House Fire: ಬೆಳಗಾದರೆ ಮದುವೆ ಎನ್ನುವ ಖುಷಿಯಲ್ಲಿ ಮಲಗಿದ್ದ ಮದುಮಗಳು ಮತ್ತೆ ಏಳಲೇ ಇಲ್ಲ
ಬೆಳಗಾದರೆ ಮದುವೆ(Marriage) ಎನ್ನುವ ಖುಷಿಯಲ್ಲಿ ಮಲಗಿದ್ದ ಮಧುಮಗಳು ಏಳಲೇ ಇಲ್ಲ, ಬೆಳಗಿನ ಜಾವ 4 ಗಂಟೆಯ ವೇಳೆಗೆ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 19 ವರ್ಷದ ಯುವತಿ ಮೃತಪಟ್ಟಿದ್ದಾಳೆ.
ಬೆಳಗಾದರೆ ಮದುವೆ(Marriage) ಎನ್ನುವ ಖುಷಿಯಲ್ಲಿ ಮಲಗಿದ್ದ ಮಧುಮಗಳು ಏಳಲೇ ಇಲ್ಲ, ಬೆಳಗಿನ ಜಾವ 4 ಗಂಟೆಯ ವೇಳೆಗೆ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 19 ವರ್ಷದ ಯುವತಿ ಮೃತಪಟ್ಟಿದ್ದಾಳೆ. ಇದು ಅಮೆರಿಕದಲ್ಲಿ ನಡೆದ ಘಟನೆಯಾಗಿದೆ, ಮೇ 23 ರಂದು ಬೆಳಗಿನ ಜಾವ ಸುಮಾರು 4 ಗಂಟೆಯ ವೇಳೆಗೆ ರೀಡ್ಸ್ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ಯುವತಿ ನಿದ್ರಿಸುತ್ತಿದ್ದಳು. ಹೊಗೆಯಿಂದಾಗಿ ಉಸಿರುಗಟ್ಟಿ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಮೃತಪಟ್ಟಿದ್ದಾಳೆ.
ಮರುದಿನ ಬೆಳಗ್ಗೆಯೇ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗುವವರಿದ್ದರು. ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ, ಆ ಮನೆ ವರನ ಅಜ್ಜಿಗೆ ಸೇರಿದ್ದಾಗಿದೆ.
ಮತ್ತಷ್ಟು ಓದಿ: ಬೆಂಗಳೂರಲ್ಲಿ ಮೊತ್ತೊಂದು ಅಗ್ನಿ ಅವಘಡ: ಐದಾರು ಗುಜರಿ ಗೋಡೌನ್‌ಗಳಿಗೆ ಹೊತ್ತಿಕೊಂಡ ಬೆಂಕಿ
ಬೆಳಗ್ಗೆ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಮನೆಗೆ ಬೆಂಕಿ ಆವರಿಸಿತ್ತು. ಮನೆಯೊಳಗಿದ್ದ ಮೂವರ ಆರೋಗ್ಯವೂ ಹದಗೆಟ್ಟಿದೆ. ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಕಾರಣ ಎಷ್ಟೇ ಕಿರುಚಾಡಿದರೂ ಆಕೆಯನ್ನು ರಕ್ಷಿಸುವಲ್ಲಿ ಸೋತರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