AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಎಲ್ಲ ಪ್ರೀತಿಗಾಗಿ; ಭಾರತದಿಂದ ಸ್ವಿಡನ್​ಗೆ 5 ತಿಂಗಳುಗಳ ಕಾಲ ಸೈಕಲ್​ ಪ್ರಯಾಣ ಮಾಡಿದ ಈ ಕಲಾವಿದ

Love Story : 1975ರಲ್ಲಿ ತನ್ನ ಪೋರ್ಟ್ರೇಟ್​ ಚಿತ್ರಿಸಿಕೊಡಬೇಕೆಂದು ಈಕೆ ಸ್ವಿಡನ್​ನಿಂದ ಭಾರತಕ್ಕೆ ವ್ಯಾನಿನಲ್ಲಿ ಪ್ರಯಾಣಿಸಿದರು. 1977ರಲ್ಲಿ ಕಲಾವಿದ ಪ್ರದ್ಯುಮ್ನ ಸೈಕಲ್ ಏರಿ ಸ್ವಿಡನ್​ಗೆ ಪ್ರಯಾಣಿಸಿ ಈಕೆಯನ್ನು ತಲುಪಿದರು. ಓದಿ ಈ ಪ್ರೇಮಕಥೆ.

Viral: ಎಲ್ಲ ಪ್ರೀತಿಗಾಗಿ; ಭಾರತದಿಂದ ಸ್ವಿಡನ್​ಗೆ 5 ತಿಂಗಳುಗಳ ಕಾಲ ಸೈಕಲ್​ ಪ್ರಯಾಣ ಮಾಡಿದ ಈ ಕಲಾವಿದ
ಭಾರತದಿಂದ ಸ್ವೀಡನ್​ಗೆ ಸೈಕಲ್​ ಮೇಲೆ ಪ್ರಯಾಣಿಸಿದ
TV9 Web
| Edited By: ಶ್ರೀದೇವಿ ಕಳಸದ|

Updated on:May 26, 2023 | 2:15 PM

Share

Viral News : ಪ್ರೀತಿ ಎಂದರೇನು? ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬೆರಳಾಡಿಸುವ ನೀವು ಹಲವಾರು ಬಗೆಯ ವ್ಯಾಖ್ಯಾನಗಳನ್ನು ಓದಿರುತ್ತೀರಿ ಕೇಳಿರುತ್ತೀರಿ. ಆದರೆ ಪ್ರೀತಿ ಎನ್ನುವುದು ಅನುಭವಕ್ಕೆ ಸಂಬಂಧಿಸಿದ್ದು. ಒಂದೇ ಮಾತಿನಲ್ಲಿ, ಹಿಡಿತದಲ್ಲಿ ಅದು ಸಿಗುವಂಥದ್ದಲ್ಲ. ಆದರೂ ಅದೊಂದು ಚೈತನ್ಯ ಮತ್ತು ಶಕ್ತಿ ಎಂದು ಹೇಳಬಹುದು. ಭಾರತೀಯ ಮೂಲದ ಚಿತ್ರಕಲಾವಿದ ಪ್ರದ್ಯುಮ್ನ ಕುಮಾರ್ ಮಹಾನಂದಿಯಾ ಸ್ವೀಡಿಷ್ ಮಹಿಳೆ ಚಾರ್ಲೆಟ್​ನೊಂದಿಗೆ ವಾಸಿಸಲು ಸೈಕಲ್​ ಮೇಲೆ ಸುಮಾರು 5 ತಿಂಗಳಗಳ ಕಾಲ ಪ್ರಯಾಣ ಮಾಡಿದ ಚೈತನ್ಯದ ಯಾತ್ರೆ ಇದಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by @mignonettetakespictures

1975ರಲ್ಲಿ ಭಾರತೀಯ ಕಲಾವಿದರಾದ ಪ್ರದ್ಯುಮ್ನರ ಚಿತ್ರಕಲೆಗೆ ಸ್ವಿಡನ್​ನ 19ರ ಯುವತಿ ಚಾರ್ಲೆಟ್ ಮಾರುಹೋದರು. ಆಗ ಆ ಕಲಾವಿದರನ್ನು ಭೇಟಿಯಾಗಲೇಬೇಕು, ಅವರ ಕಲಾಕೃತಿಗಳನ್ನು ನೋಡಲೇಬೇಕು ಮತ್ತು ತನ್ನ ಪೋರ್ಟ್ರೇಟ್​ ಅನ್ನು ಅವರಿಂದ ಚಿತ್ರಿಸಿಕೊಳ್ಳಬೇಕು ಎಂಬ ಹಂಬಲ ಆಕೆಯಲ್ಲಿ ಹೆಚ್ಚಿತು. ತಡಮಾಡದೆ ಆಕೆ 22 ದಿನಗಳ ಕಾಲ ವ್ಯಾನ್​ನಲ್ಲಿ ಪ್ರಯಾಣಿಸಿ ಭಾರತ ತಲುಪಿದರು. ನಂತರ ಪೋರ್ಟ್ರೇಟ್​ ಚಿತ್ರಿಸುತ್ತಿರುವ ದಿನಗಳಲ್ಲೇ ಆಕೆಯ ಚೆಲುವು ಪ್ರದ್ಯುಮ್ನ ಅವರನ್ನು ಗಾಢವಾಗಿ ಸೆಳೆಯಿತು, ಪರಸ್ಪರ ಪ್ರೀತಿಯೂ ಬೆಳೆಯಿತು. ತಡಮಾಡದೆ ಅವರಿಬ್ಬರೂ ಮದುವೆಯಾದರು. ಆದರೆ ಚಾರ್ಲೆಟ್​ ಒಬ್ಬಳೇ ಮರಳಿ ಸ್ವೀಡನ್​ಗೆ ಪ್ರಯಾಣಿಸಬೇಕಾದ ಸಂದರ್ಭ ಸೃಷ್ಟಿಯಾಯಿತು.

