ಪ್ರೇಯಸಿಯೊಂದಿಗೆ ಇರಲು ಪತ್ನಿಗೆ ವಿಷ ಉಣಿಸಿ ಕೊಂದ ದಂತವೈದ್ಯ: ಫೋನ್ ಹಿಸ್ಟರಿ ನೋಡಿ ಬೆಚ್ಚಿಬಿದ್ದ ಪೊಲೀಸರು!
ಕೊಲೊರಾಡೋ ಅಧಿಕಾರಿಗಳ ಪ್ರಕಾರ, ಪ್ರೇಯಸಿಯೊಂದಿಗೆ ಭವಿಷ್ಯದ ಯೋಜನೆಗಳನ್ನು ರೂಪಿಸಿದ್ದರಿಂದ ಕ್ರೇಗ್ ತನ್ನ ಪತ್ನಿಗೆ ಸಣ್ಣ ಪ್ರಮಾಣದ ವಿಷವನ್ನು ಹಲವು ದಿನಗಳಿಂದ ಉಣಿಸಿ ನಿಧಾನವಾಗಿ ಸಾಯುವಂತೆ ಮಾಡಿದ್ದ.
ಪ್ರೀತಿಗಾಗಿ ಜನ ಏನೇನೋ ಹೆಜ್ಜೆ ಇಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ ಆದರೆ ಇಲ್ಲೊಬ್ಬ ವ್ಯಕ್ತಿ ಪ್ರೀತಿಸಿದವಳ ಜೊತೆ ಇರಲು ಸ್ವಂತ ಹೆಂಡತಿಯನ್ನೇ ಕೊಲೆ ಮಾಡಿರುವುದು ಬೆಳಕಿದೆ ಬಂದಿದೆ. ಅಮೆರಿಕಾದ 45 ವರ್ಷದ ದಂತವೈದ್ಯ (Dentist) ಜೇಮ್ಸ್ ಟೋಲಿವರ್ ಕ್ರೇಗ್ (James Toliver Craig) ತನ್ನ ಪತ್ನಿಯ ಪ್ರೋಟೀನ್ ಶೇಕ್‌ಗೆ ಆರ್ಸೆನಿಕ್ ಮತ್ತು ಸೈನೈಡ್ (Cyanide) ಬೆರೆಸಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪದಡಿ ಪೋಲಿಸಿರು ಅರೆಸ್ಟ್ ಮಾಡಿದ್ದಾರೆ. ಅಪರಾಧದ ಹಿಂದಿನ ಉದ್ದೇಶವು ತನ್ನ ಪ್ರೇಮಿಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸುವುದಾಗಿದೆ ಎಂದು ವರದಿಯಾಗಿದೆ. ಘಟನೆಯ ನಂತರ ಮೊದಲ ಹಂತದ ಕೊಲೆ ಆರೋಪದ ಮೇಲೆ ಕ್ರೇಗ್ ಬಂಧನವನ್ನು ಅರೋರಾ ಪೊಲೀಸ್ ಇಲಾಖೆ ದೃಢಪಡಿಸಿತು.
ಕ್ರೇಗ್ ಪತ್ನಿ ಏಂಜೆಲಾ ಕ್ರೇಗ್ ಮಾರ್ಚ್ 2023 ರಲ್ಲಿ ಆಸ್ಪತ್ರ್ಯಲ್ಲಿ ಲೈಫ್ ಸಪೋರ್ಟ್ ತೆಗೆದ ಬಳಿಕ ತೀರಿ ಹೋದ ಕೆಲವು ಗಂಟೆಗಳಲ್ಲಿ ಕ್ರೇಗ್ನನ್ನು ಬಂಧಿಸಲಾಗಿದೆ. ಏಂಜೆಲಾ ಅವರು ಸಾಯುವ ಕೆಲವು ದಿನಗಳ ಮೊದಲು ಅವರ ಪತಿ ಸಿದ್ಧಪಡಿಸಿದ ಶೇಕ್ ಅನ್ನು ಸೇವಿಸಿದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದರು. ತೀವ್ರ ತಲೆನೋವು ಮತ್ತು ತಲೆತಿರುಗುವಿಕೆಯಿಂದಾಗಿ ಪತ್ನಿಯನ್ನು ಕ್ರೇಗ್ ಆಸ್ಪತ್ರೆಗೆ ಕರೆ ತಂದನು. ದುರಂತವೆಂದರೆ, ಏಂಜೆಲಾ ಕ್ರೇಗ್ ಆಸ್ಪತ್ರೆಯಲ್ಲಿ ಅದೇ ದಿನ ಸಾವನ್ನಪ್ಪಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಬಹಿರಂಗಪಡಿಸಲಾಗಿದೆ.
