌರಿಕನೊಬ್ಬ ಕ್ಯಾನ್ಸರ್ (Cancer) ಪೀಡಿತ ತನ್ನ ತಾಯಿಯ ತಲೆಯನ್ನು ಬೋಳಿಸುವಾಗ ತನ್ನ ತಲೆಯನ್ನೂ ಬೋಳಿಸಿಕೊಂಡ. ಜೊತೆಗೆ ಅವನ ಸಹೋದ್ಯೋಗಿಗಳೂ ಬೋಳಿಸಿಕೊಂಡು ತಾಯಿಗೆ ಅಭಯ ನೀಡಿದರು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ಹದಿಹರೆಯದ ಹುಡುಗಿಯೊಬ್ಬಳು ಕ್ಯಾನ್ಸರ್​ಗೆ ತುತ್ತಾಗಿದ್ದಾಳೆ.

ಯಾರೂ ಒಬ್ಬರೇ ಹೋರಾಡುವುದಿಲ್ಲ. ಇನ್ನು ನೀವು ಸ್ನೇಹಿತರನ್ನು ಹೊಂದಿದ್ದರೆ ಸರ್ವಸ್ವವೂ ನಿಮ್ಮಲ್ಲಿದೆ ಎಂದರ್ಥ ಎಂಬ ಒಕ್ಕಣೆ ಈ ಟ್ವೀಟ್​ಗಿದೆ.  ಇದ್ದಕ್ಕಿದ್ದಂತೆ ಅವಳ ಸ್ನೇಹಿತರು ಅವಳ ಮನೆಯ ಮುಂದೆ ಪ್ರತ್ಯಕ್ಷರಾಗುತ್ತಾರೆ. ಅವಳಂತೆಯೇ ತಲೆಬೋಳಿಸಿಕೊಂಡಿದ್ದನ್ನು ನೋಡಿದ ಆಕೆ ಅಚ್ಚರಿಗೆ ಒಳಗಾಗಿ ಕ್ರಮೇಣ ಭಾವುಕಳಾಗುತ್ತಾಳೆ. ಅವರೆಲ್ಲರ ನೆತ್ತಿಯನ್ನು ಸವರಿ ಆಪ್ತತೆಯನ್ನು ವ್ಯಕ್ತಪಡಿಸುತ್ತಾಳೆ.

ಇದನ್ನೂ ಓದಿ : Viral: ಎಲ್ಲ ಪ್ರೀತಿಗಾಗಿ; ಭಾರತದಿಂದ ಸ್ವಿಡನ್​ಗೆ 5 ತಿಂಗಳುಗಳ ಕಾಲ ಸೈಕಲ್​ ಪ್ರಯಾಣ ಮಾಡಿದ ಈ ಕಲಾವಿದ

ಮನುಷ್ಯ ಪರಸ್ಪರ ಬಯಸುವುದು ಸಹಾನುಭೂತಿ. ಅದಿನ್ನೂ ನಮ್ಮ ನಡುವೆ ಜೀವಂತವಾಗಿರುವುದಕ್ಕೇ ಮನುಕುಲ ತಕ್ಕಮಟ್ಟಿಗೆ ಶಾಂತಿಯನ್ನು ಕಾಪಾಡಿಕೊಂಡಿದೆ. ಈ ಆಪ್ತಕ್ಷಣಗಳನ್ನು ನೋಡಿದ ನೆಟ್ಟಿಗರು ಈ ಎಳೆಯರನ್ನು ಶ್ಲಾಘಿಸಿದ್ದಾರೆ. ಮಾನವೀಯತೆಗೆ ಇಷ್ಟು ಸಾಕು, ಇಂಥ ಸಹೃದಯತೆ ಇವರನ್ನು ಅತೀ ಎತ್ತರಕ್ಕೆ ಬೆಳೆಯುವಂತೆ ಮಾಡುತ್ತದೆ. ಇಂಥವರ ಸಂತತಿ ಸಾವಿರವಾಗಲಿ ಅಂತೆಲ್ಲ ಅನೇಕರು ಹರಸಿದ್ಧಾರೆ.

ಇದನ್ನೂ ಓದಿ : Viral: ‘ಸರಳ’ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!

ಈ ಹೆಣ್ಣುಮಗು ಆದಷ್ಟು ಬೇಗ ಗುಣವಾಗುವುದಕ್ಕೆ ಇಂಥ ಸ್ನೇಹಿತರ ಒತ್ತಾಸೆ ಅತ್ಯವಶ್ಯ, ಕ್ಯಾನ್ಸರ್​ ಅನ್ನು ಈಕೆ ಹಿಮ್ಮೆಟ್ಟಲಿ. ಭಯಂಕರ ರೋಗಕ್ಕೆ ತುತ್ತಾದಾಗ ಧೃತಿಗೆಡದಂತೆ ಕಾಪಾಡುವವರೇ ಆಪ್ತರು ಮತ್ತು ಸ್ನೇಹಿತರು, ಎಂದು ಹಲವಾರು ಜನ ಹೇಳಿದ್ದಾರೆ. ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ ಎನ್ನುವುದೇ ಎಷ್ಟೋ ರೋಗಗಳಿಗೆ ದಿವ್ಯೌಷಧಿ. ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:07 pm, Sat, 27 May 23