ಇದನ್ನೂ ಓದಿ : Viral Video:ಸೆರಗನ್ನು ಮೇಲೇರಿಸಿಕೊಳ್ಳಿ!; ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ನಂತರ ಪ್ರದ್ಯುಮ್ನ ಅವರಿಗೆ ಚಾರ್ಲೆಟ್​ ಅವರಿಂದ ದೂರವಿರುವುದು ಸಾಧ್ಯವಾಗಲಿಲ್ಲ. 1977ರ ಜನವರಿಯಂದು ತನ್ನೆಲ್ಲಾ ಆಸ್ತಿಯನ್ನು ಮಾರಿ ಒಂದು ಸೈಕಲ್​ ಕೊಂಡುಕೊಂಡರು. ಭಾರತದಿಂದ ಸ್ವಿಡನ್​​ಗೆ ಸೈಕಲ್​ ಪ್ರಯಾಣದ ಮೂಲಕ ಹೆಂಡತಿ ಚಾರ್ಲೆಟ್​ಅನ್ನು ತಲುಪಿದರು. ದಿನಕ್ಕೆ  70 ಕಿ.ಮೀ ಪ್ರಯಾಣಿಸುತ್ತಿದ್ದ ಪ್ರದ್ಯುಮ್ನ ಸ್ವೀಡನ್​ ತಲುಪಲು ನಾಲ್ಕು ತಿಂಗಳುಗಳ ಮೇಲೆ 3 ವಾರಗಳನ್ನು ತೆಗೆದುಕೊಂಡರು. ನಂತರ ಅವರು ಇಬ್ಬರು ಮಕ್ಕಳ ತಂದೆತಾಯಿಯಾದರು. ಎಲ್ಲರೂ ಒಟ್ಟಿಗೇ ವಾಸಿಸತೊಡಗಿದರು.

ಇದನ್ನೂ ಓದಿ : Viral Video: ಇದೊಂದಿದ್ದರೆ ಯಾರೂ ಏನನ್ನೂ ಚಿವುಟಬಹುದು ಕತ್ತರಿಸಬಹುದು ಸುಲಿಯಬಹುದು!

ಈ ಪೋಸ್ಟ್ ಅನ್ನು ಮೇ 5ರಂದು ಇನ್​ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿತ್ತು. ಸುಮಾರು 2 ಲಕ್ಷ ಜನರು ಇದನ್ನು ಹಂಚಿಕೊಂಡಿದ್ದರು. ಸಾವಿರಾರು ಜನರು ಪ್ರತಿಕ್ರಿಯಿಸಿದ್ದರು. ಇದೀಗ ಮತ್ತೆ ವೈರಲ್ ಆಗುತ್ತಿದೆ. ಪ್ರದ್ಯುಮ್ನ ಅವರ ಬದ್ಧತೆ ಮತ್ತು ಪ್ರೀತಿ ನಿಜಕ್ಕೂ ಶ್ಲಾಘನೀಯ. ಚೈತನ್ಯಯುತ ವ್ಯಕ್ತಿ ಇವರಾಗಿದ್ದಾರೆ. ಇದೇ ಶುದ್ಧ ಪ್ರೀತಿ ಎಂದು ಅನೇಕರು ಹೇಳಿದ್ದಾರೆ. ನಿಮ್ಮಿಬ್ಬರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ ಹಲವಾರು ಜನ. ಪ್ರೀತಿ ಎನ್ನುವುದು ಹೀಗೇ. ಅದಕ್ಕಾಗಿ ಏನನ್ನೂ ಮಾಡಲು ವ್ಯಕ್ತಿಗೆ ಶಕ್ತಿ ನೀಡುತ್ತದೆ ಎಂದಿದ್ದಾರೆ. ಒಬ್ಬರು. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:12 pm, Fri, 26 May 23

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!