Video: ಗೌರವ ಡಿಪ್ಲೊಮಾ ಪದವಿ ಪಡೆದ US ವಿದ್ಯಾರ್ಥಿನಿಯ ಸೇವಾ ಶ್ವಾನ
ನ್ಯೂಜೆರ್ಸಿಯ ಸೆಟಾನ್ ಹಾಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಜಸ್ಟಿನ್ ಎಂಬ ಸೇವಾ ನಾಯಿಯು ವೇದಿಕೆಯಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದ ಕ್ಷಣ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ.
ಕೆಲವೊಂದು ನಮ್ಮ ಸಾಧನೆಗಳಿಗೆ ಸ್ಪೂರ್ತಿ ತುಂಬಾ ಶಕ್ತಿಗಳು ಬೇಕು, ನಮ್ಮ ಭಾವನೆಗಳಿಗೆ ತುಂಬಾ ಹತ್ತಿರುವ ವ್ಯಕ್ತಿಗಳ ಜತೆಗೆ, ಪ್ರಾಣಿಗಳು ನಮ್ಮ ಸಾಧನೆಗೆ ಸ್ಪೂರ್ತಿಯಾಗುತ್ತದೆ ಎಂಬುದಕ್ಕೆ ಈ ಶ್ವಾನದ ವೀಡಿಯೊ ಸಾಕ್ಷಿ, ಹೌದು ಮನುಷ್ಯ ಮತ್ತು ಶ್ವಾನದ ಯಾವ ಜನ್ಮದ ನಂಟು ಗೊತ್ತಿಲ್ಲ, ಆದರೆ ಅನೇಕರ ಜೀವನದ ಪ್ರಾರಂಭದಿಂದ ಕೊನೆಯ ತನಕ ಜತೆಯಾಗಿರುವುದು ಶ್ವಾನಗಳು, ಇಲ್ಲೊಂದು ಅಮೆರಿಕದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನ್ಯೂಜೆರ್ಸಿಯ ಸೆಟಾನ್ ಹಾಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಜಸ್ಟಿನ್ ಎಂಬ ಸೇವಾ ನಾಯಿಯು ವೇದಿಕೆಯಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದ ಕ್ಷಣ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ.
ವೈರಲ್ ವೀಡಿಯೊವನ್ನು ನೋಡಿ ಜನರು ಈ ವಿಚಾರವನ್ನು ಶ್ಲಾಘಿಸುತ್ತಿದ್ದಾರೆ, ಇದನ್ನು ಸಂಸ್ಥೆಯು ಕೂಡ ಟ್ವಿಟರ್ನಲ್ಲಿಯೂ ಹಂಚಿಕೊಂಡಿದೆ ಮತ್ತು ಜಸ್ಟಿನ್ ಎಂಬ ಶ್ವಾನ ತನ್ನ ಡಿಪ್ಲೊಮಾ ಪದವಿಯನ್ನು ಸ್ವೀಕರಿಸುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.
Seton Hall President Joseph E. Nyre, Ph.D. presents Justin, the service dog for Grace Mariani, of Mahwah, NJ, with a diploma for attending all of Grace’s classes at Seton Hall. pic.twitter.com/sZgHD5Fs3X
— Seton Hall (@SetonHall) May 23, 2023
ವೀಡಿಯೊದಲ್ಲಿ, ಸೆಟಾನ್ ಹಾಲ್‌ನ ಜೋಸೆಫ್ ಇ. ನೈರ್ ಗ್ರೇಸ್ ಮರಿಯಾನಿ ಮತ್ತು ಜಸ್ಟಿನ್ ಪದವಿ ಪತ್ರವನ್ನು ಪಡೆಯುವುದನ್ನು ಕಾಣಬಹುದು. ಮರಿಯಾನಿ ಅವರು ಸ್ವಲ್ಪ ವಿಕಲಚೇತನ ಯುವತಿ, ತನ್ನ ಪ್ರತಿ ಕ್ಷಣದಲ್ಲೂ ಜಸ್ಟಿನ್ ಇತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:Viral Video: ವಯಸ್ಸಾದ ತಾಯಿಯನ್ನು ಅವರ ತವರಿಗೆ ಕರೆದುಕೊಂಡು ಹೋದ ಮಗ; ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ!
ಸಿಬಿಎಸ್ ನ್ಯೂಸ್ ಪ್ರಕಾರ, ಜಸ್ಟಿನ್ ಈ ಪದವಿ ಪತ್ರವನ್ನು ಪಡೆಯುವಾಗ ಅಲ್ಲಿದ್ದ ಅನೇಕರು ಚಪ್ಪಾಳೆ ಮೂಲಕ ಹುರಿದುಂಬಿಸಿದ್ದರು, ಇನ್ನೂ ಜಸ್ಟಿನ್ ಮರಿಯಾನಿ ಜತೆಗೆ ಆಕೆಯ ಕ್ಲಾಸ್ಗೆ ಬಂದು ಕುಳಿತುಕೊಳ್ಳುತ್ತಿತ್ತು. ಇದೀಗ ಮರಿಯಾನಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆಕೊಂಡಿದ್ದಾರೆ.
ಇನ್ನೂ ವೀಡಿಯೊವನ್ನು ನೋಡಿ ಅನೇಕರು ಎಂತಹ ಅದ್ಭುತ ಕ್ಷಣ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಇದು ನಾನು ನೋಡಿದ ಅತ್ಯಂತ ಮಧುರವಾದ ವಿಷಯ ಎಂದು ಹೇಳಿದ್ದಾರೆ. ಇನ್ನೂ ಅದೇ ಕಾಲೇಜಿನ ಮರಿಯಾನಿ ಮತ್ತು ಜಸ್ಟಿನ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