ಜೇಮ್ಸ್ ಕ್ರೇಗ್ ಆನ್‌ಲೈನ್‌ನಲ್ಲಿ ವಿಷಕಾರಿ ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ ಮತ್ತು ಬಂಧನ ವಾರಂಟ್ ಅಫಿಡವಿಟ್ ಪ್ರಕಾರ “ವಿಷವನ್ನು ಹೇಗೆ ತಯಾರಿಸುವುದು” ಎಂಬ ವಿಚಾರಣೆ ಸೇರಿದಂತೆ ಅವರ ಪತ್ನಿಯ ಮರಣದ ವಾರಗಳಲ್ಲಿ ಹಲವಾರು ಅನುಮಾನಾಸ್ಪದ ಇಂಟರ್ನೆಟ್ ಹುಡುಕಾಟಗಳನ್ನು ನಡೆಸಿದ್ದಾನೆ ಎಂದು ತನಿಖೆಗಳು ಬಹಿರಂಗಪಡಿಸಿದವು. ದಂಪತಿಗೆ ಆರು ಮಕ್ಕಳಿದ್ದರು.
ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪ; ಉದ್ಯಮಿ ಶ್ರೀನಿವಾಸ್ ನಾಯ್ಡು ವಿರುದ್ಧ ದೂರು ದಾಖಲು
ಏಂಜೆಲಾ ಪ್ರೇ ಕ್ರೇಗ್, ಕೊಲೊರಾಡೋ ನಿವಾಸಿ ಮತ್ತು ನಿಷ್ಠಾವಂತ ಹೆಂಡತಿ ಮತ್ತು ಆರು ಮಕ್ಕಳ ತಾಯಿ, ಅಲ್ಲದೆ ಅವರ ನಿಧನ ವಾರ್ತೆಯಲ್ಲಿ ಆಕೆಯ ಒಳ್ಳೆಯ ಗುಣವನ್ನು ಎತ್ತಿ ಹಿಡಿಯಲಾಯಿತು. ಅವಳ ತೀಕ್ಷ್ಣವಾದ ಬುದ್ಧಿ, ಪ್ರಾಣಿಗಳಿಗೆ ಆಳವಾದ ಪ್ರೀತಿ, ಉತ್ತಮ ಹಾಸ್ಯ ಪ್ರಜ್ಞೆ ಮತ್ತು ಅವಳ ಕುಟುಂಬಕ್ಕೆ ಅಚಲವಾದ ಬದ್ಧತೆಗಾಗಿ ಅವಳು ನೆನಪಿಸಿಕೊಳ್ಳಲಾಗಿದೆ. ಆದಾಗ್ಯೂ, ಆಕೆಯ ನಿಧನ ವಾರ್ತೆಯಲ್ಲಿ ಪ್ರಮುಖವಾಗಿ ಎದ್ದುಕಾಣುವ ಒಂದು ಅಸಾಧಾರಣ ಗುಣಲಕ್ಷಣವೆಂದರೆ ಆಕೆಯ ಕ್ಷಾಮ ಮನೋಭಾವ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:44 am, Sat, 27 May 23